ವ್ಯಸನ ಮುಕ್ತ ಜೀವನದಿಂದ ಮನುಷ್ಯನಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ. ಮತ್ತು ಅವರು, ಮಾನಸಿಕ, ದೈಹಿಕ ಮತ್ತು ಆರ್ಥಿಕವಾಗಿ ಸುಧಾರಣೆಯಾಗಲು ಒಳ್ಳೆಯ ಅವಕಾಶ ಸಿಗುತ್ತದೆ ” ಎಂದು ವಿಜಯಾ ಅರ್ಥೋ ಮತ್ತು ಥರ್ಮೋ ಸಂಸ್ಥೆಯ ನಿರ್ದೇಶಕರಾದ ಡಾ// ರವಿ ಪಾಟೀಲ್ ರವರು ಹೇಳಿದರು.
ತಾಲ್ಲೂಕಿನ ಹೊನಗಾ ಗ್ರಾಮದ ಡಾ// ರವಿ ಪಾಟೀಲ್ ಆಯುರ್ವೇದಿಕ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಹೊನಗಾದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳಗಾವಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾದ 1770 ನೇ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮದ್ಯ- ಮಾದಕಗಳಿಂದ ದೂರವಾದರೆ ಸಮಾಜದಲ್ಲಿ ಶಾಂತಿ ನೆಲೆಸಲಿದೆ. ನಿಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಮದ್ಯವರ್ಜನ ಶಿಬಿರ ಆಯೋಜಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ನಿರ್ದೇಶಕರು ಆದ ಸತೀಶ ನಾಯ್ಕ್ ಅವರು ಮಾತನಾಡಿ, “ದೇಶದ ಆರ್ಥಿಕ ಪ್ರಗತಿಗೆ ವ್ಯಸನ ಮುಕ್ತ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ವಾಗಬೇಕಿದೆ. ಆ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿರುವ ವಿವಿಧ ಯೋಜನಾ ಕಾರ್ಯಗಳು ನಿಜಕ್ಕೂ ಶ್ಲಾಘನೀಯ,” ಎಂದು ಹೇಳಿದರು.
ಜನಜಾಗೃತಿ ಸದಸ್ಯರಾದ ಎನ್ ಓ ಚೌಗಲೆ ರವರು ಉತ್ತಮ ಆರೋಗ್ಯಕ್ಕೆ ದುಷ್ಚಟ ನಿವಾರಣೆ ಅಗತ್ಯ ಎಂದು ತಿಳಿಸಿದರು
ಶಿಬಿರದ ಯೋಜನಾಧಿಕಾರಿ ಭಾಸ್ಕರವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಮದ್ಯವರ್ಜನ ಶಿಬಿರದ ಗೌರವಾದ್ಯಕ್ಷ ಕಲ್ಲಗೌಡ ಪಾಟೀಲ್, ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಸೊಪ್ಪಿಮಠ, ತಾಲೂಕಿನ ಯೋಜನಾಧಿಕಾರಿ ನಾಗರಾಜ ಹದ್ಲಿ , ಗೌಡಪ್ಪ ಶಿವನಗೌಡ ಪಾಟೀಲ ,ಡಾ// ಚಿಂತಾಮನಿ ಕಡೋಲಿಕರ ಶಿಬಿರದ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಸದಸ್ಯರಾದ ಪ್ರಭಾಕರ ಕುಂದುರ, ಅಗಸಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಮೃತ ಮುದ್ಯಣ್ಣವರ, ರಾಜು ಬೆಲ್ಲದ ವಿನೋದ ಜಗಜಂಪಿ, ಮೇಲ್ವಿಚಾರಕ ನಾಗಪ್ಪಗೌಡ
ಸಿಬಿರಾಧಿಕಾರಿಗಳು ನಾಗೇಂದ್ರ ಆರೊಗ್ಯ ಸಹಾಯಕಿ ಸೌಮ್ಯ, ಎಲ್ಲಾ ವಲಯದ ಮೇಲ್ವಿಚಾರಕರು, ಬೆಳಗಾವಿ ಬಿ, ಹೊನಗಾ, ಕಡೋಲಿ ವಲಯದ ಸೇವಾ ಪ್ರತಿನಿದಿಗಳು, ಸಿ ಎಸ್ ಸಿ ಸಮನ್ವುಧಿಕಾರಿ ಜಿತೇಂದ್ರ, ಕೃಷಿ ಮೇಲ್ವಿಚಾರ ಸತೀಶ ಗೌಡ, ಇತರರು ಇದ್ದರು. ತಾಲ್ಲೂಕಿನ ಯೋಜನಾಧಿಕಾರಿ ನಾಗರಾಜ ಹದ್ಲಿ ಸ್ವಾಗತಿಸಿದರು. ಮೇಲ್ವಿಚಾರಕಿ ವೈಶಾಲಿ ನಿರೂಪಿಸಿದರು. ಹೊನಗಾ ಮೇಲ್ವಿಚಾರಕ ಮಹಾಬಲೇಶ್ವರ ವಂದಿಸಿದರು.