ಅಥಣಿ ಪೋಲಿಸ್ ಠಾಣೆಯಿಂದ ಮಾದಕ ದ್ರವ್ಯಗಳ ವಿರುದ್ದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತುಈ ವೇಳೆ ಮಾದಕ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮ ಗಳ ಬಗ್ಗೆ ಜಾಗೃತಿ ಜಾಥಾ ನಡೆಸಿದ ಪೋಲಿಸ್ ಸಿಬ್ಬಂದಿ ಅಥಣಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಮಾದಕ ವಸ್ತುಗಳ ಬಳಕೆ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು
ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟ ಕಾನೂನು ಪ್ರಕಾರ ಅಪರಾಧವಾಗಿದ್ದು ಅಂತಹ ಚಟುವಟಿಕೆಗಳ ನಿಯಂತ್ರಣಕ್ಕೆ ಸಾರ್ವಜನಿಕರು ಕೈ ಜೋಡಿಸುವ ಮೂಲಕ ಸಮಾಜದ ಶಾಂತಿ ಸುವ್ಯವಸ್ಥೆ ಕಾಯಲು ಸಹಕರಿಸಬೇಕು ಮೊದಲು ಸಿಗರೇಟು,ತಂಬಾಕು,ಗುಟಕಾಗಳಿಂದ ಆರಂಭವಾಗುವ ದುಶ್ಚಟಗಳು ಕ್ರಮೇಣ ಗಾಂಜಾ,ಕಾಫ್ ಸಿರಪ್,ವೈಟ್ನರ್,ಪೆಟ್ರೋಲ್ ಸೇರಿದಂತೆ ಹಲವು ಮಾದಕ ವಸ್ತುಗಳ ದುಶ್ಚಟವಾಗಿ ಪರಿಣಮಿಸುತ್ತವೆ.ಇದರಿಂದ ಮಾದಕ ವಸ್ತುಗಳ ಸೇವನೆ ಮಾಡುವ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರುವದರ ಜೊತೆಗೆ ಆತನ ಕುಟುಂಬಕ್ಕೆ ಅದರ ದುಷ್ಪರಿಣಾಮ ಬೀರುತ್ತದೆ ಆದ್ದರಿಂದ ವಿಶೇಷವಾಗಿ ಇಂದಿನ ಯುವಕರು ಮಾದಕ ವಸ್ತುಗಳಿಂದ ದೂರ ಉಳಿಯಬೇಕೆಂದು ಡಿ ವೈ ಎಸ್ ಪಿ ಶ್ರೀಪಾದ ಜಲ್ದೆ ಹೇಳಿದರು.
ನ್ಯಾಯವಾದಿ ಮಿತೇಶ್ ಪಟ್ಟಣ ಮಾತನಾಡಿ ಮಾದಕ ವಸ್ತುಗಳು ಯುವಕರ ಮೇಲೆ ಹಲವಾರು ದುಷ್ಪರಿಣಾಮ ಬೀರುತ್ತಿದೆ ಹಲವು ಕುಟುಂಬಗಳು ಬೀದಿಗೆ ಬರಲು ಕಾರಣವಾಗಿವೆ.ಕುಡಿದು ವಾಹನ ಚಲಾಯಿಸುವಾಗ ಹಲವಾರು ಅಪಘಾತಗಳು ಸಂಭವಿಸಿ ಸಾವು ನೋವುಗಳು ಕೂಡ ಉಂಟಾಗಿವೆ ಆದ್ದರಿಂದ ಯುವಕರು ಸಿಗರೇಟ್ ಗುಟಕಾ ಸೇರಿದಂತೆ ಮದ್ಯಪಾನ ವಿಸರ್ಜನೆ ಮಾಡುವ ಶಪಥ ಮಾಡಬೇಕು ಎಂದರು.
ಅಥಣಿ ಪಟ್ಟಣದ ಬಸವೇಶ್ವರ ವೃತ,ಹಲ್ಯಾಳ ಸರ್ಕಲ್ ,ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ಮಾಡುವ ಮೂಲಕ ಪೋಲಿಸ ಠಾಣೆಯ ಸಿಬ್ಬಂದಿ ಸಾರ್ವಜನಿಕರು,ಕೆ ಎ ಲೋಕಾಪೂರ ಕಾಲೇಜಿನ ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರ ಉಳಿಯುವ ಪ್ರಮಾಣ ಮಾಡುವ ಮೂಲಕ ಜಾಗೃತಿ ಜಾಥಾ ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ಡಿ ವಾಯ ಎಸ್ಪಿ ಶ್ರೀಪಾದ ಜಲ್ದೆ,ಸಿಪಿಐ ರವೀಂದ್ರ ನಾಯಕೋಡಿ,ಪಿಎಸ್ಐ ಶಿವಾನಂದ ಕಾರಾಜೋಳ,ಪಿಎಸ್ಐ ಚಂದ್ರಕಾಂತ ಸಾಗನೋರ,ಪಿಎಸ್ಐ ರಾಕೇಶ ಬಗಲಿ,ಸಿಬಂದಿಗಳು ಸೇರಿಂದತ್ತೆ ಹಲವು ಗಣ್ಯರು ಉಪಸ್ಥಿತರಿದ್ದರು
ರಾಕೇಶ ಮೈಗೂರ
ಇನ್ ನ್ಯೂಸ್ ಅಥಣಿ