Uncategorized

ಹೆಲ್ಮೇಟ್ ಖರೀದಿಸಿ ತಂದರೆ ದಂಡ ಇಲ್ಲದೆ ಬೈಕ್ ರಿಲೀಸ್

Share

ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುವ ಹಾಗೆ ಹೆಲ್ಮೇಟ್ ಇಲ್ಲದೆ ಸಂಚರಿಸುವ ಬೈಕ್ ಸವಾರರನ್ನು ತಡೆದು ಅವರಿಗೆ ಹೆಲ್ಮೇಟ್ ಹಾಕಿ ಜೀವ ರಕ್ಷಣೆಗಾಗಿ ಹೆಲ್ಮೇಟ್ ಧರಿಸುವಂತೆ ಗೋಕಾಕ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಿಗಾರ ಗೋಕಾಕದಲ್ಲಿ ನಡೆದ ಹೆಲ್ಮೇಟ್ ಖಡ್ಡಾಯ ಅಭಿಯಾನದಲ್ಲಿ ಬಾಗಿಯಾಗಿ ಬೈಕ ಸವಾರರಿಗೆ ಮನವಿ ಮಾಡಿಕೊಳ್ಳುವುದರ ಜೊತೆಯಲ್ಲಿ ತಮ್ಮ ಶಿಕ್ಷಣ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ,ಶಿಕ್ಷಕರಿಗೆ ಪೋಲಿಸರ ಅಭಿಯಾನಕ್ಕೆ ನೈತಿಕ ಬೆಂಬಲ ನೀಡುವುದಾಗಿ ತಿಳಿಸಿ ಅರಿವು ಮೂಡಿಸಿದರು.

ಜನೆವರಿ 1 ರಿಂದ ರಾಜ್ಯಾದಂತ ಹೆಲ್ಮೇಟ್ ದರಿಸುವುದು ಖಡ್ಡಾಯ ಎಂದು ಸುಪ್ರಿಂ ಕೊರ್ಟ ಆದೇಶದ ಹಿನ್ನಲೆಯಲ್ಲಿ ಗೋಕಾಕದ ಬಸವೇಶ್ವರ ವೃತ್ತದಲ್ಲಿ ಹೆಲ್ಮೇಟ್ ದರಿಸದೆ ಇರುವ ಬೈಕ್ ಸವಾರರನ್ನು ತಡೆದು ನಗರ ಪೋಲಿಸ್ ಇಲಾಖೆಯವರು ದಂಡ ಹಾಕುವ ಬದಲು ಹೆಲ್ಮೇಟ್ ಖರೀದಿಸಿ ತಂದು ತೊರಿಸಿದ ನಂತರ ಪೋಲಿಸ್ ಠಾಣೆಗೆ ತಂದ ಬೈಕಗಳನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಜಿ,ಬಿ,ಬಳಿಗಾರ ಮತ್ತು ನಗರ ಪೋಲಿಸ್ ಠಾಣೆಯ ಪಿ,ಎಸ್,ಐ, ಕೆ ವಾಲಿಕರ ಇವರಿಗೆ ಹೂ ನೀಡಿ ಅಭಿನಂದಿಸಿದರು.
ಇವತ್ತಿನ ಅಭಿಯಾನದಲ್ಲಿ ನಗರ ಪೋಲಿಸ್ ಸಿಬ್ಬಂದಿಗಳು ಸಾಥ ನೀಡಿದರು.

Tags: