ಕಾರ್ತಿಕ ಮಾಸದ ಅಂಗವಾಗಿ ಎಲ್ಲರೂ ಉಳವಿ ಚೆನ್ನಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಕಾರ್ತಿಕ ಹಚ್ಚಿ ಬರುವ ಪದ್ಧತಿ ಇದೆ. ಆದರೆ ಇಲ್ಲೊಬ್ಬ ರೈತ ಟ್ರ್ಯಾಕ್ಟರ್ ರಿವರ್ಸ್ ಹೊಡೆದುಕೊಂಡೇ ಉಳವಿಯತ್ತ ಹೊರಟಿದ್ದಾನೆ.
ಹೌದು! ಹೀಗೆ ಟ್ರ್ಯಾಕ್ಟರ್ ರಿವರ್ಸ್ ಹೊಡೆದುಕೊಂಡು ಹೋಗುತ್ತಿರುವ ರೈತನ ಹೆಸರು ಶಿವಾನಂದ ಅಳಗವಾಡಿ. ಇವರು ಬ್ಯಾಹಟ್ಟಿ ಗ್ರಾಮದವರು. ಈ ವರ್ಷ ವಿಶಿಷ್ಟವಾಗಿ ಉಳವಿಗೆ ಹೋಗಬೇಕು ಎಂದು ತಮ್ಮೂರಿನಿಂದ ಟ್ರ್ಯಾಕ್ಟರ್ ರಿವರ್ಸ್ ಹೊಡೆದುಕೊಂಡೇ ಉಳವಿಯತ್ತ ಹೊರಟಿದ್ದಾರೆ.
ಬ್ಯಾಹಟ್ಟಿ ಗ್ರಾಮದಿಂದ ಉಳವಿ ಸುಮಾರು 145 ಕಿಲೋ ಮೀಟರ್ ದೂರವಿದೆ. ತಮ್ಮೂರಿನಿಂದ ಬೆಳಿಗ್ಗೆ 6 ಗಂಟೆಗೆ ಉಳವಿಯತ್ತ ಹೊರಟ ರೈತ, ಶಿವಳ್ಳಿ, ಸೋಮಾಪುರ ಮಾರ್ಗವಾಗಿ ಧಾರವಾಡ ತಲುಪಿ ಧಾರವಾಡದಿಂದ ಉಳವಿಯತ್ತ ಟ್ರ್ಯಾಕ್ಟರ್ ರಿವರ್ಸ್ ಹೊಡೆದುಕೊಂಡೇ ಹೋಗುತ್ತಿದ್ದಾನೆ.
ಶಿವಾನಂದ ಅವರಿಗೆ ಉಮೇಶ ಹುರಕಡ್ಲಿ, ಮತ್ತುಂಸಾಬ್ ನಲವಡಿ, ಸುರೇಶ ಕುರುಬರ, ರಮೇಶ ಸಾಸೊಳ್ಳಿ, ನಾಗಪ್ಪ ಬಗೋಡಿ ಸಾಥ್ ನೀಡಿದ್ದಾರೆ. ಬೆಳಿಗ್ಗೆ 6 ಗಂಟೆಗೆ ತಮ್ಮೂರು ಬಿಟ್ಟಿರುವ ಶಿವಾನಂದ ಅಳಗವಾಡಿ ಸಂಜೆ 6 ರ ಸುಮಾರಿಗೆ ಉಳವಿ ಚೆನ್ನಬಸವೇಶ್ವರ ದೇವಸ್ಥಾನ ತಲುಪುವ ಗುರಿ ಹೊಂದಿದ್ದಾರೆ