ಬೆಳಗಾವಿ ತಾಲೂಕಿನ ಕಂಗ್ರಾಳಿ ಬುದ್ರುಕ್ ನಲ್ಲಿ ಅನೈತಿಕ ಸಂಬಂಧದ ಕಾರಣಕ್ಕೆ ಪತಿಯನ್ನು ಅನುಮಾನಾಸ್ಪದವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತರನ್ನು ಸುಭಾಷ ಕಲ್ಲಪ್ಪ ಹುರುಡೆ (56) ಎಂದು ಗುರುತಿಸಲಾಗಿದೆ. ಆತನ ಪತ್ನಿಯೇ ಆತನನ್ನು ಕೊಂದಿದ್ದಾಳೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಈ ಬಗ್ಗೆ ದೊರೆತ ಮಾಹಿತಿಯಂತೆ ಕಂಗ್ರಾಳಿ ಬುದ್ರುಕ್ ನಲ್ಲಿ ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದ ಸುಭಾಷ ಕಲ್ಲಪ್ಪ ಹುರುಡೆ ಅವರ ರಿಕ್ಷಾದಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸ್ಥಳದಲ್ಲಿ ಕ್ರಿಕೆಟ್ ಆಡುತ್ತಿದ್ದ ಮಕ್ಕಳು ಹಿರಿಯರಿಗೆ ಈ ಮಾಹಿತಿ ನೀಡಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಸುಭಾಷ್ ಅವರ ಸಹೋದರರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಕಳೆದ ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಸುಭಾಷ್ ಪತ್ನಿ ರಂಜನಾ ಮನೆಗೆ ಬಂದಿದ್ದು, ಸುಭಾಷ್ ಆಕೆಯನ್ನ ಪ್ರಶ್ನೆ ಮಾಡಿದಾಗ ಪತಿ-ಪತ್ನಿಯ ನಡುವೆ ಜಗಳ ನಡೆದಿದೆ. ರಂಜನಾ ಮರುದಿನ ಮಂಗಳವಾರ ಮಧ್ಯಾಹ್ನ ಘಟನೆ ಬಗ್ಗೆ ದೂರು ನೀಡಲು ಗ್ರಾಮ ಪಂಚಾಯಿತಿಯ ಮಹಿಳಾ ಸದಸ್ಯರ ಬಳಿ ಹೋಗುತ್ತಿದ್ದಾಗ ಸುಭಾಷ್ ಅವರನ್ನು ಹಿಂಬಾಲಿಸಿದಾಗ ಮಾರಾಮಾರಿಯಾಗಿರಬಹುದು .. ಆಗ ಅವನು ಸತ್ತಿರಬೇಕು. ಅದಾದ ನಂತರ ಊರಿನ ಜನ ಅವನದೇ ರಿಕ್ಷಾದಲ್ಲಿ ಅವನ ಶವವನ್ನ ನೋಡಿದ್ದಾರೆ. ರಿಕ್ಷಾದಲ್ಲಿ ಬಿದ್ದು ಮೃತಪಟ್ಟಿರುವ ಬಗ್ಗೆ ಮಾಹಿತಿ ಪಡೆದು ರಸ್ತೆಯ ಯುವಕರು ಶಾಹುನಗರಕ್ಕೆ ಹೋಗಿ ನೋಡಿದಾಗ ಸುಭಾಷ್ ಶವವಾಗಿ ಪತ್ತೆಯಾಗಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಸುಭಾಷ್ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಮೃತರು 2 ಪುತ್ರಿಯರು, 1 ಪುತ್ರ, 2 ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ. ಪೊಲೀಸರು ಸತ್ಯಾಸತ್ಯತೆಯನ್ನು ಕಂಡುಹಿಡಿದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸುಭಾಷ್‌ಗೆ ನ್ಯಾಯ ದೊರಕಿಸಿಕೊಡಬೇಕೆಂದು ಆತನ ಸಹೋದರರು, ಸಂಬಂಧಿಕರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.