Uncategorized

ರಸ್ತೆ ನಿಯಮ ಅನುಪಾಲನೆ ಜಾಗೃತಿಯ ಸಂದೇಶ ಸಾರುವ ಕಿರು ನಾಟಕ ಪ್ರದರ್ಶಿಸಿದ ಹೂಲಿಕಟ್ಟಿ ಸರಕಾರಿ ಪ್ರೌಢ ಮಕ್ಕಳು

Share

ಹೂಲಿಕಟ್ಟಿ ಸರಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಲಾದ ರಸ್ತೆ ಸುರಕ್ಷತಾ ಸಪ್ತಾಹ ಮತ್ತು ಜಾಗೃತಿ ಕುರಿತು ಎಂಟನೇ ತರಗತಿಯ ಮಕ್ಕಳಿಂದ ರಸ್ತೆ ನಿಯಮ ಮತ್ತು ಅನುಪಾಲನೆ ಜಾಗೃತಿಯ ಸಂದೇಶ ಸಾರುವ ಕಿರು ನಾಟಕ, ಹಾಡು, ಘೋಷ ವಾಕ್ಯಗಳು, ರಸ್ತೆ ನಿಯಂತ್ರಣ ಸಂಜ್ಞೆ ,ಸೂಚನಾ ಫಲಕಗಳನ್ನು ತಯಾರಿಸಿಕೊಂಡು ಪ್ರಾತೀಕ್ಷಿಕೆ ಪ್ರದರ್ಶನ ನೀಡಿದರು, .

ವಿದ್ಯಾರ್ಥಿಗಳಿಂದ ಸ್ಪಷ್ಟ ಸಾರ್ವಜನಿಕ ಸಂದೇಶವಾಗಿ 18 ವಯಸ್ಸಿನ ಒಳಗಿನ ಮಕ್ಕಳಿಗೆ ವಾಹನ ಚಾಲನೆ ಬೇಡ, ಚಾಲನೆ ಪರವಾನಿಗೆ ಇಲ್ಲದೆ ವಾಹನ ನಡಿಸಬೇಡಿ, ಹೆಲ್ಮೆಟ್ ಬಳಕೆ ಕಡ್ಡಾಯ, ಕುಡಿದು ವಾಹನ ಚಾಲನೆ ಬೇಡ, ಎಂಬ ಸಂದೇಶ ಗ್ರಾಮದ ಮನೆ ಮನೆಗೆ ತಲುಪಿಸಲು ಮತ್ತು ಜಾಗೃತಿ ಮೂಡಿಸಿ ಅಮೂಲ್ಯ ಜೀವ ಹಾನಿ ತಪ್ಪಿಸಲು ತಾವು ಪಾಲಿಸಿ, ಇತರರಿಗೂ ಪಾಲಿಸುವಂತೆ ಜಾಗೃತಿ ಗೊಳಿಸುವುದಾಗಿ, ಪ್ರತಿಜ್ಞೆ ಮಾಡಿದರು,

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯರಾದ ಜಿ ಎಚ್ ನಾಯ್ಕ್ ವಹಿಸಿ ಮಕ್ಕಳು ಸಿದ್ಧಪಡಿಸಿಕೊಂಡಿರುವ ಚಟುವಟಿಕೆ ಬಗ್ಗೆ ಪ್ರೇರೇಪನಾತ್ಮಕ ನುಡಿಗಳನ್ನು ನುಡಿದರು, ಶನಿವಾರ ಸಂಭ್ರಮ ಕಾರ್ಯ ಚಟುವಟಿಕೆ ಮಾರ್ಗದರ್ಶಿ ಶಿಕ್ಷಕರಾದ ಡಾ ಎಸ್ ಬಿ ಹಲಸಗಿ ಯವರು ಮಾತನಾಡುತ್ತ ಇಂದಿನ ಯುವಕರಲ್ಲಿ ತಾಳ್ಮೆ ಇಲ್ಲದೆ ವಾಹನ ಚಾಲನೆ ಮಾಡಲು ಹೋಗಿ ಅನೇಕರು ತಮ್ಮ ಅಮೂಲ್ಯ ಜೀವ ಕಳೆದುಕೊಂಡು ಕುಟುಂಬಕ್ಕೆ ಹಾನಿ ಮಾಡಿರುವ ಮತ್ತು ವೈಯಕ್ತಿಕ ಜೀವನವನ್ನು ನರಕವಾಗಿ ನಿರ್ಮಿಸಿಕೊಂಡ ಅನೇಕ ಉದಾಹರಣೆ ಕಣ್ಮುಂದೆ ಇವೆ . ಹಾಗಾಗಿ ಇಂದು ಶಾಲೆಯ ಮಕ್ಕಳಲ್ಲಿ ಈ ಜಾಗೃತಿ ಮೂಡಿದರೆ ಭವಿಷ್ಯ ದಲ್ಲಿ ಮುಂದಾಗುವ ಅನಾಹುತ ತಪ್ಪಿಸಲು ಸಾಧ್ಯ ವಿರುವ ಕುರಿತು ಸಂದೇಶ ನೀಡಿದರು.


ಮೊಮ್ಮಗನನ್ನು ಕಳೆದುಕೊಂಡು ದುಃಖಿತನಾದ ಮಲ್ಲಪ್ಪನಕತೆ,ನೀರಿಗೆಹೋದ ನಾರಿ ಕಾಲು ಮುರಿದ ಪ್ರಹಸನ, ಲೈಸನ್ಸ್ ಇಲ್ಲದ ವಾಹನ ಚಲಾಯಿಸಿ ಅಪಘಾತ ಮಾಡಿ ಶಿಕ್ಷೆಗೆ ಗುರಿಯಾದ ಪ್ರಕಾಶಪ್ಪನ ಪ್ರಸಂಗ, ಕುರಿತು ಮಕ್ಕಳ ನಾಟಕಗಳು ಉತ್ತಮವಾಗಿ ಪರಿಣಾಮಕಾರಿಯಾಗಿ ಮೂಡಿಬಂದವು, ಮಕ್ಕಳ ಸಕ್ರಿಯ ಪಾಲ್ಗೊಳ್ಳುವಿಕೆ ಕಾರ್ಯಕ್ರಮದ ಯಶಸ್ವಿಗೆ ಸಹಕಾರಿಯಾಗಿತ್ತು ಎರಡು ಗಂಟೆಗಳ ಕಾಲ ಪ್ರದರ್ಶನ ಜರುಗಿತು

ಪ್ರಾರಂಭದಲ್ಲಿ ಶಾಲಾ ಮಕ್ಕಳಿಂದ ಪ್ರಾರ್ಥನೆ ಜರುಗಿತು, ಕುಮಾರಿ ಸ್ಫೂರ್ತಿ ಗೌಡರ ಸ್ವಾಗತಿಸಿದಳು ಕುಮಾರಿ ಲಕ್ಷ್ಮೀ ದಳವಾಯಿ, ಪ್ರತಿಜ್ಞೆ ವಿಧಿ ಭೋದಿಸಿದಳು, ಶಾಲೆಯ ಗುರುಬಳಗದ ಎಸ್ ಕೆ ಕದಂ ಎಸ್ ಎಸ್ ಹಿರೇಮಠ್, ಬಿ ಎಸ್ ಪಾಟೀಲ್, ಎಲ್ ಕೆ ಕಣಬರಗಿ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಡಾ ಶೇಖರ ಹಲಸಗಿ ಸೇರಿದಂತೆ ಶಾಲೆಯ ಎರಡುನೂರಕ್ಕೋ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಯಶಸ್ವಿ ಗೊಳಿಸಿದರು

Tags: