ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಯ ದುರುಪಯೋಗದ ಪ್ರಕರಣಗಳು ಮುಂದುವರೆದಿವೆ. ಇದೀಗ ಇಬ್ಬರು ಯುವತಿಯರು ಒಂದೇ ಸಂಖ್ಯೆಯ ಎರಡು ಆಧಾರ್ ಕಾರ್ಡ್ ಪಡೆದು ಬಸ್ ನಲ್ಲಿ ಪ್ರಯಾಣಿಸಿ ಸಿಕ್ಕಿ ಬಿದ್ದಿದ್ದಾರೆ.
ಮಹಿಳೆಯರಿಗೆ, ವೃದ್ದೆಯರಿಗೆ, ಕೆಲಸಕ್ಕೆ ತೆರಳುವ ಮಹಿಳಾ ಕಾರ್ಮಿಕರಿಗೆ ಅನುಕೂಲವಾಗಲೆಂದು ರಾಜ್ಯ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದಿದೆ. ಆದರೆ, ಜನರು ಇದರ ದರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹುಬ್ಬಳ್ಳಿಯ ಆನಂದ ನಗರ-ಕಿಮ್ಸ್ ಬಸ್ಸಿನಲ್ಲಿ ಒಂದೇ ಆಧಾರ್ ಕಾರ್ಡಿನಲ್ಲಿ ಇಬ್ಬರು ಯುವತಿಯರು ಪ್ರಯಾಣಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇಬ್ಬರು ಯುವತಿಯರು ಒಂದೇ ನಂಬರಿನ ಎರಡು ಆಧಾರ್ ಕಾರ್ಡ್ ಹೊಂದಿದ್ದಾರೆ. ಇದನ್ನು ಗಮನಿಸಿದ ಕಂಡೆಕ್ಟರ್ ಪತ್ತೆ ಹಚ್ಚಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.