Uncategorized

ವಿಷದ ಕಾಳುಗಳನ್ನು ಹಾಕಿ 9 ನವಿಲುಗಳ ಕೊಲೆ

Share

ಚಿಕ್ಕೋಡಿ : ರಾಷ್ಟ್ರಪಕ್ಷಿ ನವಿಲುಗಳಿಗೆ ವಿಷದ ಕಾಳು ಹಾಕಿ ಕಿಡಿಗೇಡಿಗಳು ಕೊಂದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿದೆ.

9 ನವಿಲುಗಳಿಗೆ ವಿಷದ ಕಾಳುಗಳನ್ನು ಹಾಕಿ ಕೊಂದ ದುರುಳರು ಮಾಂಸಕ್ಕಾಗಿ ನವಿಲುಗಳನ್ನು ಕೊಂದಿರುವ ಶಂಕಿಸಲಾಗಿದೆ. ಕೃಷ್ಣಾ ನದಿ ದಡದ ಆಚೆಗೆ ಬೈಕ್ ನಿಲ್ಲಿಸಿ ನವಿಲುಗಳನ್ನು ಕೊಲ್ಲಲ್ಲು ಬಂದಿದ್ದ ಕಳ್ಳರನ್ನ ಮಾಂಜರಿ ಗ್ರಾಮಸ್ಥರು ಬೆನ್ನಟ್ಟಿದಾಗ ಕೃಷ್ಣಾ ನದಿಗೆ ಹಾರಿ ಈಜುತ ಮತ್ತೊಂಡೆದೆ ಸೇರಿ ಪರಾರಿಯಾಗಿದ್ದಾರೆ.

ಮಾಂಜರಿ ಗ್ರಾಮಸ್ಥರಿಂದ ಅರಣ್ಯಾಧಿಕಾರಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಮೃತ ನವಿಲುಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. RFO ಪ್ರಶಾಂತ ಗೌರಾಣಿ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೆ ನವಿಲುಗಳ ಮಾರಣಹೋಮದ ಕುರಿತು ಮಾಹಿತಿ ನೀಡಿದರು ಸಹ ಅರಣ್ಯಾಧಿಕಾರಿ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ಬೇಜವಾಬ್ದಾರಿ ವಹಿಸಿದ್ದಾರೆಂದು ಗ್ರಾಮಸ್ಥರಿಂದ ಆರೋಪಿಸಿದ್ದಾರೆ.

Tags: