ರಾಜ್ಯದಲ್ಲಿ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕಡ್ಡಾಯ ಕನ್ನಡ ಭಾಷೆ ಬಳಕೆಯಾಗಬೇಕು ಎಂದು ಕಾನೂನೇ ಇದೆ. ಈ ಕಾನೂನು ಜಾರಿಗಾಗಿ ಹೋರಾಟಗಳೂ ಕೂಡ ನಡೆಯುತ್ತಿವೆ. ಆದರೆ ಕರ್ನಾಟಕದ ಗಡಿಯಲ್ಲಿರುವ ಈ ನಗರದಲ್ಲಿ ಕನ್ನಡ ಫಲಕಗಳು ಕಾಣ ಸಿಗುವುದೇ ಅಪರೂಪ.ಕನ್ನಡದ ಗಾಳಿ ಪಡೆದು , ಅನ್ನ ತಿಂದು ಕನ್ನಡ ಭಾಷೆಯ ಬಳಿಸೋದಕ್ಕೆ ಈ ನಗರದ ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ಕನ್ನಡ ನೆಲದಲ್ಲೆ ಕನ್ನಡದ ಕಡಿಗಣನೆ ಆಗುತ್ತಿರುವದಾದರೂ ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.
ಹೀಗೆ ವಾಣಿಜ್ಯ ಮಳಿಗೆಗಳ ಮೇಲೆ ಎಲ್ಲಿ ನೋಡಿದರೂ ಇಂಗ್ಲಿಷ್ ಹಾಗೂ ಮರಾಠಿ ಭಾಷೆಯ ಫಲಕಗಳು ರಾರಾಜಿಸುತ್ತಿರುವದು ಯಾವುದೋ ಬೇರೆ ರಾಜ್ಯದಲ್ಲಿ ಅಲ್ಲ. ಸ್ವತಃ ನಮ್ಮ ರಾಜ್ಯದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ.ಫಲಕಗಳ ಮೇಲೆ ಶೇ. 60 ಕನ್ನಡ ಭಾಷೆ ಕಡ್ಡಾಯವಾಗಿ ಬರೆಯಿಸಬೇಕು ಎನ್ನುವ ಕಾನೂನು ಇಲ್ಲಿ ಲೆಕ್ಕಕ್ಕೆ ಇಲ್ಲದಂತಾಗಿದೆ. ನೂರಕ್ಕೆ ನೂರರಷ್ಟು ಇಲ್ಲಿ ಅನ್ಯಭಾಷೆಯ ಫಲಕಗಳನ್ನ ಅಳವಡಿಸಿದರೂ ಯಾರು ಹೇಳುವರು ಇಲ್ಲ. ಕೇಳುವರು ಇಲ್ಲದಂತಾಗಿದೆ. ಇನ್ನೂ ಇಲ್ಲಿ ಸರಕಾರದ ಕಾನೂನನ್ನ ಅನುಷ್ಠಾನಗೊಳಿಸಬೇಕಿರುವ ನಗರ ಸಭೆ ಕಟ್ಟಡದ ಮೇಲೆ ಕನ್ನಡ ಭಾಷೆಯೇ ಕಡೆಗಣನೆ ಆಗಿದೆ. ನಗರ ಸಭೆಯ ಫಲಕದಲ್ಲಿ 70 ರಷ್ಟು ಮರಾಠಿ ಭಾಷೆಯಿದ್ದರೆ 30 ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕನ್ನಡ ಭಾಷೆ ಬಳಿಸಿ ಕರ್ನಾಟಕದಲ್ಲೆ ಕನ್ನಡಕ್ಕೆ ಅವಮಾನಿಸುವಂತ ಪರಿಸ್ಥಿತಿ ಬಂದಿದೆ.
ಕನ್ನಡದ ವೇತನ ಪಡೆಯುವ ಇಲ್ಲಿನ ಸಿಬ್ಬಂದಿಗಳು ಹಾಗೂ ರಾಜಕಾರಣಿಗಳೂ ಕನ್ನಡ ಫಲಕ ಅಳವಡಿಸುವ ಗೋಜಿಗೂ ಹೋಗದೇ ಇರುವದು ದುರಂತ. ಈ ಬಗ್ಗೆ ನಗರ ಸಭೆ ಪೌರಾಯುಕ್ತರನ್ನ ಕೇಳಿದರೇ ಹಂತ ಹಂತವಾಗಿ ಕನ್ನಡ ಅಳವಡಿಸುವ ಕಾರ್ಯ ನಡೆಯುತ್ತಿದೆ ಎನ್ನುತ್ತಾರೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಿಂದಿ ಹಾಗೂ ಇಂಗ್ಲಿಷ್ ನಾಮಫಲಕಗಳ ವಿರುದ್ದ ಕನ್ನಡ ಸಂಘಟನೆಗಳು ಸಮರ ಸಾರಿವೆ. ಕನ್ನಡ ಶೇ.60 ರಷ್ಟು ಕನ್ನಡ ಕಡ್ಡಾಯವಾಗಿ ಬಳಿಸುವಂತೆ ಬೃಹತ್ ಹೋರಾಟವೇ ನಡೆದು ಕನ್ನಡಪರ ಹೋರಾಟಗಾರರ ಬಂಧನವೂ ಆಗಿದೆ. ಇಷ್ಟೆಲ್ಲ ಹೋರಾಟ ಆದರೂ ಕೂಡ ಕರ್ನಾಟಕದ ಗಡಿಯಲ್ಲಿರುವ ನಿಪ್ಪಾಣಿ ನಗರದಲ್ಲಿ ಕನ್ನಡ ಫಲಕ ಅಳವಡಿಸಲು ವ್ಯಾಪಾರಸ್ಥರು ಮುಂದಾಗುತ್ತಿಲ್ಲ. ಒಟ್ಟಿನಲ್ಲಿ ನಿಪ್ಪಾಣಿ ನಗರ ಸಭೆ ವ್ಯಾಪ್ತಿಯಲ್ಲಿ ಕನ್ನಡ ಭಾಷೆಯ ಕಡೆಗಣನೆ ಮಾಡಲಾಗುತ್ತಿದೆ. ಇನ್ನಾದರೂ ನಗರ ಸಭೆಯ ಅಧಿಕಾರಿಗಳು ಕನ್ನಡ ನಾಮಫಲಕಗಳ ಕಡ್ಡಾಯ ಕಾನೂನು ಜಾರಿಗೆ ಮುಂದಾಗುತ್ತಾರಾ ಕಾಯ್ದು ನೋಡಬೇಕಿದೆ.
ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ