ಬಡವರು ಹಸಿವಿನಿಂದ ನರಳಾಡಬಾರದು ಎಂದು ಸರ್ಕಾರಗಳು ಉಚಿತ ಅಕ್ಕಿ ವಿತರಿಸುತ್ತಿವೆ. ಆದ್ರೆ ಧನದಾಹಿಗಳು ಬಡವರ ಹೊಟ್ಟೆ ಮೇಲೆ ಹೊಡೆದು ಪಡಿತರ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಇಂಥಹದೇ ಪ್ರಕರಣ ವಿಜಯಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸಿಂದಗಿಯಲ್ಲಿ 30 ಟನ್ ಪಡಿತರ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 30 ಟನ್ ಪಡಿತರ ಅಕ್ಕಿ ವಶಕ್ಕೆ ಪಡೆದಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ತೋಟದ ಜಮೀನಿನಲ್ಲಿ ನಡೆದಿದೆ. ಪಟ್ಟಣದ ಕಾಂತಪ್ಪ ಭೂಸನೂರ ಅವರ ತೋಟದಲ್ಲಿ ಅಕ್ರಮವಾಗಿ 30 ಟನ್ ಪಡಿತರ ಅಕ್ಕಿ ಸಂಗ್ರಹ ಮಾಡಲಾಗಿತ್ತು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ 30 ಟನ್ ಅಕ್ಕಿ ಹಾಗೂ 2 ಲೋಡ್ ಅಕ್ಕಿ ಹೊಂದಿದ್ದ ವಾಹನ ಜಪ್ತಿ ಮಾಡಿದ್ದಾರೆ. ದಾಳಿಯಲ್ಲಿ ಆಲಮೇಲ ಪಿಎಸ್‌ಐ ಮತ್ತಿತರರು ಭಾಗಿಯಾಗಿದ್ದರು.