Uncategorized

ಉತ್ತರ ಕರ್ನಾಟಕದಲ್ಲಿಯೇ ಪ್ರಪ್ರಥಮ ಬಾರಿಗೆ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ “ಮೊಣಕಾಲಿನ ರೋಬೊಟಿಕ ಶಸ್ತ್ರಚಿಕಿತ್ಸೆ”.. !

Share

ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಉತ್ತರ ಕರ್ನಾಟಕದಲ್ಲಿಯೇ ಪ್ರಪ್ರಥಮ ಬಾರಿಗೆ “ಮೊಣಕಾಲಿನ ರೋಬೊಟಿಕ ಶಸ್ತ್ರಚಿಕಿತ್ಸೆ” ಜರುಗಿಸಲಾಯಿತು

ವೈದ್ಯಕೀಯ ಲೋಕದಲ್ಲಿ ಹೊಸ ಆವಿಸ್ಕಾರ ಮಾಡಿದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹೆಸರಾಂತ ಎಲುಬು ಕೀಲು ಶಸ್ತ್ರಚಿಕಿತ್ಸೆ ಡಾ ಜಗದೀಶ ಸುರಣ್ಣವರ ಮಾತನಾಡುತ್ತಾ ಇದು ವೈದ್ಯಕೀಯ ರಂಗದಲ್ಲಿ ಕ್ರಾಂತಿಕಾರಿಯಾದ ಬೆಳವಣಿಗೆಯಾಗಿದೆ. ಈ ರೋಬೋಟಿಕ್ ತಂತ್ರಜ್ಞಾನವು ಸರಳ ಕಡಿಮೆ ರಕ್ತಸ್ರಾವ, ಕಡಿಮೆ ಕತ್ತರಿಸುವ, ಸುಲಲಿತವಾಗಿ, ಕಡಿಮೆ ನೋವು ಹಾಗೂ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ತಂತಾನೆ ಅಳತೆಗೆ ತಕ್ಕಂತೆ ಕತ್ತರಿಸುವ ಅತ್ಯಾದುನಿಕತೆಯನ್ನು ಹೊಂದಿದೆ ಇದರಿಂದ ರೋಗಿಗಳಿಗೆ ಈ ಶಸ್ತ್ರಚಿಕಿತ್ಸೆಯಿಂದ ಆಸ್ಪತ್ರೆಯಲ್ಲಿ ಉಳಿದುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಸಂಧಿವಾತ, ತೀರ್ವ ಮೊನಕಾಲು ನೋವು, ಎಲುಬಿನ ಕ್ಯಾಲ್ಸಿಯಂ ನ ತೊಂದರೆ ಅನುಭವಿಸುವ ರೋಗಿಗಳು ತಕ್ಷಣವೇ ವೈದ್ಯರನ್ನು ಭೇಟಿ ಆಗಿ ಅಗತ್ಯಬಿದ್ದರೆ ಶಸ್ತ್ರಚಿಕಿತ್ಸೆಗೆ ಮಾಡಿಸಿಕೊಳ್ಳುವುದು ಒಳಿತು ಎಂದರು.

ಈ ಸಂದರ್ಭದಲ್ಲಿ ಡಾ. ಜಗದೀಶ ಸುರಣ್ಣವರ ಅವರನ್ನು ಅಭಿನಂದಿಸುತ್ತ ಮಾತನಾಡಿದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು ಇಂತಹ ತಂತ್ರಜ್ಞಾನ ಬಳಕೆಯು ಉತ್ತರ ಕರ್ನಾಟಕದಲ್ಲಿಯೇ ಪ್ರಪ್ರಥಮವಾಗಿ ನಮ್ಮ ಆಸ್ಪತ್ರೆಯಲ್ಲಿ ಮಾಡುತ್ತಿರುವದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಈ ಮೊದಲು ವೈದ್ಯರು ತಮ್ಮ ಸ್ವಹಸ್ತದಿಂದ ಇಂತಹ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸುತ್ತಿದ್ದರು. ಇಂತಹ ತಂತ್ರಜ್ಞಾನಗಳ ಬಳಕೆಯಿಂದ ಮಾನವಶ್ರಮವ್ಯಯವನ್ನು ಕಡಿಮೆ ಗೊಳಿಸಿ ರೋಗಿಗಳಿಗೆ ಉತ್ಕೃಷ್ಟ ಸೇವೆಯನ್ನು ನೀಡುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಎಲುಬು ಕೀಲು ವಿಭಾಗದ ಮುಖ್ಯಸ್ಥರಾದ ಡಾ. ಬಿ ಬಿ ಪುಟ್ಟಿ ಡಾ. ಅಮಿತ ಪಿಂಗಟ್, ಡಾ. ಸಿ ವಿ ಶೆಟ್ಟರ್, ಡಾ. ವಿದ್ಯಾನಂದ ಮಾಕನಿ, ಡಾ. ಆನಂದ ಖಟಾದಿ ಎಲ್ಲರೂ ಡಾ. ಜಗದೀಶಸುರಣ್ಣವರ ಅವರಿಗೆ ಅಭಿನಂದಿಸಿದರು.

ಈ ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಿದ್ದ ಡಾ. ಜಗದೀಶ ಸುರಣ್ಣವರ, ಅರವಳಿಕೆ ವಿಭಾಗದ ಮುಖ್ಯಸ್ಥರಾದ ಡಾ. ಆರ್ ಜಿ ನೆಲವಿಗಿ, ಡಾ. ಶ್ವೇತಾ ಹಿರೇಮಠ ಹಾಗೂ ಇನ್ನುಳಿದ ವೈದ್ಯ ವೃಂದದವರಿಗೆ ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು ಹಾಗೂ ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಶುಭ ಹಾರೈಸಿದ್ದಾರೆ.

Tags: