Uncategorized

ಎನ್‌ಪಿಎಸ್ ರದ್ದಾಗಿ ಓಪಿಎಸ್ ಕಾರ್ಯ ರೂಪಕ್ಕೆ ಬರುವ ಕಾಲ ಹತ್ತಿರವಾಗಿದೆ : ರಾಜ್ಯಾಧ್ಯಕ್ಷ ಶಾಂತಾರಾಮ

Share

ಮಾನ್ಯ ಮುಖ್ಯಮಂತ್ರಿ ಹಾಗು ಕಾಂಗ್ರೆಸ ಪಕ್ಷ ಆಡಳಿತಕ್ಕೆ ಬರಬೇಕಾದರೆ ಪ್ರಣಾಳಿಕೆಯಲ್ಲಿ ಈ ವಿಷಯ್ ಪ್ರಸ್ತಾಪ ಮಾಡಿದ್ದರು ೪. ೫ ಮೀಟಿಂಗನಲ್ಲಿ ನಾವು ಸರ್ಕಾರಕ್ಕೆ ನಮ್ಮ ಬೇಡಿಕೆ ಹೇಳಿದ್ದೇವೆ ಆ ನಿಟ್ಟಿನಲ್ಲಿ ನಮ್ಮ ಬೇಡಿಕೆ ಪೂರೈಸುವಂತೆ ನಾವು ಎಲ್ಲರು ಗಟ್ಟಿಯಾಗಿ ಸೇರಿ ಗಟ್ಟಿದ್ವನಿಯಿಂದ ಬೆಂಗಳೂರಿನಲ್ಲಿ ಸಮಾವೇಶ ಮಾಡುತ್ತೇವೆ ಎನ್‌ಪಿಎಸ್ ರದ್ದು ಗೊಳಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದು ಕರ್ನಾಟಕ ರಾಜ್ಯ ಸರಕಾರ ಎನ್‌ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ ಹೇಳಿದರು

ಬೆಳಗಾವಿಯ ಕುಮಾರ ಗಂಧರ್ವ ಹಾಲನಲ್ಲಿ ಕರ್ನಾಟಕ ರಾಜ್ಯ ಸರಕಾರ ಎನ್‌ಪಿಎಸ್ ನೌಕರರ ಸಂಘದ ವಿಭಾಗ ಮಟ್ಟದ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು
ಮಾತನಾಡುತ್ತಾ ಬೆಳಗಾವಿ ಗಂಡು ಮೆಟ್ಟಿದ ನಾಡು ಹೋರಾಟದ ನಾಡು ಕರ್ನಾಟಕ ರಾಜ್ಯ ಸರಕಾರ ಎನ್‌ಪಿಎಸ್ ನೌಕರರ ಸಂಘದಿಂದ ಬೆಳಗಾವಿಯಲ್ಲಿ ಸಂಘಟನೆ ಸಭೆ ಮಾಡುತ್ತಿರುವ ಉದ್ದೇಶ ಈ ಭಾಗದಲ್ಲಿ ಕಳೆದ ೧೦ ವರ್ಷಗಳಿಂದ ಹೋರಾಟದಲ್ಲಿ ಹೊರಾಡಿರುವವರಿಗೆ ಸರ್ಕಾರ ಏನು ಮಾಡಿದೆ ಎಂಬ ವಿಚಾರ ಮುಟ್ಟಿಸುವ ಉದ್ದೇಶವಾಗಿದೆ ಮಾನ್ಯ ಮುಖ್ಯಮಂತ್ರಿ ಹಾಗು ಕಾಂಗ್ರೆಸ ಪಕ್ಷ ಆಡಳಿತಕ್ಕೆ ಬರಬೇಕಾದರೆ ಪ್ರಣಾಳಿಕೆಯಲ್ಲಿ ಈ ವಿಷಯ್ ಪ್ರಸ್ತಾಪ ಮಾಡಿದ್ದರು ೪. ೫ ಮೀಟಿಂಗನಲ್ಲಿ ನಾವು ಸರ್ಕಾರಕ್ಕೆ ನಮ್ಮ ಬೇಡಿಕೆ ಹೇಳಿದ್ದೇವೆ ಆ ನಿಟ್ಟಿನಲ್ಲಿ ನಮ್ಮ ಬೇಡಿಕೆ ಪೂರೈಸುವಂತೆ ನಾವು ಎಲ್ಲರು ಗಟ್ಟಿಯಾಗಿ ಸೇರಿ ಗಟ್ಟಿದ್ವನಿಯಿಂದ ಬೆಂಗಳೂರಿನಲ್ಲಿ ಸಮಾವೇಶ ಮಾಡುತ್ತೇವೆ ಎನ್‌ಪಿಎಸ್ ರದ್ದು ಗೊಳಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ ,ಪ್ರಜಾಪ್ರಭುತ್ವ ನಿರಂತರವಾಗಿ ಪರಿವರ್ತನೆ ಆಗುವ ಒಂದು ಪ್ರಕ್ರಿಯೆ ಈ ಪ್ರಕ್ರಿಯೆಯಲ್ಲಿ ತಪ್ಪುಗಳಾದಾಗ ಸರಿ ಮಾಡಿಕೊಳ್ಳುವ ವ್ಯವಸ್ಥೆ ಇರುತ್ತದೆ . ನಾವು ಎಲ್ಲಾ ಸರ್ಕಾರಿ ನೌಕರರಿಗೆ ಬೇಕಾದ ಬೇಡಿಕೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತೇವೆ ಎಂದರು .

ಜಗದೀಶಗೌಡ ಮತನಾಡುತ್ತಾ ಸಂಘಟನೆ ಮುಳ್ಳಿನ ಹಾಸಿಗೆಯಾಗಿದೆ. ಸಂಘಟನೆಯಲ್ಲಿ ಭಾಗವಹಿಸುವವರ ತೇಜೋವಧಿಗೆ ಪ್ರಸ್ತುತ ಸಾಕಷ್ಟು ಸಾಮಾಜಿಕ ಜಾಲತಾಣಗಳಿವೆ. ಎನ್‌ಪಿಎಸ್ ರದ್ದಾಗಿ ಓಪಿಎಸ್ ಕಾರ್ಯ ರೂಪಕ್ಕೆ ಬರುವ ಕಾಲ ಹತ್ತಿರವಾಗಿದೆ. ಡಿ.೩೦ ರೊಳಗೆ ಒಪಿಎಸ್ ಜಾರಿಯಾಗಲೇ ಬೇಕು, ಆಗುತ್ತದೆ. ಒಳಗಿನ ವರ್ಮ ನಮಗೆ ಗೊತ್ತು‌. ಅದಕ್ಕಾಗಿ ಸಂಘ ಆಯೋಜಿಸಲಿರುವ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಆಗಮಿಸಿ ಎಂದು ಕರೆ ನೀಡಿದರು
ನೌಕರರ ಸಂಘಟನೆ ಒಡೆಯುವ ಕೆಲಸ ನಡೆಯುತ್ತಿದೆ ಅಂತಹ ಕಾರ್ಯಗಳು ಆಗಬಾರದು ಸಂಘಟನೆಗೆಳು ನಿಂತ ನೀರಲ್ಲ ಹರಿಯುತ್ತಿರುವ ನೀರು ಹಾಗಾಗಿ ಎಲ್ಲರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಇನ್ನೊಬ್ಬರ ಮಾತುಕೇಳಿ ಸಂಘಟನೆಗಳಲ್ಲಿ ಒಡಕು ಮೂಡಿಸುವುದು ತಪ್ಪು ಎಂದರು.

ಈ ಸಂದರ್ಭದಲ್ಲಿ ಸಿದ್ದಪ್ಪಾ ಸಂಗನ್ನವರ , ಜಯಪ್ರಕಾಶ್ ಹೆಬ್ಬಳ್ಳಿ ,ರಾಮು ಗೂಗವಾಡ ,ಚಂದ್ರಕಾಂತ ತಲವಾರ ಬಸವರಾಜ ರಾಯಗೋಳ ,ಉಮೇಶ ತೊಟ್ಟದ, ಎನ್.ಟಿ ಲೋಕೇಶ್ ,ಸಿದ್ದರಾಜು ,ಮಂಜುನಾಥ್, ಪ್ರವೀಣ್ ,ಮಂಜುನಾಥ್ ,ಎಸ್.ಆರ್ ,ಮಾರುತಿ, ದೊಡಮನಿ ಚಂದ್ರಶೇಖರ್, ಕೋಲಕಾರ ರವೀಂದ್ರ, ಜಾಧವ್ ಶೀಧರ್, ನಾಗರಾಜ್.ಎಲ್,ಸೇರಿದಂತೆ ಅನೇಕ ನೌಕರರು ಉಪಸ್ಥಿತರಿದ್ದರು

Tags: