ಸಂಕೇಶ್ವರ ನಗರದಲ್ಲಿ ಸ್ವಚ್ಚ ಸಂಕೇಶ್ವರ ಅಭಿಯಾನಕ್ಕೆ ಯಶಸ್ವಿಯಾಗಿ 12 ನೇ ವಾರ ತಲುಪಿದೆ ಇಂದು ಬೆಳಗಿನ ಜಾವ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಮತ್ತು ನಿಡಸೋಸಿ ರಸ್ತೆಯ ನಿವಾಸಿಗಳು ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡು ಪ್ರತಿ ಗಲ್ಲಿ ಮತ್ತು ರಸ್ತೆ ಯನ್ನು ಸ್ವಚ್ಚ ಮಾಡಿ ಸಾರ್ವಜನಿಕರಲ್ಲಿ ಜಾಗ್ರತೆ ಮೂಡಿಸಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಪುರಸಭೆ ಸದಸ್ಯ ಸುನಿಲ್ ಪರ್ವತರಾವ ನಿಡಸೋಸಿ ಶ್ರಿಗಳ ಪ್ರೇರಣೆಯಿಂದ ಮತ್ತು ಅವರ ಮಾರ್ಗದರ್ಶನದಲ್ಲಿ ಸ್ವಚ್ಚತಾ ಅಭಿಯಾನ ಹಮ್ಮಿಕೊಂಡಿದ್ದು, ಸಾರ್ವಜನಿಕರು ತಮ್ಮ ಮನೆಯ ತ್ಯಾಜ್ಯ ವಸ್ತುವನ್ನು ರಸ್ತೆ ಬದಿಗೆ ಹಾಕದೆ ಪುರಸಭೆ ತ್ಯಾಜ್ಯ ವಿಲೆವಾರಿ ವಾಹನದಲ್ಲಿ ಹಾಕಬೇಕು ಎಂದು ವಿನಂತಿಸಿದರು.
ನಗರದ ಪ್ರತೀಷ್ಟಿತ ವೈದ್ಯ ಡಾ,ರಮೇಶ ದೋಡಬಂಗಿ ಮಾತನಾಡಿ ಸಂಕೇಶ್ವರ ನಗರವನ್ನು ಸ್ವಚ್ಚತೆ ಮಾಡುವಂತೆ ತಿಳುವಳಿಕೆ ನೀಡುವ ಮೂಲಕ ಸುಂದರ ಮತ್ತು ಸೌಂದರ್ಯ ನಗರ ಮಾಡುವ ಉದ್ದೇಶದಿಂದ ಜನರ ಆರೋಗ್ಯ ಕಾಪಾಡುವ ಮೂಲಕ ಸ್ವಚ್ಚ ಸಂಕೇಶ್ವರ ಅಭಿಯಾನದೊಂದಿಗೆ ಸ್ವಚ್ಚ ಭಾರತ ಮಾಡಬೇಕಾಗಿದೆ ಎಂದರು ನಿಡಸೋಸಿ ಶ್ರಿಗಳ ಕಾರ್ಯ ಶ್ಲಾಘನಿಯ ಎಂದರು.
ಈ ಸಂದರ್ಬದಲ್ಲಿ ಸಂಕೇಶ್ವರ ನಗರದ ಬಸವರಾಜ ನಾಗರಾಳೆ,ಉಮೇಶ ಅರಶಿದ್ದಿ, ಅನೀಲ ಲಟ್ಟಿ, ಕುಮಾರ ಸವಸುದ್ದಿ, ಶಿವಾನಂದ ಸಾರವಾಡಿ, ಗಜಾನನ ಕೋಳ್ಳಿ, ಶಿವಾನಂದ ಮುಡಶಿ, ಕಾಶಿನಾಥ ವಡೇರ, ಸಿ ಬಿ ಮಠಪತಿ, ರಾಜು ಜಾಗನೂರೆ ಮೋದಲಾದವರು ಉಪಸ್ಥಿತರಿದ್ದರು. ಸ್ವಚ್ಚತಾ ಅಭಿಯಾನದಲ್ಲಿ ಮಹಿಳೆಯರು ಮಕ್ಕಳು ಭಾಗವಹಿಸಿ ನಗರವನ್ನು ಸ್ವಚ್ಚತೆ ಮಾಡಿದರು.