ಬೆಳಗಾವಿಯ ಭಡಕಲ್ ಗಲ್ಲಿ-ಕೋಳಿ ಗಲ್ಲಿಯ ಗುರುಸ್ವಾಮಿ ಹಾಗೂ ಅಯ್ಯಪ್ಪಸ್ವಾಮಿ ಭಕ್ತರಿಂದ ಮಹಾಪೂಜೆ, ಮಹಾಪ್ರಸಾದ ಏರ್ಪಡಿಸಲಾಗಿತ್ತು.
ಭಡಕಲ್ ಗಲ್ಲಿ-ಕೋಳಿ ಗಲ್ಲಿಯ ಅಯ್ಯಪ್ಪ ಭಕ್ತರಿಂದ ಭಾನುವಾರ ಸಂಜೆ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕೃಷ್ಣ ಗುರುಸ್ವಾಮಿ, ಸುರೇಶ್ ಗುರುಸ್ವಾಮಿ, ಮಹಾಂತೇಶ ಗುರುಸ್ವಾಮಿ, ಕುಮಾರ್ ಗುರುಸ್ವಾಮಿ ಸೇರಿದಂತೆ ಸುಮಾರು ಇನ್ನೂರು ಅಯ್ಯಪ್ಪ ಭಕ್ತರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ರಮೇಶ್ ಕುಡಚಿ , ಮಾಜಿ ಶಾಸಕ ಅನಿಲ ಬೆನಕೆ ಪ್ರಮುಖರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಭಡಕಲ್ ಗಲ್ಲಿ-ಕೋಳಿ ಗಲ್ಲಿ, ಖಡಕ್ ಗಲ್ಲಿ ಹಾಗೂ ಸುತ್ತಮುತ್ತಲಿನ ನಾಗರಿಕರು ಮಹಾಪೂಜೆಯಲ್ಲಿ ಪಾಲ್ಗೊಂಡು ಮಹಾಪ್ರಸಾದದಲ್ಲಿ ಭಾಗಿಯಾಗಿ ಅಯ್ಯಪ್ಪಸ್ವಾಮಿಯ ಆಶೀರ್ವಾದ ಪಡೆದರು.