ಬೆಳಗಾವಿ ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಬಳಿ ಲೇಲೆ ಮೈದಾನ ಪರಿಶೀಲನೆ ಗೆ ಬಂದಿದ್ದ ಎಂಇಎಸ ಮುಖಂಡರಿಗೆ ಮಾರ್ಕೆಟ್ ಎಸಿಪಿ ಎನ.ವಿ.ಬರಮನಿ ಖಡಕ್ ವಾರ್ನಿಂಗ್ ಮಾಡಿದ್ದಾರೆ
ಬೆಳಗಾವಿಯ ಸುವರ್ಣಸೌಧದ ಲ್ಲಿ ಅಧಿವೇಶನ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಮಹಾಮೇಳಗೆ ಸರ್ಕಾರ ಅನುಮತಿ ಕೊಟ್ಟಿಲ್ಲ ಆದರೂ ಎಂಇಎಸ ಮುಖಂಡರು ಲೇಲೆ ಮೈದಾನ ಪರಿಶೀಲನೆ ಗೆ ಬಂದ ಸಂದರ್ಭದಲ್ಲಿ ಎಸಿಪಿ ಎನ.ವಿ.ಬರಮನಿ ಖಡಕ್ ವಾರ್ನಿಂಗ್ ಮಾಡುವ ಕೆಲಸ ಮಾಡಿದ್ದಾರೆ
ಈಗಾಗಲೇ ಪೊಲೀಸ್ ಆಯುಕ್ತರು 144 ಕಲಂ ಅಡಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ ಐದು ನಿಮಿಷ ಸಮಯ ಕೊಡ್ತಿನಿ ಇಲ್ಲಿಂದ ಹೊರಟು ಹೋಗಿ ಇಲ್ಲವಾದರೆ ಮುನ್ನಜಾಗೃತ ಕ್ರಮವಾಗಿ ಅರೇಸ್ಟ್ ಮಾಡ್ತಿವಿ ಎಂದ ಖಡಕ್ ಎಚ್ಚರಿಕೆ ನೀಡಿದ್ದಾರೆ . ಈ ಸಂದರ್ಭದಲ್ಲಿ ಎಂಇಎಸ ಮುಖಂಡರು ಕೆಲ ಕಾಲ ಪೋಲೀಸರ ಜೊತೆ ವಾಗ್ವಾದ ನಡೆಸಿದರು .