Uncategorized

ಪಿಎಸ್ಐ ಪರಿಕ್ಷೆ ಮುಂದೂಡಲು ಒತ್ತಾಯಿಸಿದ ಯತ್ನಾಳ

Share

ಚಳಿಗಾಲದ ಅಧಿವೇಶನದ ಮೊದಲ ದಿನ ಪಿಎಸ್ಐ ಪರಿಕ್ಷೆ ಮುಂದೂಡಲು ಶಾಸಕ ಬಸನಗೌಡಾ ಪಾಟೀಲ ಯತ್ನಾಳ ಒತ್ತಾಯಿಸಿದರು

ಕಳೆದ ಬಿ ಜೆ ಪಿ ಸರ್ಕಾರದಲ್ಲಿ ಪೋಲಿಸ್ ಸಬ್ ಇನ್ಸಪೇಕ್ಟರ ಪರಿಕ್ಷೆಯಲ್ಲಿ ಆಕ್ರಮ ಎಸಗಿದ್ದರಿಂದ ನೆನೆಗುದಿಗೆ ಬಿದ್ದ ಪಿ ಎಸ್ ಆಯ್ ನೇಮಕಾತಿ ಪರಿಕ್ಷೆಯನ್ನು ಇದೆ ತಿಂಗಳು ಮಾಡಲು ಹೋರಟಿರುವಿರಿ ಇದರಿಂದ ವಿದ್ಯಾರ್ಥಿಗಳಿಗೆ ಪರಿಕ್ಷೆ ಬರೆಯಲು ಅವಕಾಶ ಕನಿಷ್ಟ ಆರರಿಂದ ಮೂರು ತಿಂಗಳು ಅವಕಾಶ ನೀಡಬೇಕು ತರಾತುರಿಯಲ್ಲಿ ಪರಿಕ್ಷೆ ನಡೆಸಬಾರದು ಹಾಗೂ ಈ ಹಿಂದೆ ಪಿ ಎಸ್ ಆಯ್ ಪರಿಕ್ಷೆಯ ಹಗರಣದಲ್ಲಿ ಇದ್ದ ಕಳ್ಳರನ್ನು ಒದ್ದು ಒಳ ಹಾಕಬೇಕು ಎಂದು ಏರು ದ್ವನಿಯಲ್ಲಿ ಶಾಸಕ ಬಸನಗೌಡಾ ಪಾಟೀಲ ಯತ್ನಾಳ ಸಭೆಗೆ ಒತ್ತಾಯಿಸಿದರು.

ಗೃಹ ಮಂತ್ರಿ ಜಿ ಪರಮೇಶ್ವರ ಮಾತನಾಡಿ ಹಿಂದಿನ ಸರ್ಕಾರ ಪಿ ಎಸ್ ಆಯ್ ಪರಿಕ್ಷೆಯಲ್ಲಿ ಆಕ್ರಮ ಜರುಗಿಸಿ ತನಿಖೆ ಆರಂಭಿಸಿದರ ಹಿನ್ನಲೆಯಲ್ಲಿ ಕೆಲ ಅಭ್ಯರ್ಥಿಗಳು ಕೋರ್ಟ ಮೇಟ್ಟಿಲೆರಿದ್ದರಿಂದ ಕೋರ್ಟ ಆದೇಶ ಪ್ರಕಾರ ಡಿಸೆಂಬರ ತಿಂಗಳಿನಲ್ಲಿ ಮರು ಪರಿಕ್ಷೆಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಲ್ಲಾ ವಿದ್ಯಾರ್ಥಿಗಳು ಬೆಂಗಳೀರಿನಲ್ಲೆ ಪರಿಕ್ಷೆ ಬರೆಯಲು ಸಿದ್ದತೆ ಮಾಡಿಕೊಂಡಿದ್ದಾರೆ ಕಾರಣ ನಿಗದಿತ ದಿನಾಂಕದಂದು ಪರಿಕ್ಷೆ ನಡೆಸಲಾಗುವದು ಎಂದಾಗ ಕೆಲ ಶಾಸಕರು ಎದ್ದು ನಿಂತು ಇನ್ನೂ ಒಂದು ತಿಂಗಳು ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಒಪ್ಪದ ಗೃಹ ಸಚಿವರು ರಾಜ್ಯದಲ್ಲಿ ಒಂದು ಸಾವಿರಕ್ಕಿಂತಲು ಹೇಚ್ಚು ಪಿ ಎಸ್ ಆಯ್ ಗಳ ಕೋರತೆ ಇದೆ ಕಾನೂನು ಸುವ್ಯವಸ್ಥೆ ಸುಗಮವಾಗಿ ಸಾಗಿಸಲು ಹೋಸ ನೇಮಕಾತಿ ಮಾಡುವದು ಅವಶ್ಯವಾಗಿದೆ ಎಂದು ಚರ್ಚೆಗೆ ತೇರೆ ಎಳೆದರು.

Tags: