ಬಹುದಿನಗಳ ಬೇಡಿಕೆಯಾಗಿ ಉಳಿದಿರುವ ಅಥಣಿ ಸ್ವತಂತ್ರ ಜಿಲ್ಲೆ ಘೋಷಣೆ ಮಾಡಬೇಕೆಂದು ಕಾಗವಾಡ ತಾಲೂಕಿನ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾ ಸಂಚಾಲಕ ಸಂಜಯ್ ತಳವಳಕರ್ ಮತ್ತು ತಾಲೂಕ ಅಧ್ಯಕ್ಷ ಸಚಿನ್ ಪೂಜಾರಿ ಇವರ ನೇತೃತ್ವದಲ್ಲಿ ತಹಶಿಲ್ದಾರ್ ರಾಜೇಶ್ ಬುರ್ಲಿ ಇವರಿಗೆ ಮನವಿ ನೀಡಲಾಯಿತು
ಸೋಮವಾರ ರಂದು ಕಾಗವಾಡ ತಹಶೀಲ್ದಾರ್ ಕಚೇರಿಗೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಂಜಯ ತಳವಲ್ಕರ ಅಧ್ಯಕ್ಷ ಸಚಿನ್ ಪೂಜಾರಿ, ವಿಜಯ್ ಅಸುದೇ, ಪರಶುರಾಮ್ ಕಾಂಬಳೆ, ಸಂದೀಪ್ ಬಿರನಗಿ, ಮಾಧವಾನಂದ ಮೇತ್ರಿ, ಪ್ರಕಾಶ್ ದೊಂಡರೆ, ವಿಶಾಲ್ ದೊಂಡಾರೆ, ಬಾಪು ದೂಂಡಾರ, ವಿದ್ಯಾಧರ ಕಾಂಬಳೆ, ನ್ಯಾಯವಾದಿ ಅಮಿತ್ ದಿಶಾಂತ್, ಹನುಮಂತ್ ಮುಧೋವಿ, ರವಿ ಕುರ್ಣೆ, ಮುಂತಾದ ಯುವ ದಲಿತ ಮುಖಂಡರು ತಹಶೀಲ್ದಾರರಿಗೆ ಮನವಿ ಅರ್ಪಿಸಿ ಅಥಣಿ ಜಿಲ್ಲೆ ಘೋಷಣೆ ಮಾಡಲು ಸಮಸ್ತ ದಲಿತ ಸಂಘರ್ಷ ಸಮಿತಿಯ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.ಪ್ಲೊ
ಜಿಲ್ಲಾ ಸಂಚಾಲಕ ಸಂಜಯ್ ತಳವಳಕರ್ ಮಾತನಾಡಿ, ಅಥಣಿ ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಬಲಿಷ್ಠವಾಗಿದೆ, ಜಿಲ್ಲೆಗೆ ಅನುಗುನವಾಗಿ ಜನಸಂಖ್ಯೆಇದೆ, ವಿಸ್ತೀರ್ಣ ಶಿಕ್ಷಣ, ಕೈಗಾರಿಕೆ, ಕಂದಾಯ ಸಂಗ್ರಹ, ಉದ್ಯೋಗ ಅವಕಾಶದಲ್ಲಿ ಅಥಣಿಯ ಸಾಕಷ್ಟು ಮುಂದುವರೆದ ಕ್ಷೇತ್ರವಾಗಿದೆ.
ಗ್ರಾಮೀಣ ಸೊಗಡವನ್ನು ಉಳಿಸಿಕೊಂಡು ಮರಾಠಿಗರರ ಗಾಳಿಗೆ ಸಿಲುಕದೆ ಉಳಿದಿದೆ. ಮಹಾರಾಷ್ಟ್ರದ ಜತ್ ತಾಲೂಕಿನ ಹಲವು ಗ್ರಾಮಗಳು ಅಥಣಿ ಜಿಲ್ಲೆ ಎಂದು ಘೋಷಣೆಯಾದರೆ ನಾವು ಆ ಜಿಲ್ಲೆಗೆ ಸೇರುತ್ತವೆ ಎಂದು ಈ ಮೊದಲೇ ಹೇಳಿದ್ದಾರೆ, ಅದನ್ನು ಗಮನಿಸಿ ಅಥಣಿ ಸ್ವತಂತ್ರ ಜಿಲ್ಲೆ ಎಂದು ಘೋಷಣೆ ಮಾಡಬೇಕೆಂದು ಮನವಿ ಮಾಡಿಕೊಂಡರು
ಮನವಿ ಸ್ವೀಕರಿಸಿದ ತಹಸಿಲ್ದಾರ್ ರಾಜೇಶ್ ಬುರ್ಲಿ ನಿಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರದ ಗಮನಕ್ಕೆ ತರುವ ಕಾರ್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಸೋಮವಾರ ದಂದು ಅಥಣಿ ಪಟ್ಟಣದಲ್ಲಿ ಮಾಜಿ ಡಿಸಿಎಂ ಹಾಗೂ ಶಾಸಕರಾದ ಲಕ್ಷ್ಮಣ ಸವದಿ, ಕಾಗವಾಡ ಶಾಸಕ ರಾಜು ಕಾಗೆ ಇವರು ಜನರ ಬೇಡಿಕೆಗಳ ಮನವಿಗಳನ್ನು ಸ್ವೀಕರಿಸಿ ಅಥಣಿ ಜಿಲ್ಲೆಯಾದರೆ ಒಳ್ಳೆಯ ಬೆಳವಣಿಗೆ ಆಗಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಕಾಗವಾಡ ತಾಲೂಕಿನ ನ್ಯಾಯವಾದಿ ಸಂಘದ ವತಿಯಿಂದ ಅಥಣಿ ಸ್ವತಂತ್ರ್ಯ ಜಿಲ್ಲಾ ಬೇಡಿಕೆಗೆ ಬೆಂಬಲ ಸೂಚಿಸಿ ತಮ್ಮ ಮನವಿ ಪತ್ರ ತಹಶಿಲ್ದಾರ್ ರಾಜೇಶ್ ಬುರ್ಲಿ ಇವರಿಗೆ ಅರ್ಪಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಸಂಘದ ಅಧ್ಯಕ್ಷ ಎಸ್.ಆರ್.ನಿಂಬಾಳಕರ್, ಉಪಾಧ್ಯಕ್ಷ ಏ.ಎಸ್.ಕಮತೆ, ಬಿ.ಎಸ್ಮೋಳೆ, ಎಸ್.ಎಂ.ಭರಮದೇ, ಸಿ.ಎ.ಅಂಬೋಳಿ, ಎ.ಎ.ಪಾಟೀಲ್, ಅರವಿಂದ್ ಭಂಡಾರೆ ಸೇರಿದಂತೆ ನ್ಯಾಯವಾದಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ಸುಕುಮಾರ ಬನ್ನೂರೆ
ಇನ್ ನ್ಯೂಜ್ ಕಾಗವಾಡ