Uncategorized

ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣ ಇಲ್ಲ: ಶಾಸಕ ದುರ್ಯೋಧನ ಐಹೊಳೆ

Share

ಚಿಕ್ಕೋಡಿ:ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಾಗಿವೆ ಅಭಿವೃದ್ದಿಗೆ ಯಾವುದೆ ಅನುದಾನ ನೀಡಿಲ್ಲ.ಜನರಿಗೆ ನೀಡಿದ ಅಶ್ವಾಸನೆ ಇಡೇರಿಸುವಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿದೆ ಎಂದು ಶಾಸಕ ದುರ್ಯೋದನ ಐಹೊಳೆ ಆರೋಪಿಸಿದರು.

ಶನಿವಾರ ಚಿಕ್ಕೋಡಿ ತಾಲೂಕಿನ ಉಮರಾಣೆ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು,ಜನರಿಗೆನೀಡಿರುವ ಎಲ್ಲಾಭರವಸೆಳನ್ನು ಕಾಂಗ್ರೆಸ ಸರಕಾರ ಇಡೇರಿಸುವಂತೆ ಒತ್ತಾಯಿಸಿದರು.
ಗ್ರಾಮದ ಆರಾದ್ಯ ದೇವರಾದ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವದು. ಅಭಿವೃದ್ದಿಗೆ ಇನ್ನು ಹೆಚ್ಚಿನ ಅನುದಾನ ನೀಡಲಾಗುವದು ಎಂದರು. ರಾಯಬಾಗ ವಿಧಾನಸಭಾ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಈಗಾಗಲೇ ಹೆಚ್ಚಿನ ಅನುದಾನ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಲಕ್ಷ್ಮಣ ಪೂಜಾರಿ,ಮುರಿಗೇಪ್ಪಾ ಅಡಿಸೇರಿ,ಮಲಗೌಡ ಪಾಟೀಲ,ಶಿವಾನಂದ ಬಾಗೇವಾಡಿ,ಕರೇಪ್ಪಾ ಇಟ್ನಾಳ,ಮಹಾದೇವ ಪೂಜಾರಿ,ಧನಪಾಲ ಭೀಮನಾಯಿಕ, ಮಹೇಶ ಕೋರೆ,ಇತರರು ಭಾಗವಹಿಸಿದ್ದರು.

Tags: