ಆ ಜಿಲ್ಲೆಯ ಬಿಜೆಪಿ ಘಟಕ ಮನೆಯೊಂದು ಮೂರು ಬಾಗಿಲು ಎನ್ನೋ ಪರಿಸ್ಥಿತಿ. ಎಲ್ಲವೂ ಸರಿಯಿಲ್ಲಾ ಎನ್ನೋ ಮಾತಗಳು ಕೇಳಿಬರುತ್ತವೆ. ಇದೀಗ ಜಿಲ್ಲಾಧ್ಯಕ್ಷ ಅವಧಿ ಮುಗಿದಿದೆ. ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೇ ಕಗ್ಗಂಟಾಗಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…
ಹೌದು ವಿಜಯಪುರ ಜಿಲ್ಲೆಯ ಬಿಜೆಪಿ ಘಟಕದಲ್ಲಿ ಆಗಾಗ ಭಿನ್ನಮತ ಸ್ಪೋಟಗೊಳ್ಳುತ್ತದೆ. ಮನೆಯೊಂದು ಮೂರು ಬಾಗಿಲು ಎನ್ನೊ ಪರಿಸ್ಥಿತಿ ಇದೆ. ಇದೀಗ ಹಾಲಿ ಅಧ್ಯಲ್ಷ ಆರ್.ಎಸ್.ಪಾಟೀಲ ಕುಚಬಾಳ ಇವರ ಅಧಿಕಾರವಧಿ ಮುಗಿದಿದ್ದು. ನೂತನ ಅಧ್ಯಕ್ಷರ ಆಯ್ಕೆ ಕಗ್ಗಂಟಾಗಿದೆ. ಜಿಲ್ಲೆಯಲ್ಲಿ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನಡುವೆ ರಾಜಕೀಯ ಗೊಂದಗಳಿವೆ. ಹೀಗಾಗಿ ಯತ್ನಾಳ ವಿರೋಧಿಗಳನ್ನ ಮಾಡಬೇಕಾ, ಯತ್ನಾಳ್ ಪರವಾಗಿರುವವರನ್ನ ಮಾಡಬೇಕಾ ಅನ್ನೋ ಗೊಂದಲ ಸೃಷ್ಟಿಯಾಗಿದೆ. ಇನ್ನೂ ಎರಡು ದಿನಗಳ ದಿನ ಕಾಲ ಪಕ್ಷದ ವೀಕ್ಷಕರು ಸಭೆಗಳನ್ನು ನಡೆಸಿ ಆಕಾಂಕ್ಷಿತರ ಹಾಗೂ ಪದಾಧಿಕಾರಿ ಗಳ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಒಟ್ಟು 15 ಕ್ಕೂ ಹೆಚ್ಚು ಆಕಾಂಕ್ಷಿಗಳು ಅಧ್ಯಕ್ಷಗಿರಿಗೆ ಮನವಿ ಕೊಟ್ಟಿದ್ದಾರೆ..
ಇನ್ನೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಯತ್ನಾಳ್ ವಿರೋಧಿ ನಾಯಕರಿಂದ ಪೈಪೋಟಿಯು ಜೋರಾಗಿದೆ. ಯತ್ನಾಳ್ ಬೆಂಬಲಿಗರಿಂದಲೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿದೆ. ಯಾರನ್ನ ಜಿಲ್ಲಾಧ್ಯಕ್ಷ ಮಾಡಬೇಕು ಅನ್ನೋ ಗೊಂದಲದಲ್ಲಿ ರಾಜ್ಯ ನಾಯಕರು ಇದ್ದಾರೆ. ಯತ್ನಾಳ್ ವಿರೋಧಿ ಬಣದ ನಾಯಕರಾದ ಮಾಜಿ ಸಚಿವರಾದ ಅಪ್ಪಾಸಾಹೇಬ್, ಎಸ್ ಕೆ ಬೆಳುಬ್ಬಿ, ಮುಖಂಡರಾದ ಸುರೇಶ್ ಬಿರಾದಾರ್, ರವಿ ಖಾನಾಪುರ, ವಿಜುಗೌಡ ಪಾಟೀಲ ಹೆಸರು ಮುನ್ನಲೆಗೆ ಬಂದಿದೆ. ಇನ್ನೂ ಪಕ್ಷದ ಪರವಾಗಿ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ರಾಘವ ಅಣ್ಣಿಗೇರಿ, ಉದ್ಯಮಿ ವಿಜಯಕುಮಾರ ಕುಡಿಗನೂರ, ವಕೀಲ ಸಂಗಮೇಶ ಹೌದೆ ಸೇರಿದಂತೆ ಹಲವರ ಹೆಸರು ಚರ್ಚೆಯಲ್ಲಿವೆ. ರಾಜ್ಯದಲ್ಲಿ ಜಾತಿ, ಸಂಘಟನೆ, ಅನುಭವದ ಆಧಾರದ ಮೇಲೆ ಜಿಲ್ಲಾಧ್ಯಕ್ಷರ ನೇಮಕ ನಡೆಯುತ್ತಿದೆ. ಆದರೆ ವಿಜಯಪುರ ದಲ್ಲಿ ಮಾತ್ರ ಯಾವ ಬಣದವರನ್ನ ನೇಮಕ ಮಾಡಬೇಕು ಅನ್ನೋ ಗೊಂದಲ ಸೃಷ್ಟಿಯಾಗಿದೆ.ಯಾವುದೇ ಒಂದು ಬಣದವರನ್ನ ನೇಮಕ ಮಾಡಿದರೂ ಉಳಿದವರು ಅಸಮಾಧಾನ ಫಿಕ್ಸ್ ಎನ್ನಲಾಗಿದೆ. ಯತ್ನಾಳ್ ವಿರೋಧಿಗಳಾದ ಮುರುಗೇಶ ನಿರಾಣಿ ಹಾಗೂ ಎ.ಎಸ್ ಪಾಟೀಲ್ ನಡಹಳ್ಳಿ ರೈತ ಮೋರ್ಚಾ ರಾಜಾಧ್ಯಕ್ಷರಾಗಿ ನೇಮಕ ಹಿನ್ನೆಲೆಯಲ್ಲಿ ಬಹುತೇಕ ನಿರಾಣಿ ಹಾಗೂ ನಡಹಳ್ಳಿ ಬೆಂಬಲ ಇದ್ದವರೇ ಜಿಲ್ಲಾಧ್ಯಕ್ಷರಾಗೋ ಸಾಧ್ಯತೆ ಹೆಚ್ಚಾಗಿದೆ.
ಇತ್ತಿಚೆಗೆಷ್ಟೇ ವಿಜಯೆಂದ್ರ ವಿಜಯಪುರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ನೇಮಕ ವಿಚಾರ ಕುತೂಹಲ ಮೂಡಿಸಿದೆ. ಏನಾಗುತ್ತದೆಯೋ ಕಾದುನೋಡಬೇಕಿದೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ…