Uncategorized

ಜಯಶ್ರೀ ಮತ್ತು ಜಯಪ್ರಕಾಶ ಅಬ್ಬಿಗೇರಿ ದಂಪತಿಗಳ ೧೫ ಕೃತಿ ಲೋಕಾರ್ಪಣೆ

Share

ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಹಾಗೂ ಲೋಕವಿದ್ಯಾ ಪ್ರಕಾಶನ ಸಂಕೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಜಯಶ್ರೀ ಮತ್ತು ಜಯಪ್ರಕಾಶ ಅಬ್ಬಿಗೇರಿ ದಂಪತಿಗಳ ೧೫ ಕೃತಿಗಳನ್ನು ಕನ್ನಡ ಸಾಹಿತ್ಯ ಭವನದಲ್ಲಿ ವಿಶ್ರಾಂತ ಪ್ರಾಚಾರ್ಯರಾದ ಪ್ರಾ. ಬಿ. ಎಸ್. ಗವಿಮಠ ಅವರು ಕೃತಿ ಲೋಕಾರ್ಪಣೆಗೊಳಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾನು ಸುಮಾರು ೫೦ ವರ್ಷಗಳಿಂದ ಹಿಂತಹ ಅನೇಕ ಸಾಹಿತ್ಯಮಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಅನೇಕ ಹೆಸರಾಂತ ಸಾಹಿತಿಗಳು ಅವರ ಕೃತಿ ಲೇಖನ ಗಳನ್ನೂ ವಿಧಿವತ್ತಾಗಿ ಬರೆಯುತ್ತಿದ್ದಾರೆ ನಮ್ಮ ಸ್ನೇಹಿತರಾದ ಪಾಟೀಲ ಅವರು ಸುಮಾರು ೭೦೦ ಪುಟಗಳ ಬೃಹತ ಕಾದಂಬರಿಗಳನ್ನ ಬಿಡುಗಡೆ ಗೊಳಿಸುತ್ತಿರುವುದು ಸಾಹಿತ್ಯ ಲೋಕದಲ್ಲಿ ಬಹುದೊಡ್ಡ ದಾಖಲೆ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲಾ ,ಜಯಶ್ರೀ ಅಬ್ಬಿಗೆರಿ ಹಾಗು ಜಯಪ್ರಕಾಶ ಅಬ್ಬಿಗೇರಿ ಅವರು ಇವತ್ತು ೧೫ ಕೃತಿಗಳನ್ನ ಇವತ್ತು ಬಿಡುಗಡೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಜಯಶ್ರೀ ವಿರಚಿತ ಹಾಗು ಜಯಪ್ರಕಾಶ ವಿರಚಿತ ನಿಮ್ಮನ್ನು ನೀವು ಯಶಸ್ವಿ ವ್ಯಕ್ತಿ ಎಂದು ಭಾವಿಸಿ ,ಶ್ರೀಮತಿಗಳ ಶೃಂಗಸಭೆಗಳು ,ಜೀವನದಿ , ಬಾನುಲಿ ನಗೆ ,ವಚನ ವಾಹಿನಿ , ಹೃದಯವೀಣೆ ಮಿಡಿದಾಗ ,ಕುಂತರೂ ನಿಂತರೂ ನಿನ್ನದೇ ತುಂತುರು, ಮನೋಲ್ಲಾಸ ಭಾಗ-1 , ಡಾ..ಸಿದ್ಧನಗೌಡ ಪಾಟೀಲ ,ಮನೋಲ್ಲಾಸ ಭಾಗ-2 , ಮೆಲ್ಲ ಮೆಲ್ಲ ಈ ಪ್ರೀತಿ ಮೆಲ್ಲುವಾ , ಜೀವ ನೀಡುವ ಜೀವ ಅಪಾಯದಲ್ಲಿದೆ ,ಸೋಲಿನ ಸುಳಿಯಲ್ಲಿ ಗೆಲುವಿನ ತುದಿ ಇದೆ , ಹಬ್ಬ ಬಂತು ಹಬ್ಬ, ಸೋಲು ಒಪ್ಪಿಕೊಳ್ಳುವ ಮುನ್ನ ಕೊಂಚ ಪ್ರಶ್ನಿಸಿಕೊಳ್ಳಿ ಎಂಬ ೧೫ ಕೃತಿಗಳನ್ನು ಬಿಡುಗಡೆ ಮಾಡಿದ್ದೂ ಸಂತಸತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು .

ಅಧ್ಯಕ್ಷತೆ ಜಯಶೀಲಾ ಬ್ಯಾಕೋಡ ಅಧ್ಯಕ್ಷರು, ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಇವರು ವಹಿಸಿದ್ದರು ಕೃತಿ ಲೋಕಾರ್ಪಣೆಯನ್ನ ಪ್ರಾ. ಬಿ. ಎಸ್. ಗವಿಮಠ ವಿಶ್ರಾಂತ ಪ್ರಾಚಾರ್ಯರು ನೆರವೇರಿಸಿದರು.ಪ್ಲೊ

ಈ ಸಂದರ್ಭದಲ್ಲಿ ಡಾ. ಪಿ.ಜಿ. ಕೆಂಪಣ್ಣವರ ವಿಶ್ರಾಂತ ಅಧ್ಯಾಪಕರು ,ಡಾ. ಗುರುದೇವಿ ಹುಲೆಪ್ಪನವರಮಠ ವಿಶ್ರಾಂತ ಇಂಗ್ಲೀಷ ಅಧ್ಯಾಪಕಿ ,ಶ್ರೀಮತಿ ಸುನಂದಾ ಎಮ್ಮಿ ಸಾಹಿತಿಗಳು, ಡಾ. ನಿರ್ಮಲಾ ಬಟ್ಟಲ ಪ್ರಾಚಾರ್ಯರು, ಶಿಕ್ಷಣ ಮಹಾವಿದ್ಯಾಲಯ ,ಆಶಾ ಯಮಕನಮರಡಿ ಕವಿಯತ್ರಿ ಉಪಸ್ಥಿತರಿದ್ದರು ,

Tags: