Uncategorized

ಕಾಂಗ್ರೆಸ್ ಸರ್ಕಾರ ಸಿಸಿ ಸರ್ಕಾರ ಇದ್ದಂತೆ : ಪ್ರಹ್ಲಾದ್ ಜೋಶಿ

Share

ಬಿ‌ ಕೆ ಹರಿಪ್ರಸಾದ್ ಅವರು ಸಿದ್ಧರಾಮಯ್ಯ ಚಡ್ಡಿ ವಿಚಾರವಾಗಿ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರ ಸಿಸಿ ಸರ್ಕಾರ ಇದ್ದಂತೆ. ಇದು ಕಂಪ್ಲೆಂಟ್ ಮತ್ತು ಭ್ರಷ್ಟಾಚಾರದ ಸರ್ಕಾರ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ‌ನಡೆಸಿದರು.

ನಗರದಲ್ಲಿಂದು ‌ಮಾತನಾಡಿದ ಅವರು, ಪರಸ್ಪರ ಕೆಸರೆರಚಾಟ ನೋಡಿದ್ರೆ ಇದು ಕಂಪ್ಲೆಂಟ್ ಸರ್ಕಾರ.
ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಬಿ.ಕೆ.ಹರಿಪ್ರಸಾದ್ ಸ್ಪಷ್ಟಪಡಿಸಬೇಕು. ಅವರೇ ಈ ಬಗ್ಗೆ ಮಾತನಾಡಿದ್ದಾರೆ ಎಂದರು.

ರಾಜ್ಯ ಸರ್ಕಾರ ರಾಜ್ಯದಲ್ಲಿ ಕಂಟ್ರೋಲ್ ಕಳೆದುಕೊಳ್ಳುತ್ತಿದೆ.
ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ.
ಆದ್ರೆ ಇವರ ಪರಸ್ಪರ ಕೆಸರೆರಚಾಟ ನಿಲ್ಲುತ್ತಿಲ್ಲ. ಪರಸ್ಪರ ಕೆಸರೆರಚಾಟ, ಗುಂಪುಗಾರಿಕೆಯಿಂದ ಸರ್ಕಾರದ ಮೇಲೆ ಪರಿಣಾಮ ಬೀರುತ್ತಿದೆ.
ಇದು ಸರ್ಕಾರದ ಆಡಳಿತದ ಮೇಲೆ ಮರಿಣಾಮ‌ ಬೀಳುತ್ತಲೇ ಇದೆ.
ಸಿಸಿ ರಸ್ತೆಯಂತೆ ಇದು ಕಂಪ್ಲೆಂಟ್ ಹಾಗೂ ಕರಪ್ಷನ್‌ ಸರ್ಕಾರ ಇದೇ ಸರ್ಕಾರದ ಸಾಧನೆ ಎಂದು ಆರೋಪಿಸಿದರು.

ಈಡಿಗ ಸಮಾವೇಶದ ಕುರಿತು ಬಿಜೆಪಿ‌ ಹರಿಪ್ರಸಾದ ಮಾತನಾಡಿದ್ದಾರೆ.
ಕಾಂಗ್ರೆಸ್ ನಲ್ಲಿ ಬಿ.ಕೆ‌ಹರಿಪ್ರಸಾದ್ ಅವರ ವಿರುದ್ಧ ಮಸಲತ್ತು ಮಾಡುವವರ ವಿರುದ್ಧ ಮಾತನಾಡುವ ತಾಕತ್ತು ಬಿ.ಕೆ.ಹರಿಪ್ರಸಾದ್ ಅವರಿಗಿಲ್ಲ.
ಹೀಗಾಗಿ ಅವರು ಬಿಜೆಪಿಗೆ ಬೈಯ್ಯುತ್ತಿದ್ದಾರೆ. ಈ ಮಸಲತ್ತು ಮಾಡುತ್ತಿರೋರು ಸಿದ್ಧರಾಮಯ್ಯ ಅವರೇ . ಆದ್ರೆ ಅದರ ವಿರುದ್ಧ ಮಾತನಾಡುವ ಶಕ್ತಿ ಹರಿಪ್ರಸಾದ ಅವರಿಗೆ ಇಲ್ಲ. ಅವರು ಸರ್ಕಾರದ ವಿರುದ್ಧ ಎಷ್ಟು ಪುಟಿಯುತ್ತಾರೋ‌ ಅದರ ಮೇಲೆ ಉತ್ತರ ನೀಡುತ್ತೇನೆ ಎಂದರು.

Tags: