ಆರೋಗ್ಯವಂತ ಜೀವನ ನಡೆಸಲು ಗ್ರಾಮೀಣ ಕ್ರೀಡೆಗಳು ಸಹಕಾರಿಯಾಗಲಿವೆ ಎಂದು ಜೋಲ್ಲೆ ಗ್ರುಪ್ ಉಪಾದ್ಯಕ್ಷ ಬಸವಪ್ರಸಾದ ಜೋಲ್ಲೆ ಹೇಳಿದರು.
ಅವರು ಇಂದು ಹುಕ್ಕೆರಿ ನಗರದಲ್ಲಿ ಚಿಕ್ಕೋಡಿ ಲೋಕಸಭೆ ಸದಸ್ಯ ಅಣ್ಣಾಸಾಹೇಬ ಜೋಲ್ಲೆ ಎಂ ಪಿ ಟ್ರೋಫಿ ಕಬ್ಬಡ್ಡಿ ಟೋರ್ನಾಮೆಂಟದಲ್ಲಿ ಭಾಗ ವಹಿಸಿ ಮಾತನಾಡಿದರು.
ಪಟ್ಟಣದ ಎಸ್ ಕೆ ಹೈಸ್ಕೂಲ ಮೈದಾನದಲ್ಲಿ ಹಮ್ಮಿಕೊಂಡ ಟೋರ್ನಾಮೆಂಟ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ವೀರಕ್ತ ಮಠದ ಶಿವ ಬಸವ ಮಹಾಸ್ವಾಮಿಗಳ ಮತ್ತು ಕ್ಯಾರಗುಡ್ಡದ ಅಭಿನವ ಮಂಜುನಾಥ ಮಹಾರಾಜರ ನೇತೃತ್ವದಲ್ಲಿ ಜ್ಯೋತಿ ಪ್ರಸಾದ ಜೋಲ್ಲೆ ಸಸಿಗೆ ನೀರು ಹಾಕುವ ಮೂಲಕ ಟೋರ್ನಾಮೆಂಟ ಚಾಲನೆ ನೀಡಿದರು.
ಚಂದ್ರಶೇಖರ ಶ್ರೀಗಳು ಮಾತನಾಡಿ ಗ್ರಾಮೀಣ ಭಾಗದ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಸಂಸದ ಅಣ್ಣಾಸಾಹೇಬ ತಮ್ಮ ಕ್ಷೇತ್ರದ ವಿವಿಧ ನಗರಗಳಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸುತ್ತಿದ್ದಾರೆ ಯುವಕ ಯುವತಿಯರು ಇದರ ಲಾಭ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳ ಬೇಕು ಎಂದರು .
ವೇದಿಕೆ ಮೇಲೆ ಸಿ ಎಸ್ ತುಬಚಿ ಸಂಸ್ಥೆ ಅದ್ಯಕ್ಷ ಪಿಂಟು ಶೆಟ್ಟಿ, ಅರ್ಬನ್ ಬ್ಯಾಂಕ ಅದ್ಯಕ್ಷ ಜಯಗೌಡ ಪಾಟೀಲ, ಪುರಸಭೆ ಅದ್ಯಕ್ಷ ಎ ಕೆ ಪಾಟೀಲ, ಬಿ ಜೆ ಪಿ ರೈತ ಮೋರ್ಚಾ ಅದ್ಯಕ್ಷ ಸತ್ಯಪ್ಪಾ ನಾಯಿಕ, ಮಹಾವೀರ ಶಿಕ್ಷಣ ಸಂಸ್ಥೆ ಅದ್ಯಕ್ಷ ಮಹಾವೀರ ನಿಲಜಗಿ, ಹರಗಾಪೂರ ಗ್ರಾಮ ಪಂಚಾಯತಿ ಅದ್ಯಕ್ಷ ಪವನ ಪಾಟೀಲ, ಪರಗೌಡ ಪಾಟೀಲ, ನ್ಯಾಯವಾದಿಗಳಾದ ಅನಿಲ ಶೆಟ್ಟಿ, ಕೆ ಬಿ ಕುರಬೇಟ, ಎಸ್ ಜಿ ನದಾಫ್, ನಾಗನೂರಿ, ಹುಂಡೆಕಾರ ಮೋದಲಾದವರು ಉಪಸ್ಥಿತರಿದ್ದರು.
ಬಸವಪ್ರಸಾದ ಜೋಲ್ಲೆ ಶ್ರೀಗಳನ್ನು ಮತ್ತು ಗಣ್ಯರನ್ನು ಸತ್ಕರಿಸಿ ಮಾತನಾಡಿ ವಿವಧ ಕಾಯಿಲೆಗಳಿಂದ ದೂರ ಉಳಿದು ಆರೋಗ್ಯವಂತ ಜೀವನ ನಡೆಸಲು ಚಿಕೋಡಿ ಸಂಸದರಾದ ಅಣ್ಣಾಸಾಹೇಬ ಜೋಲ್ಲೆ ಮತ್ತು ಶಶಿಕಲಾ ಜೋಲ್ಲೆಯವರು ವಿವಿಧ ಗ್ರಾಮಿಣ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಚಿಕ್ಕೋಡಿ ಲೋಕ ಸಭಾ ಕ್ಷೇತ್ರದ ವಿವಿಧ ನಗರಗಳಲ್ಲಿ ಗ್ರಾಮಿಣ ಕ್ರೀಡೆಗಳನ್ನು ಆಯೋಜಿಸಿ ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸಲಾಗುತ್ತಿದೆ , ಮುಂಬರುವ ದಿನಗಳಲ್ಲಿ ರಾಷ್ಟ್ರ ಮಟ್ಟದ ಗಾಳಿಪಟ ಹಾರಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗುವದು ಎಂದರು .
ನಂತರ ಅಭಿನವ ಮಂಜುನಾಥ ಮಹಾರಾಜರು ರಿಬ್ಬನ್ ಕತ್ತರಿಸುವ ಮೂಲಕ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಮಾತನಾಡಿ ಶಿವಾಜಿ ಮಹಾರಾಜರ ಕಾಲದಿಂದಲು ಕಬ್ಬಡ್ಡಿ ಆಟಕ್ಕೆ ಮಹತ್ವ ಇದೆ ಹಿಂದವಿ ಧರ್ಮ ಸ್ಥಾಪಿಸಲು ಜನರನ್ನು ಒಟ್ಟುಗುಡಿಸಲು ಮಹಾರಾಜರು ಕಬ್ಬಡ್ಡಿ ಪಂದ್ಯಾವಳಿ ಆಯೋಜಿಸುತ್ತಿದ್ದರು ಇಂದು ನಮ್ಮ ದೇಶಿಯ ಆಟ ಅಲ್ಲದೆ ಯೋಗ ಸಹ ಆಗಿದೆ ಇದನ್ನು ಉಳಿಸಿ ಬೆಳೆಸುವ ಕಾರ್ಯ ಜೋಲ್ಲೆ ಕುಟುಂಬ ಮಾಡುತ್ತಿದೆ ಎಂದರು
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ವಿಜಯ ರಾವುತ್, ಮಹಾವೀರ ಬಾಗಿ, ಸಂಜಯ ಬಸ್ತವಾಡ ಹಾಗೂ ಹುಕ್ಕೇರಿ , ಸಂಕೇಶ್ವರ ಪುರಸಭೆ ಸದಸ್ಯರು ಮತ್ತು ಜೋಲ್ಲೆ ಉದ್ಯೋಗ ಸಮೂಹ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.
ರಾಜು ಬಾಗಲಕೋಟಿ.
ಇನ್ ನ್ಯೂಸ್ ಹುಕ್ಕೇರಿ