ಹೊಸ ವರ್ಷ ಬಂತೆಂದರೆ ಎಲ್ಲರಿಗೂ ನೆನಪಾಗುವುದು ಬೆಳಗಾವಿಯ ರೋಟರಿ ಫುಡ್ ಫೆಸ್ಟಿವಲ್… ಈ ವರ್ಷವೂ ಬೆಳಗಾವಿ ರೋಟರಿ ಕ್ಲಬ್ ವತಿಯಿಂದ 2024 ರ ಜನವರಿ 5 ರಿಂದ ಜನವರಿ 14 ರ ವರೆಗೆ ಅನ್ನೋತ್ಸವ ನಡೆಯಲಿದೆ ಅನ್ನೋತ್ಸವದಲ್ಲಿ ವಿವಿಧ ಪ್ರದೇಶಗಳಿಂದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಗಳು ಜನರಿಗೆ ದೊರೆಯಲಿವೆ ರೋಟರಿ ಅನ್ನೋತ್ಸವದ ಭೂಮಿಪೂಜೆಯನ್ನು ಇಂದು ಮಾಡಲಾಯಿತು.
ರೋಟರಿಯ ಅನ್ನೋತ್ಸವವು ಕಳೆದ 27 ವರ್ಷಗಳಿಂದ ಅಚ್ಚುಕಟ್ಟಾಗಿ ನಡೆಯುತ್ತಿದೆ , ಪಾರ್ಕಿಂಗ್ ವ್ಯವಸ್ಥೆ ಇರಲಿದೆ ದೇಶದ ವಿವಿಧ ರಾಜ್ಯಗಳ ಪ್ರಸಿದ್ಧ ಖಾದ್ಯಗಳನ್ನು ಜನರು ಸವಿದು, ಮನರಂಜನೇ ಕಾರ್ಯಕ್ರಮವನ್ನು ಆನಂದಿಸುತ್ತಿದ್ದಾರೆ ಪ್ರತಿ ವರ್ಷವೂ ಇಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತಿದೆ . ಈ ವರ್ಷವೂ ಬೆಳಗಾವಿಯ ಸಿಪಿಇಡಿ ಮೈದಾನದಲ್ಲಿ ರೋಟರಿ ಅನ್ನೋತ್ಸವ ನಡೆಯಲಿದೆ , ವಿಶಾಲವಾದ ಜಾಗದಲ್ಲಿ. ರೋಟರಿ ಕ್ಲಬ್ ಆಫ್ ಬೆಳಗಾವಿಯ ಅನ್ನೋತ್ಸವಕ್ಕೆ ಇಂದು ಭೂಮಿಪೂಜೆ ಮಾಡಲಾಯಿತು
ಈ ಕುರಿತು ಇನ್ ನ್ಯೂಸ್ ಗೆ ಮಾಹಿತಿ ನೀಡಿದ ಕಾರ್ಯಕ್ರಮದ ಅಧ್ಯಕ್ಷ ಸುನೀಶ ಮೇತ್ರಾಣಿ, ರೋಟರಿ ಕ್ಲಬ್ ಆಫ್ ಬೆಳಗಾವಿ ವತಿಯಿಂದ ರೋಟರಿ ಅನ್ನೋತ್ಸವವನ್ನು ಜನವರಿ 5 ರಿಂದ ಜನವರಿ 14 ರವರೆಗೆ ಆಯೋಜಿಸಲಾಗಿದೆ. ಹತ್ತು ದಿನಗಳ ಕಾಲ ಊಟ-ತಿಂಡಿ-ಮನೋಹರದಿಂದ ಕೂಡಿದ ಈ ಅನ್ನೋತ್ಸವ ಬೆಳಗಾವಿಯ ಜನತೆಗೆ ಹಬ್ಬವಾಗಲಿದೆ. ಮೊದಲ ದಿನ ಅಖಿಲ ಭಾರತ ದೇಹದಾರ್ಢ್ಯ ಸ್ಪರ್ಧೆ ನಡೆಯಲಿದ್ದು, ಎರಡನೇ ದಿನ ಮಹಿಳೆಯರಿಗಾಗಿ ಮಿಸೆಸ್ ಬೆಳಗಾವಿ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿದೆ. ಈ ಆಹಾರೋತ್ಸವದಲ್ಲಿ 15 ರಿಂದ 20 ರಾಜ್ಯಗಳಿಂದ ವಿವಿಧ ಆಹಾರ ಮಳಿಗೆಗಳು ಇರುತ್ತವೆ ಮತ್ತು ಆಹಾರಪ್ರೇಮಿಗಳು ತಮ್ಮ ನೆಚ್ಚಿನ ಆಹಾರವನ್ನು ಸವಿಯುತ್ತಾರೆ. ಈ ಬಾರಿ ಜಾಗವೂ ವಿಶಾಲವಾಗಿದ್ದು, ವಾಹನ ನಿಲುಗಡೆಗೂ ವ್ಯವಸ್ಥೆ ಕಲ್ಪಿಸಲಾಗುವುದು. ಎಲ್ಲರೂ ಭೇಟಿ ನೀಡಿ ಅನ್ನೋತ್ಸವವನ್ನು ಸವಿಯುವಂತೆ ಮನವಿ ಮಾಡಿದರು.
ಸಂತೋಷ್ ಪಾಟೀಲ್ ಮಾತನಾಡುತ್ತಾ ಈ ವರ್ಷ ಕಾಶ್ಮೀರಿ, ಲಕ್ನೋ, ಬಿಹಾರ, ದೆಹಲಿ, ಹೈದರಾಬಾದ್, ಪಂಜಾಬ್, ಚಂಡೀಗಢ ಮುಂತಾದ ಕಡೆಗಳಿಂದ ತಿನಿಸುಗಳು ಇರುತ್ತವೆ ಪ್ರತಿ ದಿನ 15 ರಿಂದ 20 ಸಾವಿರ ಜನರು ಅನ್ನೋತ್ಸವಕ್ಕೆ ಆಗಮಿಸುವ ನಿರೀಕ್ಷೆ ಇದೆ. ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ವಿಶಾಲವಾದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಈ ವರ್ಷ 1,80,000 ಚದರ ಅಡಿ ಪ್ರದೇಶದಲ್ಲಿ ಅನ್ನೋತ್ಸವ ನಡೆಯಲಿದೆ ಎಂದರು
ರೋಟರಿ ಕ್ಲಬ್ ಆಫ್ ಬೆಳಗಾವಿ ಅಧ್ಯಕ್ಷ ಜೈದೀಪ್ ಸಿದ್ದಣ್ಣನವರ್ ಮಾತನಾಡಿ, ಈ ವರ್ಷ 27ನೇ ವರ್ಷದ ಅನ್ನೋತ್ಸವ. ಲಿಂಗರಾಜ್ ಕಾಲೇಜು ಮೈದಾನದಲ್ಲಿ ಮೊದಲ ಅನ್ನೋತ್ಸವ ನಡೆಯಿತು. ಕಳೆದ ತಿಂಗಳು ನಾವು ವಿಶ್ವ ಆಹಾರ ಉತ್ಸವಕ್ಕೆ ಭೇಟಿ ನೀಡಿದ್ದೇವೆ ಮತ್ತು ಕಾಶ್ಮೀರ, ಲಕ್ನೋ, ದೆಹಲಿ, ಪಂಜಾಬ್, ಚಂಡೀಗಢ, ರಾಜಸ್ಥಾನಗಳಿಂದ ಸ್ಟಾಲ್ ಹೋಲ್ಡರ್‌ಗಳನ್ನು ಆಹ್ವಾನಿಸಿದ್ದೇವೆ. ಬೆಳಗಾವಿಯ ಜನತೆಗೆ ವಿವಿಧ ಪ್ರದೇಶಗಳ ಆಹಾರ ಸವಿಯಲು ಅವಕಾಶ ನೀಡುವುದು ನಮ್ಮ ಉದ್ದೇಶವಾಗಿದೆ . ಪುಣೆ, ಗೋವಾ, ಬೆಂಗಳೂರಿನಿಂದಲೂ ಆರ್ಕೆಸ್ಟ್ರಾಗಳು ಬರುತ್ತಿವೆ. ಈ ವರ್ಷ ಅನ್ನೋತ್ಸವದಲ್ಲಿ 155 ಮಳಿಗೆಗಳು, ಸಸ್ಯಾಹಾರಿ ಮತ್ತು ಮಾಂಸಾಹಾರಿ ಗ್ರಾಹಕರ ಮಳಿಗೆಗಳು ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್ ಕೂಡ ಇರಲಿದೆ. ಇದಲ್ಲದೇ, ಚಿಕ್ಕ ಮಕ್ಕಳನ್ನು ಕರೆದುಕೊಂಡು ಬರುವ ಮಹಿಳೆಯರಿಗೆ ಬೇಬಿ ಚೇಂಜ್ ರೂಂ ಮತ್ತು ಬೇಬಿ ಫೀಡಿಂಗ್ ರೂಮ್ ಕೂಡ ಒದಗಿಸಲಾಗುವುದು. ಅನ್ನೋತ್ಸವಕ್ಕೆ ವಿವಿಧ ಇಲಾಖೆಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ವರ್ಷವೂ ಬೆಳಗಾವಿಯ ಜನತೆ ಅನ್ನೋತ್ಸವಕ್ಕೆ ಸಂಪೂರ್ಣಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮನೋಜ್ ಮೈಕಲ್, ತುಷಾರ ಪಾಟೀಲ, ಸಂಜಯ ಕುಲಕರ್ಣಿ, ಮನೋಜ್ ಪೈ ಮತ್ತಿತರರು ಉಪಸ್ಥಿತರಿದ್ದರು.