ಹುಕ್ಕೇರಿ ನಗರದ ಗ್ರಾಮಿಣ ವಿದ್ಯುತ್ ಸಹಕಾರಿ ಸಂಘಕ್ಕೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ವಿದ್ಯುತ ಸಲಕರಣೆ ಬೆಂಕಿಗಾಹುತಿಯಾದ ಘಟನೆ ಜರುಗಿದೆ.
ಪಟ್ಟಣದ ಸಂಕೇಶ್ವರ ರಸ್ತೆಗೆ ಹೊಂದಿಕೊಂಡಿರುವ ರಾಜ್ಯದ ಏಕೈಕ ವಿದ್ಯುತ್ ಸಹಕಾರಿ ಸಂಘದ ಆವರಣದಲ್ಲಿ ಹಳೆ ರಿಪೇರಿ ಮಾಡುವ ಟಿ ಸಿ ಮತ್ತು ಗುಜರಿ ವಸ್ತು ದಾಸ್ತಾನು ಸ್ಥಳದಲ್ಲಿ ಆಕಸ್ಮಿಕ ಬೆಂಕಿ ತಗುಲಿದ ಹಿನ್ನಲೆಯಲ್ಲಿ ನೋಡು ನೋಡುತ್ತಿದ್ದಂತೆ ಬೆಂಕಿ ಕೆನ್ನಾಲಿಗೆ ಹೋತ್ತಿಕೊಂಡು ಉರಿಯ ತೊಡಗಿತು, ಇಂದು ಭಾನುವಾರ ಇದ್ದ ಹಿನ್ನಲೇಯಲ್ಲಿ ಯಾವದೇ ಸಿಬ್ಬಂದಿ ಇಲ್ಲದಿರುವದರಿಂದ ಹೆಚ್ಚಿನ ಅನಾವುತ ಸಂಭವಿಸಿಲ್ಲಾ.
ಘಟನಾ ಸ್ಥಳಕ್ಕೆ ಹುಕ್ಕೇರಿ ಪೋಲಿಸರು,ಅಗ್ನಿ ಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.