Uncategorized

ತ್ರೀಕಾಲ ಪೂಜಿತೆ, ದಾಸೋಹಿ ದಾನ್ಮದೇವಿ ದರ್ಶನಕ್ಕೆ ಭಕ್ತ ಸಾಗರ

Share

ಕೊರೆಯುವ ಚಳಿಯಲ್ಲಿ ಲಕ್ಷಾಂತರ ಭಕ್ತರು ಪಾದಯಾತ್ರೆ ಹೊರಟಿದ್ದಾರೆ. ಗುಡ್ಡಾಪುರ ದಾನಮ್ಮದೇವಿ ಭಕ್ತರಿಂದ ಪಾದಯಾತ್ರೆಯು ಭಕ್ತಿ ಭಾವದಿಂದ ನಡೆಯುತ್ತಿದೆ.

ನೆರೆ ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಸುಕ್ಷೇತ್ರ ಗುಡ್ಡಾಪುರವಿದ್ದು ವಿಜಯಪುರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಪಾದಯಾತ್ರೆ ಮೂಲಕ ದೇವಿ ದರ್ಶನಕ್ಕೆ ಭಕ್ತಗಣ ತೆರಳುತ್ತಿದೆ. ಬೆಳಗಾವಿ, ಬಾಗಲಕೋಟ, ಕಲಬುರಗಿ ಸೇರಿದಂತೆ ಇತರೆ ಜಿಲ್ಲೆಗಳ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ‌. ಪಾದಯಾತ್ರಿಕರಿಗೆ ಅಲ್ಪೋಪಹಾರ, ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಒದಗಿಸಲಾಗುತ್ತಿದೆ. ಇನ್ನೂ ಭಕ್ತಾದಿಗಳಿಂದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯುತ್ತಿದೆ. ಜೈಲ್ ದರ್ಗಾ ರೋಡ್ ಮೂಲಕ ಇಟ್ಟಂಗಿಹಾಳ, ಯತ್ನಾಳ, ಸಂಖ ಮೂಲಕ ಗುಡ್ಡಾಪುರಕ್ಕೆ ತೆರಳುತ್ತಾರೆ. ತಾಯಿ ತಾಯಿ ದಾನಮ್ಮ ತಾಯಿ ತಂದೆ ತಂದೆ ಸೋಮನಾಥ ತಂದೆ ಎಂಬ ನಾಮಸ್ಮರಣೆ ಜೊತೆಗೆ ಭಕ್ತ ಸಾಗರ ಹೊರಟಿದೆ. ಇನ್ನೂ ದಾನಮ್ಮದೇವಿ ತ್ರೀಕಾಲ ಪೂಜಿತೆ, ದಾಸೋಹಿ ಎಂದೇ ಖ್ಯಾತಿ ಹೊಂದಿರುವ ಜಾಗೃತ ದೇವಿಯಾಗಿದ್ದಾಳೆ ಅನ್ನೋದು ಭಕ್ತರ ನಂಬಿಕೆಯಾಗಿದೆ.

Tags: