Uncategorized

ಘಟಪ್ರಭಾ : ಚರಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!

Share

ಘಟಪ್ರಭಾ ಸ್ಥಳೀಯ ಕಲಾಲ ಒಣಿಯಲ್ಲಿರುವ ಚರಂಡಿಯಲ್ಲಿ ನವಜಾತ ಶಿಶುವಿನ ಶವ ಭಾನುವಾರ ಪತ್ತೆಯಾಗಿದೆ. ಮಗುವಿನ ಸ್ಥಿತಿ ಕಂಡು ನಿವಾಸಿಗಳು ದಂಗಾಗಿದ್ದಾರೆ. ಪ್ರಪಂಚ ನೋಡದ ಶಿಶುವನ್ನು ಚರಂಡಿಯಲ್ಲಿ ಬೀಸಾಡಿದ ಕ್ರೂರ ತಾಯಿ ನಿವಾಸಿಗಳು ಶಾಪಹಾಕಿದ್ದಾರೆ. ಪ್ಲಾಸ್ಟಿಕ್ ಬ್ಯಾಗಿನಲ್ಲಿ ಹಾಕಿ ಎಸೆಯಲಾಗಿದೆ. ಅಲ್ಲಿನ ಜನರು ಗಮನಿಸಿ ಪ್ಲಾಸ್ಟಿಕ್‌ ಬ್ಯಾಗ್‌ ತೆರೆದು ನೋಡಿದಾಗ ಅದರಲ್ಲಿ ನವಜಾತ ಗಂಡು ಶಿಶುವಿನ ಶವ ಸಿಕ್ಕಿದೆ

ಇಂದು ಮುಂಜಾನೆ ಚರಂಡಿಯಲ್ಲಿ ಯಾವುದೊ ವಸ್ತು ಇರುವ ಪ್ಲಾಸ್ಟಿಕ್ ಬ್ಯಾಗಿನಲ್ಲಿ ನವಜಾತ ಶಿಶುವಿನ ಶವವನ್ನು ಹಾಕಿ ಎಸೆದಿರುವ ಬಗ್ಗೆ ಗಮನಿಸಿದ ಜನರು ಪ್ಲಾಸ್ಟಿಕ್ ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿ ನವಜಾತ ಗಂಡು ಶಿಶುವಿನ ಶವ ಸಿಕ್ಕಿದೆ. ಮಗುವಿನ ಶವ ಸಿಕ್ಕಿದೆ ಎಂಬ ವಿಷಯ ಪಟ್ಟಣದಲ್ಲಿ ಕಾಡ್ಗಿಚ್ಚಿನಂತೆ ಹರಡಿ ಸ್ಥಳಕ್ಕೆ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದರು.
ಈ ಬಗ್ಗೆ ಮಾಹಿತಿ ಪಡೆದುಕೊಂಡ ಘಟಪ್ರಭಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುರಸಭೆ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ನಿವಾಸಿ ರಹಮಾನ್ ಮುಖಾಶಿ ಮಾತನಾಡಿ, ಘಟಪ್ರಭಾದಲ್ಲಿ ನವಜಾತ ಶಿಶುವಿನ ಶವ ಪತ್ತೆ ಯಾಗಿರುವುದ ಸಮಾಜಕ್ಕೆ ಕಳಂಕಿತ, ನಗರದಲ್ಲಿ ನಡೆಯುತ್ತಿರುವ ಅನಧಿಕೃತ ಗರ್ಭಪಾತ (ಭ್ರೂಣ ಹತ್ಯೆಯ) ಕರಾಳ ದಂಧೆಯ ಭಾಗವಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಪೋಲಿಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

Tags: