Uncategorized

ಶ್ರೀ ನಿಜಗುಣ ದೇವರ ಷಷ್ಠಬ್ದಿ ಸಂಭ್ರಮಕ್ಕೆ ಸುತ್ತೂರು ಹಾಗು ಆದಿಚುಂಚನಗಿರಿ ಜಗದ್ಗುರುಗಳಿಗೆ ಆಹ್ವಾನ

Share

ಗೋಕಾಕ :ತಾಲೂಕಿನ ಪಿಜಿ ಹುಣಶ್ಯಾಳದ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದ ಶ್ರೀ ನಿಜಗುಣ ದೇವರ ಷಷ್ಠಬ್ದಿ ಸಂಭ್ರಮಕ್ಕೆಸುತ್ತೂರು ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರನ್ನ ಹಾಗು ಆದಿಚುಂಚನಗಿರಿಯ ಶ್ರೀ ಜಗದ್ಗುರು ನಿರ್ಮಲಾನಂದ ಮಹಾಸ್ವಾಮಿಗಳವರನ್ನ ಶ್ರೀ ನಿಜಗುಣ ದೇವರು ಭೇಟಿಯಾಗಿ ಆಮಂತ್ರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುತ್ತೂರು ಹಾಗು ಆದಿಚುಂಚನಗಿರಿ ಜಗದ್ಗುರುಗಳು ನಿಜಗುಣ ದೇವರು ಓದಿದ್ದು ನಾಲ್ಕನೇ ತರಗತಿ ಆದರೂ ಸಾವಿರಾರು ಗೀತೆಗಳನ್ನು ರಚಿಸಿದ್ದಾರೆ ಕರ್ನಾಟಕ ,ಮಹಾರಾಷ್ಟ್ರ ,ಆಂಧ್ರಪ್ರದೇಶದಲ್ಲಿ ನಿಜಗುಣರ ಸಾಹಿತ್ಯದ ಬಗ್ಗೆ ಅದ್ಭುತವಾದ ಪ್ರವಚನವನ್ನ ಮಾಡಿರುವ ಅಪರೂಪದ ಶ್ರೀಗಳು ಇವರ ಷಷ್ಠಬ್ದಿ ಸಂಭ್ರಮಕ್ಕೆ ನಾವು ಆಗಮಿಸಿ ಇವರ ಕಾರ್ಯ ಕ್ಷೇತ್ರವನ್ನ ನೋಡಿ ಸಂತೋಷ ಪಡುತ್ತೇವೆ ಎಂದರು .
ಜನವರಿ ೧,೨,೩ ರಂದು ಷಷ್ಠಬ್ದಿ ಸಂಭ್ರಮ ಕಾರ್ಯಕ್ರಮ ಜರುಗಲಿದ್ದು ಸುಮಾರು ೫೦ಕ್ಕೂ ಹೆಚ್ಚು ಎಲ್ಲಾ ಸಂಪ್ರದಾಯದ ಮಠಾಧೀಶರು ,ಜಗದ್ಗುರುಗಳು ,ಸಾಹಿತಿಗಳು ಮಂತ್ರಿಗಳು ಶಾಸಕರು ಸೇರಿದಂತೆ ಗಣ್ಯಾತಿ ಗಣ್ಯರು ಆಗಮೀಸಲಿದ್ದಾರೆ.

Tags: