ಸಮಾಜದ ಹಿತಾಸಕ್ತಿಯ ಉದ್ದೇಶದಿಂದ ಪ್ರಾರಂಭವಾದ ಕೊಂಕಣಿ ಉಜ್ವಾದ ಪತ್ರಿಕೆಯ ರಜತ ಮಹೋತ್ಸವದ ಅಂಗವಾಗಿ 15 ಜನವರಿ 2024 ರಂದು ಸಮಾರಂಭ ನಡೆಯಲಿದೆ.
ಬೆಳಗಾವಿಯಲ್ಲಿ 25 ವರ್ಷಗಳ ಹಿಂದೆ ಆರಂಭವಾಗೊಂಡ ಕೊಂಕಣಿ ಉಜ್ವಾದ ಪತ್ರಿಕೆಗೆ ಈ ವರ್ಷ 25 ವರ್ಷಗಳು ಪೂರ್ಣಗೊಳ್ಳುತ್ತಿದ್ದು. ಮಹೋತ್ಸವವನ್ನು 15 ಜನವರಿ 2024 ರಂದು ಬೆಳಗಾವಿಯ ಸೇಂಟ್ ಯಕ್ಟೇವಿಯರ್ಸ್ ಹೈಸ್ಕೂಲ್ ಸಭಾಂಗಣದಲ್ಲಿ ಬೆಳಿಗ್ಗೆ 10.30 ಕ್ಕೆ ಆಯೋಜಿಸಲಾಗಿದೆ ಎಂದು ತಿಳಿಸಿದರು ,ಕೊಂಕಣಿ ಹಾಸ್ಯ ಕಲಾವಿದರಿಂದ ವಿಶೇಷ ಕಾರ್ಯಕ್ರಮ ನಡೆಯಲಿದೆ ಮುಖ್ಯ ಅತಿಥಿಗಳಾಗಿ ಗೋವಾದ ಕ್ರೀಡೆ ಮತ್ತು ಯುವಜನ, ಗ್ರಾಮಾಭಿವೃದ್ಧಿ ಕಲೆ ಮತ್ತು ಸಂಸ್ಕೃತಿ ಸಚಿವರಾದ ಗೋವಿಂದ ಗಾವಡೆ , ಕೆ.ಎಲ್.ಇ. ಸೊಸೈಟಿ ಅಧ್ಯಕ್ಷ ಡಾ ಪ್ರಭಾಕರ ಕೋರೆ , ಹಿರಿಯ ಕೊಂಕಣಿ ಸಾಹಿತಿ ಹೇಮಾ ನಾಯಕ್, ಮಿಲಾಗ್ರಿಸ್ ಫೆರ್ನಾಂಡಿಸ್ , ಹಾಗೂ ಕ್ರೈಸ್ತ ಅಭಿವೃದ್ಧಿ ಪರಿಷತ್ತಿನ ಸದಸ್ಯ ಐವನ್ ಡಿಸೋಜಾ, ಮಾಜಿ ಶಾಸಕ ಫಿರೋಜ್ ಸೇಠ್ ಭಾಗವಹಿಸುವರು ಎಂದರು

ಲೂಯಿಸ್ ರೋಡ್ರಿಗಸ್ ,ಬಾಲಕೃಷ್ಣ ಪೈ ,ಗಿರ್ಗೋಲ್ ರೋಡ್ರಿಗಸ್ ಸೈಮನ್ ಲೋಬೋ ,ಮ್ಯಾನುಯೆಲ್ ರೋಡ್ರಿಗಸ್ ,
ಮಿನಿನ್ ಗೊನ್ಸಾಲ್ವ್ಸ್, ಎಲಿಜಬೆತ್ ರೋಡ್ರಿಗಸ್ ಸುದ್ದಿಗೋಷ್ಟಿ ಯಲ್ಲಿ ಇದ್ದರು

