ಬಾಲ್ಯದಲ್ಲಿ ಆಟ-ಪಾಠದ ಜೊತೆಗೆ ತುಂಟಾಟ ಮಾಡಿದವರೆಲ್ಲಾ ಬರೋಬ್ಬರಿ 38 ವರ್ಷಗಳ ಬಳಿಕ ಒಂದೆಡೆ ಸೇರಿದ್ದರು. ಕಲಿಸಿದ ಗುರುಗಳ ಕಂಡು ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಸಂತೋಷ. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕಾಗವಾಡ ತಾಲೂಕಿನ ಶೇಡಬಾಳದ ಸನ್ಮತಿ ವಿದ್ಯಾಲಯದಲ್ಲಿ.
ಕಾಗವಾಡ ತಾಲೂಕಿನ ಶೇಡಬಾಳದ ಸನ್ಮತಿ ವಿದ್ಯಾಲಯದಲ್ಲಿ ರವಿವಾರ ರಂದು 1984-85 ವರ್ಷದಲ್ಲಿ 10ನೇ ತರಗತಿಯಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳು “ಸ್ನೇಹಸಂಗಮ ಹಾಗೂ ಗುರುವಂದನಾ” ಕಾರ್ಯಕ್ರಮ ಆಯೋಜಿಸಿದ್ದರು.
ಸುಮಾರು 38 ವರ್ಷಗಳ ಬಳಿಕ ಹೀಗೆ ಗುರು-ಶಿಷ್ಯರು ಒಂದು ಕಡೆ ಸೇರಿ ಹಳೆಯ ದಿನಗಳನ್ನು ಮೆಲುಕು ಹಾಕಿದರು. ಅಲ್ಲದೇ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಎಲ್ಲಾ ಗೆಳೆಯರು ತಮ್ಮ ದಿನ ನಿತ್ಯದ ಕೆಲಸಗಳನ್ನು ಬದಿಗೆಟ್ಟು, ತಮ್ಮ ಕುಟುಂಬದೊಂದಿಗೆ ಹಳೆಯ ನೆನಪಗಳನ್ನು ಮೆಲುಕುಹಾಕಿದರು.ತಮ್ಮ ಶಾಲಾ ದಿನಗಳನ್ನು ನೆನೆದು ಅನೇಕ ವಿದ್ಯಾರ್ಥಿಗಳು ಭಾವುಕರಾದರು. ಶಾಲೆಯ ಕುರಿತಾದ ವಿಡಿಯೋ ವೀಕ್ಷಿಸಿ, ಹಳೆಯ ನೆನಪುಗಳನ್ನು ಶಿಕ್ಷಕರು ವಿದ್ಯಾರ್ಥಿಗಳು ಮೆಲುಕು ಹಾಕಿದರು. ಭವಿಷ್ಯಕ್ಕೆ ಅಡಿಪಾಯ ಹಾಕಿದ ಶಿಕ್ಷಕರ ಕಾರ್ಯವನ್ನು ವಿದ್ಯಾರ್ಥಿಗಳು ನೆನೆದರು.
ಎಲ್ಲಾ ಶಿಕ್ಷಕರನ್ನು ವಿದ್ಯಾರ್ಥಿಗಳು ಪಾದ ಪೂಜೆ ಮೂಲಕ ಅವರನ್ನುಸನ್ಮಾನಿಸಿ ಗುರುವಂದನೆ ಸಲ್ಲಿಸಿದರು. ತಾವು ಕಲಿತ ಕನ್ನಡ ಹೆಣು ಮಕ್ಕಳ ಹಾಗೂ ಗಂಡು ಮಕ್ಕಳ ಪ್ರಾಥಮಿಕ ಶಾಲೆಗೆ 2 ಗ್ರೀನ ಬೊರ್ಡ ಉಡುಗೊರೆಯಾಗಿ ನೀಡಲಾಯಿತು ಕುದಳೆ ಗುರುಗಳು ಅದನ್ನು ಸ್ವೀಕರಿಸಿದರು ಸನ್ಮತಿ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಮದ್ಯಾಹ್ನದ ಬಿಸಿ ಉಟ ಸೇವಿಸಲು 100 ಸ್ಟಿಲ ತಟ್ಟೆಗಳನ್ನು ಕಾಣಿಕ್ಕೆಯಾಗಿ ನೀಡಿದರು. ಅವುಗಳನು ಸನ್ಮತಿ ಶಿಕ್ಷಣ ಸಮಿತಿ ಅಧ್ಯಕ್ಷ ವಿನೋದ ಬರಗಾಲೆ, ಉಪಾಧ್ಯಕ್ಷ ಅಜೀತ ನಾಂದ್ರೆ, ಸಹಶಿಕ್ಷಕ ಸುನೀಲ ಇರಾಜ ಇವರು ಸ್ವಿಕರಿಸಿದರು.
ಗುರುವಂದನಾ ಕಾರ್ಯಕ್ರಮ ಯಶಸ್ವಿಗೊಳಿಸಲು ಹಳೆಯ ವಿದ್ಯಾರ್ಥಿಗಳಾದ ಕುಮಾರ ನಾಂದ್ರೆ, ಚಾರುದತ್ತ ಪಾಟೀಲ, ಮೀಲಿಂದ ಮುರಗುಂಡೆ, ಅನೀಲ ಇರಾಜ, ಪ್ರದೀಪ ಪಾಟೀಲ, ನಾರಾಯಣ ಕಾಂಬಳೆ, ನೀಲಕಂಠ ಕಾಂಬಳೆ, ಮಾಜಿ ಸೈನಿಕ ಕೈಯುಮ ಸಾರವಾನ, ಶ್ರೀಮತಿ ಅರುಣಾ ಕುಂಬಾರ, ಅರ್ಚಣಾ ಪಾಟೀಲ, ಸುರೇಖಾ ಚಿಂಚವಾಡೆ, ಮಂಗಲ ಢಾಲೆ, ಮಾಲತ್ತಿ ಬಿದರಿ, ಕಮತೆ ಶಿಕ್ಷಿಕೆ ಇವರು ಈ ವಿದ್ಯಾರ್ಥಿಗಳು ನಿರಂತರವಾಗಿ 3 ತಿಂಗಳ ಶ್ರಮಿಸಿ ಕಾರ್ಯಕ್ರಮ ಯಶಸ್ವಿಗೋಳಿಸಿದರು.
ಶಿಕ್ಷಕರಾದ ಬಿ.ಜೆ.ಕುರುಂದವಾಡೆ ಮಾತನಾಡಿ, ನಾನು ವಿದ್ಯೆ ಕಳಿಸಿದ ವಿದ್ಯಾರ್ಥಿಗಳು 38 ವರ್ಷ ಕಳೆದರು ನಮನ್ನು ಮರತಿಲ್ಲಾ, ಇಂದು ಒಂದುಗುಡಿ ಕಷ್ಟ-ಸುಃಖ ಹಂಚಿಕೊಂಡು ನಮಗೆ ಗುರುವಂದನೆ ಸಲ್ಲಿಸಿದಿರಿ. ನಾವು ಶಿಕ್ಷಕರಾಗಿ ಸಲ್ಲಿಸಿದ ಸೇವೆ ಸಾರ್ಥಕವಾಗಿದೆ ಎಂದು ಹೇಳಿದರು ನಾನು ಜ್ಞಾನಾರ್ಜನೆ ಮಾಡಿದ ವಿದ್ಯಾರ್ಥಿ ಕೈಯುಮ ಸಾರವಾನ ಸೈನಿಕನಾಗಿ ಸೇವೆ ಸಲ್ಲಿಸಿ ಕಾರ್ಗಿಲ್ ಯುದ್ದದಲ್ಲಿ ಹೊರಾಡಿದನು ಆಸಂದರ್ಭದಲ್ಲಿ ಗುಂಡು ಹಾರಿದರಿಂದ ಎರಡು ಕಿವಿಗಳಿಗೆ ಕೆಳಿಸುವುದಿಲ್ಲಾ ಇಂತಹ ಸೈನಿಕ ನಮ್ಮ ವಿದ್ಯಾರ್ಥಿ ಎಂದು ಹೇಳಲು ನನಗೆ ಅತೀವ ಸಂತಸ ವಾಗುತ್ತದೆಸೈನದಲ್ಲಿ ಕೆಲಸ ಮಾಡಿರುವ ಎಲ್ಲಾ ಮಾಜಿ ಸೈನಿಕರಿಗೆ ಧನ್ಯವಾದ ಅರ್ಪಿಸಿದರು .
ಹಿರಿಯ ಶಿಕ್ಷಕರಾದ ಬಿ.ಎ.ಪಾಟೀಲ, ಬಿ.ಆರ್.ಜಟಾರ, ಬಸಪ್ಪಾ ಕೋರೆ, ಎ.ಡಿ.ಅಲಾಸೆ, ಜಿನಪ್ಪಾ ಮುರಗುಂಡೆ, ಅಕ್ಕಾತಾಯಿ ಪಾತರೊಟ, ನಿವೃತ ಶಿಕ್ಷಕರಾದ ಟಿ.ಎಂ.ಪರುತಗಾಲೆ, ಎಸ್.ವಾಯ್.ಕುಂಬಾರ ಇವರನ್ನು ಸನ್ಮಾನಿಸಿಲಾಯಿತು . ಎಲ್ಲ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು ಸಿಹಿ ಭೋಜನ ಸೇವಿಸಿ ಒಂದು ದಿನ ಶಿಕ್ಷಕರೊಂದಿಗೆ ಸಂತಸದಿಂದ ಕಳೆದರು. ಸಮಾರಂಭದಲ್ಲಿ ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿದ ಕೈಯುಮ ಸಾರವಾನ, ಪಿ.ಎಚ್.ಡಿ ಮಾಡಿದ ಪ್ರೊಫೆಸರ್ ಅನೀಲ ಇರಾಜ, ಸನ್ಮತಿ ವಿದ್ಯಾಲಯದ ಶಿಕ್ಷಕ ಸುನೀಲ ಇರಾಜ ಇವರು ಜಿಲ್ಲಾ ಆದರ್ಶ ಶಿಕ್ಷಕರಾಗಿ ಆಯ್ಕೆಯಾಗಿದರಿಂದ ಹಾಗೂ ಸನ್ಮತಿ ಶಿಕ್ಷಣ ಸಮ್ಮತಿಗೆ ನೂತನ ಅದ್ಯಕ್ಷರಾದ ವಿನೋದ ಬರಗಾಲೆ, ಉಪಾಧ್ಯಕ್ಷ ಅಜೀತ ನಾಂದ್ರೆ ಇವರನ್ನು ಸನ್ಮಾನಿಸಲಾಯಿತು
ಸುಕುಮಾರ ಬನ್ನೂರೆ
ಇನ್ ನ್ಯೂಸ್ ಕಾಗವಾಡ