ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದ ಮರಡಿಮಠದ ಶ್ರೀ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದೆ ಜಂಗಿ ಕುಸ್ತಿಗಳನ್ನು ಮರಡಿಮಠದ ಶ್ರೀಮದ್ ಘನಲಗ್ ಚಕ್ರವರ್ತಿ ಡಾ: ಪವಾಡೇಶ್ವರ ಸ್ವಾಮಿಗಳು ಕುಸ್ತಿ ಕಣದ ಪೂಜೆ ನೇರವೆರಿಸಿ ಚಾಲನೆ ನೀಡಿದರು. ಬಯಲು ಕಣದಲ್ಲಿ ನಡೆದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿ ಕ್ರೀಡಾಪ್ರೇಮಿಗಳ ಕನ್ಮನ ಸೆಳೆದವು.
ನಡೆಸಲಾದ ಪಂದ್ಯಾವಳಿಯಲ್ಲಿ ಪರಸ್ಥಳಗಳಿಂದ ಆಗಮಿಸಿದ 50ಕ್ಕೂ ಹೆಚ್ಚು ಕುಸ್ತಿಪಟುಗಳು ತಮ್ಮ ತಾಕತ್ತು ತೊರಿಸುವ ದೃಶ್ಯ ನೋಡುಗರ ಮನದಲ್ಲಿ ರೋಮಾಂಚನ ಸೃಷ್ಟಿಸಿತು.ಬೆಳ್ಳಿ ಡಾಲ,ಬೆಳ್ಳಿ ಕಪಗಾಗಿ ನಡೆದ ಪೈಲವಾನರ ಹೊರಾಟವಂತೂ ಪ್ರೇಕ್ಷಕರು ಕಣ್ಣು ಪಿಳುಕಿಸದೆ ವಿಕ್ಷಿಸಿದರು.
ಈ ಕಬಡ್ಡಿ ಪಂದ್ಯಾವಳಿಯನ್ನು ಮರಡಿಮಠದ ಶ್ರೀ ಡಾ: ಘನಲಿಂಗ ಚಕ್ರವರ್ತಿ ಪವಾಡೇಶ್ವರ ಸ್ವಾಮಿಗಳು ಸಸಿಗೆ ನೀರು ಉಣಿಸಿ ಮೈದಾನಕ್ಕೆ ಪೂಜೆ ಸಲ್ಲಿಸಿ ರಾಷ್ಟ್ರಗೀತೆ ಹಾಡುವ ಮೂಲಕ ಮೋದಲನೆ ಪಂದ್ಯಕ್ಕೆ ಚಾಲನೆ ನೀಡಿದರು.ಈ ಮಹಿಳಾ ಕಬಡ್ಡಿ ಪಂದ್ಯಾವಳಿಯನ್ನು ನೋಡಲು ವಿವಿಧ ಭಾಗಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಸಾಗರೋಪಾದಿಯಲ್ಲಿ ಬಂದು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಆಟಗಾರರಿಗೆ ಅವರ ಪ್ರತಿ ದಾಳಿಗೆ ಸಿಳ್ಳೆ ಹೊಡೆದು ಹುರುದುಂಬಿಸುತಿದ್ದರು.ಇವತ್ತು ನಡೆದ ಪಂದ್ಯಗಳು ರೋಚಕವಾಗಿದ್ದವು.
ಕಣದ ಸುತ್ತ ಹಲಗಿ ಬಾರಿಸುತ್ತ ಮನರಂಜನೆ ನೀಡುತಿದ್ದರು. ದೊಡ್ಡ ಪೈಲವಾನರ ಕುಸ್ತಿಗಳಂತೂ ಜನಮನ ಸೆಳೆದವು,ಗೆದ್ದು ನಗೆ ಬಿರಿದ ಪೈಲ್ವಾನರಿಗೆ ಮಠದ ಶ್ರೀಗಳು ಆಶಿರ್ವದಿಸಿ ಹರಿಸಿದರು. ಈ ಸಂಧರ್ಭದಲ್ಲಿ ಜಾತ್ರಾ ಕಮಿಟಿಯ ಸದಸ್ಯರು,ಹಿರಿಯರು ಗ್ರಾಮದವರು ಉಪಸ್ಥಿತರಿದ್ದರು.