Uncategorized

ಮರಾಠ ಮಂಡಳ ಶಾಲೆಯ ವಿದ್ಯಾರ್ಥಿಗಳಿಂದ ಮಾದಕ ದೃವ್ಯ ಸೇವನೆ ವಿರೋಧಿ ಜಾಗೃತಿ

Share

ಪೊಲೀಸ ಕಮಿಷನರೇಟ್ ಬೆಳಗಾವಿ ನಗರ ವತಿಯಿಂದ ಮಾದಕ ದೃವ್ಯ ಸೇವನೆ ವಿರೋಧಿ ಜಾಗೃತಿ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು

ನಗರದಲ್ಲಿ ನಡೆದ ಮಾದಕ ದೃವ್ಯ ಸೇವನೆ ವಿರೋಧಿ ಜಾಗೃತಿ ರ್ಯಾಲಿಗೆ ಅಪರಾಧ ವಿಭಾಗದ ಸಿಪಿಐ ಸಂಜು ಕಾಂಬಳೆ ಚಾಲನೆ ನೀಡಿದರು
ಈ ವೇಳೆ ಮಾದಕ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮ ಗಳ ಬಗ್ಗೆ ಜಾಗೃತಿ ಜಾಥಾ ನಡೆಸಿದ ಪೋಲಿಸ್ ಸಿಬ್ಬಂದಿ ಬೆಳಗಾವಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಮಾದಕ ವಸ್ತುಗಳ ಬಳಕೆ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರಲ್ಲದೆ ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟ ಕಾನೂನು ಪ್ರಕಾರ ಅಪರಾಧವಾಗಿದ್ದು ಅಂತಹ ಚಟುವಟಿಕೆಗಳ ನಿಯಂತ್ರಣಕ್ಕೆ ಸಾರ್ವಜನಿಕರು ಕೈ ಜೋಡಿಸುವ ಮೂಲಕ ಸಮಾಜದ ಶಾಂತಿ ಸುವ್ಯವಸ್ಥೆ ಕಾಯಲು ಸಹಕರಿಸಬೇಕುಮೊದಲು ಸಿಗರೇಟು,ತಂಬಾಕು,ಗುಟಕಾಗಳಿಂದ ಆರಂಭವಾಗುವ ದುಶ್ಚಟಗಳು ಕ್ರಮೇಣ ಗಾಂಜಾ,ಕಾಫ್ ಸಿರಪ್,ವೈಟ್ನರ್,ಪೆಟ್ರೋಲ್ ಸೇರಿದಂತೆ ಹಲವು ಮಾದಕ ವಸ್ತುಗಳ ದುಶ್ಚಟವಾಗಿ ಪರಿಣಮಿಸುತ್ತವೆ.ಇದರಿಂದ ಮಾದಕ ವಸ್ತುಗಳ ಸೇವನೆ ಮಾಡುವ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರುವದರ ಜೊತೆಗೆ ಆತನ ಕುಟುಂಬಕ್ಕೆ ಅದರ ದುಷ್ಪರಿಣಾಮ ಬೀರುತ್ತದೆ ಆದ್ದರಿಂದ ವಿಶೇಷವಾಗಿ ಇಂದಿನ ಯುವಕರು ಮಾದಕ ವಸ್ತುಗಳಿಂದ ದೂರ ಉಳಿಯಬೇಕೆಂದು ಮನವಿ ಮಾಡಿದರು

ಆರ್ ಟಿ ಓ ವೃತ್ತ ,ಚನ್ನಮ್ಮ ವೃತ್ತ ದಿಂದ ನಡೆದ ರ್ಯಾಲಿ ಸುಭಾಷ ನಗರದಲ್ಲಿ ಮುಕ್ತಾಯಗೊಂಡಿತು ಈ ಜಾಗೃತಿ ರ್ಯಾಲಿಯಲ್ಲಿ ಮರಾಠ ಮಂಡಳ ಶಾಲೆಯ ವಿದ್ಯಾರ್ಥಿಗಳು ಭಾಗಿಯಾಗಿ ಮಾದರಿಯಾದರು

ಈ ಸಂದರ್ಭದಲ್ಲಿ ಪಿಎ ಸ್ ಐ ಎಲ್ ಎಸ ಗೊರಳೆ ,ದೈಹಿಕ ಶಿಕ್ಷಕಿ ಅಶ್ವಿನಿ ಪೆಟಕರ್, ಸೇರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು

Tags: