Uncategorized

ಉತ್ತರ ಕರ್ನಾಟಕ ಸಮಸ್ಯೆ ಗಳ ಚರ್ಚೆ ಗೆ, ಇತ್ಯರ್ಥಕ್ಕೆ ಒತ್ತುಕೊಡ್ತಿವಿ :ಸ್ಪೀಕರ್ ಯು.ಟಿ.ಖಾದರ್, ಸಭಾಪತಿ ಬಸವರಾಜ್ ಹೊರಟ್ಟಿ

Share

ನಾಳೆ ನಡೆಯಲಿರುವ 16 ನೇ ವಿಧಾನ‌ಮಂಡಳ ಅಧಿವೇಶನದ ನಿಮಿತ್ಯ ಸ್ಪೀಕರ್ ಯು.ಟಿ.ಖಾದರ್ ಇವತ್ತು ಬೆಳಗಾವಿ ಹೊರವಲಯದಲ್ಲಿರುವ ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿ ಪರಿಶೀಲಿಸಿದರು . ಪ್ಲೊ

ಬೆಳಗಾವಿಯ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗು ಹಲವು ಅಧಿಕಾರಿಗಳ ಜೊತೆ ಚರ್ಚಿಸಿ ವಿಧಾನಸೌಧವನ್ನು ಪರಿಶೀಲಿಸಿ ಸೂಕ್ತವಾಗಿ ಲೈಟ್ ಹಾಗು ಕಾರ್ಪೆಟಗಳ ವ್ಯವಸ್ಥೆ ಮಾಡುವಂತೆ ಆದೇಶ ಮಾಡಿದರು .ವಿಧಾನಸಭೆ ಸೌಂದರ್ಯ ಹೇಚ್ಚಿಸಲು ಎಲ.ಇ.ಡಿ ಲೈಟ್ ವ್ಯವಸ್ಥೆ ಮಾಡುವಂತೆ ಮಾರ್ಗದರ್ಶನ ಮಾಡಿದರು .

ಈ ಸಂದರ್ಭದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್ ಡಿಸೆಂಬರ್ 4 ರಿಂದ 14 ರ ವರೆಗೂ ನಡೆಯಲಿದೆ ಅಧಿವೇಶನಕ್ಕೆ ಬರೋ ಶಾಸಕರು, ಅಧಿಕಾರಿಗಳಿಗೆ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ ಉತ್ತಮವಾದ ಊಟದ ವ್ಯವಸ್ಥೆ, ಅಗತ್ಯವಾದ ವಾತಾವರಣ ನಿರ್ಮಿಸಲಾಗಿದೆ ನಮ್ಮ ಎಲ್ಲಾ ಇಲಾಖೇದವರು ಅಧಿವೇಶನಕ್ಕೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡಿಕೊಂಡಿದ್ದಾರೆ ಆಹಾರ, ಕಾಪಿ,ಟೀ ಬೇಕಾದ ಫುಡ್ ಕೋಟ್ ಮಾಡಲಾಗಿದೆ ವಿಧಾನಸಭೆ ಸೌಂದರ್ಯ ಹೇಚ್ಚಿಸಲು ಎಲ.ಇ.ಡಿ ಲೈಟ್ ವ್ಯವಸ್ಥೆ ಕಲ್ಪಿಸಲಾಗಿದೆ ಈ ಎಲ.ಇ.ಡಿ ಲೈಟ್ 10 ವರ್ಷಗಳ ಕಾಲ ನಿರ್ವಹಣೆ ಮಾಡಲಿದೆ ಈ ಹಿಂದೆ ಅಧಿವೇಶನ ಸಮಯದಲ್ಲಿ ಮಾತ್ರ ಎಲ.ಇ.ಡಿ ಲೈಟ್ ಅಳವಡಿಕೆ ಮಾಡಲಾಗುತ್ತಿತ್ತು ಆದರೆ ಈ ಬಾರಿ ಅಧಿವೇಶನ ಬಳಿಕವೂ ಪ್ರತಿ ಶನಿವಾರ, ಭಾನುವಾರ ಈ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ ಯುವಕರಿಗೆ ಹಾಗು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಇದೊಂದು ಆಕರ್ಷಣೆಯಾಗಲಿದೆ ಎಂದರು .

ಮಕ್ಕಳಿಗೆ ವಿಶೇಷವಾಗಿ ಅಧಿವೇಶನ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಕಲಾಪಗಳನ್ನ ಮಕ್ಕಳು ಅರ್ಧಗಂಟೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಮಕ್ಕಳಿಗೆ ತಂಪು ಪಾನೀಯ ಮತ್ತು ಚಾಕಲೇಟ್ ನೀಡುವ ಯೋಚನೆ ಮಾಡಿದ್ದೇವೆ ಮಕ್ಕಳು ಭವಿಷ್ಯದ ಪ್ರಜೆಗಳು ಅವರು ಖುಷಿಖುಷಿಯಿಂದ ಬಂದು ವೀಕ್ಷಣೆ ಮಾಡಬೇಕು ಸುವರ್ಣ ಸಂಭ್ರಮದ ಪ್ರಯುಕ್ತ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಳ್ವಾಸ್ ನಿಂದ ಸಾಂಸ್ಕೃತಿಕ ತಂಡ ವಿಶೇಷ ಕಾರ್ಯಕ್ರಮ ನೀಡಲಿವೆ ಅಧಿವೇಶನ ಆರಂಭಕ್ಕೂ ಮುನ್ನ ವಿಧಾನಸೌಧದ ಆವರಣದಲ್ಲಿ ಸಾಂಸ್ಕೃತಿಕ ತಂಡ ಕಾರ್ಯಕ್ರಮ ನೀಡುತ್ತವೆ ಕಲಾಪಕ್ಕೆ ಹಾಜರಾದವರಿಗೆ ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರದ ಲಾಂಚನ ಇರೋ ಟೀಮ್ ಕಪ್ ಕೊಡುತ್ತಿದ್ದೇವೆ ಈ ಅಧಿವೇಶನದಲ್ಲಿ ಅಧಿಸೂಚನೆ ಆಗಿರೋ ಮೂರು ಬಿಲ್ ಚರ್ಚೆ ಬರಲಿದೆ ಹೊಸ ಬಿಲ್ ಗಳ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ 7 ರಿಂದ 8 ಬಿಲ್ ಅಧಿವೇಶನ ವೇಳೆ ಬರಲಿದೆ ಎಂದರು ಬೈಟ್
ಎಲ್ಲಾ ಕಟ್ಟಡಗಳಲ್ಲಿ ಅಧಿವೇಶನ ನೋಡಲು ಬರುವವರಿಗೆ ಎಲ್ಲಾ ರೀತಿ ವ್ಯವಸ್ಥೆ ಮಾಡಲಾಗಿದೆ ಎಂದರು .

ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡುತ್ತಾ ಸದನಕ್ಕೆ ಶಾಸಕರು ಕಡಿಮೆ ಹಾಜರಾತಿ ಗೆ ಏನು ಮಾಡಲು ಆಗಲ್ಲ ನಾವು ಎಲ್ಲರಿಗೂ ಸದನದಲ್ಲಿ ಹೆಚ್ಚಿನ ಹಾಜರಾತಿಗೆ ಸೂಚನೆ ಕೊಡ್ತಿವಿ ಉತ್ತರ ಕರ್ನಾಟಕ ಸಮಸ್ಯೆ ಗಳ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಚರ್ಚೆಗೆ ಅವಕಾಶ ಕೊಡ್ತಿವಿ ಮಂಗಳವಾರ, ಬುಧವಾರ ಉತ್ತರ ಕರ್ನಾಟಕ ಸಮಸ್ಯೆ ಕುರಿತು ಪರಿಷತ್ ನಲ್ಲಿ ಚರ್ಚೆ ನಡೆಯಲಿದೆ ಪ್ರತಿಭಟನೆಗಳನ್ನು ಕಡಿಮೆ ಮಾಡಲು ಒತ್ತು ಕೊಡ್ತಿವಿ ಯಾವುದೇ ಕಾರಣಕ್ಕೂ ಅಧಿವೇಶನದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದರು .

ಒಟ್ಟಿನಲ್ಲಿ ನಾಳೆ ನಡೆಯಲಿರುವ 16 ನೇ ವಿಧಾನ‌ಮಂಡಳ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಸಮಗ್ರ ಚರ್ಚೆ ಆಗಲಿ ಅನ್ನುವುದೇ ಇನ್ ನ್ಯೂಸ್ ಆಶಯವಾಗಿದೆ

Tags: