Uncategorized

ಅಂಬೇಡ್ಕರ್ ಶಕ್ತಿ ಸಂಘಟನೆ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ

Share

ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ನಿರಂತರ ಅಮರ್ನಾಥ ಉಪಾಸ ಸತ್ಯಾಗ್ರಹವನ್ನು ಬಿಆರ್ ಅಂಬೇಡ್ಕರ್ ಶಕ್ತಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ಮಂಗಳ ಗೌರಿ ಗಡ್ಡಿ ಮತ್ತು ವಸತಿ ಶಾಲೆಯ ನಿಲಯ ಪಾಲಕರಾದ ಪ್ರಶಾಂತ್ ಕಲಗೂಡಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ದಿನಾಂಕ : 09.01.2024 ರಂದು ಸುಳುಗಾ ಇಂದ್ರ ವಸತಿ ಶಾಲೆಯ ಹಾಸ್ಟೆಲ್ ಮಕ್ಕಳ ಮೂಲಭೂತ ಸೌಕರ್ಯಗಳನು ಒದಗಿಸಲು ಮತ್ತು ಮಕ್ಕಳಿಗೆ ನ್ಯಾಯ ದೊರಕಿಸಿಕೊಡಲು. ಮತ್ತು ಮಕ್ಕಳಿಗೆ ಅನ್ಯಾಯ ಮಾಡಿದಂತ ವಾರ್ಡನ್ ಮತ್ತು ಪ್ರಾಂಶುಪಾಲರ ವಿರುದ್ಧ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ನಿರಂತರ ಅಮರ್ನಾಥ ಉಪಾಸ ಸತ್ಯಾಗ್ರಹವನ್ನು ಬಿಆರ್ ಅಂಬೇಡ್ಕರ್ ಶಕ್ತಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಗೆ ಮಣಿದು ಬೆಳಗಾವಿ ಜಿಲ್ಲಾಡಳಿತ ಹಾಗೂ ಬೆಳಗಾವಿ ಜಿಲ್ಲಾಧಿಕಾರಿ ನಿತಿಶ್ ಪಾಟೀಲ್ ಅವರು ಮಂಗಳ ಗೌರಿ ಗಡ್ಡಿ ಮತ್ತು ವಸತಿ ಶಾಲೆಯ ನಿಲಯ ಪಾಲಕರಾದ ಪ್ರಶಾಂತ್ ಕಲಗೂಡಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ

ಈ ಸಂದರ್ಭದಲ್ಲಿ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಲಕ್ಷ್ಮಣ್ ದಶರಥ್ ಕೊಲ್ಕರ್ , ರಾಜ ಉಪಾಧ್ಯಕ್ಷರಾದ ಸಾಗರ್ ಕೋಲ್ಕಾರ್ , ಶೋಭಾ ಮತ್ತಿವಾಡಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪುಷ್ಪ ಕಾಂಬಳೆ ಗ್ರಾಮೀಣ ಘಟಕದ ಮಹಿಳಾ ಅಧ್ಯಕ್ಷರು, ತಾಲೂಕ ಅಧ್ಯಕ್ಷರು, ಕಸ್ತೂರಿ ನಿಂಗನ್ನವರ್ ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷರು, ಅಡಿವೆಪ್ಪ ಕೋಲ್ಕಾರ್, ಭೀಮ್ಸಿ ರಾಮೇತ್ರಿ, ನಾಗೇಶ್ ಕೋಲ್ಕಾರ್, ವಕೀಲರು ಹಾಗೂ ಇನ್ನು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Tags: