ಸಂಜನಾ ದೇಸಾಯಿ ಅವರು ‘ಸೂಪರ್ ವುಮನ್’ ಪ್ರಶಸ್ತಿಯನ್ನು ಗೆದ್ದರೆ, ಶಿಲ್ಪಾ ಕುಲಕರ್ಣಿ ಮೊದಲ ರನ್ನರ್ ಅಪ್ ಮತ್ತು ತೃಪ್ತಿ ಮಾಂಗಲೇ ಎರಡನೇ ರನ್ನರ್ ಅಪ್ ಆಗಿದ್ದಾರೆ.
ರೋಟರಿ ಕ್ಲಬ್ ಆಫ್ ಬೆಳಗಾವಿಯಿಂದ ಅನ್ನೋತ್ಸವ 2024 ದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಶನಿವಾರದಂದು ಸೂಪರ್ ವುಮನ್ ಸ್ಪರ್ಧೆ ವಿಶೇಷವಾಗಿ ಬೆಳಗಾವಿಯ ಮಹಿಳೆಯರ ನಡುವೆ ತೀವ್ರ ಪೈಪೋಟಿ ನಡೆಯಿತು. ಸಂಜನಾ ದೇಸಾಯಿ ಈ ಸ್ಪರ್ಧೆಯ ಮೇಲುಗೈ ಸಾಧಿಸುವ ಮೂಲಕ ಸೂಪರ್ ವುಮನ್ ಪ್ರಶಸ್ತಿ ಗೆದ್ದರು. ಈ ವರ್ಷದ ವಿಜೇತೆ ಸಂಜನಾ ದೇಸಾಯಿ ಅವರನ್ನು ಕಳೆದ ವರ್ಷದ ವಿಜೇತೆ ಅಮೃತಾ ಸೂಪರ್ ವುಮನ್ ಕಿರೀಟ ತೊಡಿಸಿದರು. ಈ ಸಂದರ್ಭದಲ್ಲಿ 2020 ರ ಫೆಮಿನಾ ಮಿಸ್ ಇಂಡಿಯಾ ಕರ್ನಾಟಕದ ಮೊದಲ ಐದು ಸ್ಪರ್ಧಿಗಳಲ್ಲಿ ಬೆಳಗಾವಿಯ ರತಿ ಹುಲ್ಜಿ ಉಪಸ್ಥಿತರಿದ್ದರು. ಅದೇ ರೀತಿ ರನ್ನರ್ಸ್ ಅಪ್ ಶಿಲ್ಪಾ ಕುಲಕರ್ಣಿ ಮತ್ತು ತೃಪ್ತಿ ಮಾಂಗಲೇ ಅವರನ್ನು ಸನ್ಮಾನಿಸಲಾಯಿತು. ಅತ್ಯುತ್ತಮ ಬೆಸ್ಟ್ ಸ್ಮೈಲ್ ಪ್ರಶಸ್ತಿಯನ್ನು ಅರ್ಚನಾ ಪದ್ಮಣ್ಣನವರ್ ಅವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ “ಸೂಪರ್ ವುಮನ್” ಸಂಜನಾ ದೇಸಾಯಿ ಇನ್ ನ್ಯೂಸ್ ಜೊತೆ ಸಂತಸ ವ್ಯಕ್ತಪಡಿಸುತ್ತಾ . ಮಹಿಳೆಯರು ತಮ್ಮ ಮೇಲೆ ನಂಬಿಕೆ ಇಟ್ಟು ನೀವು ಏನೇ ಮಾಡಿದರೂ ಆತ್ಮವಿಶ್ವಾಸದಿಂದ ಮಾಡಬೇಕು ಎಂಬ ಸಂದೇಶವನ್ನು ಮಹಿಳೆಯರಿಗೆ ನೀಡಿದರು.
ಫಸ್ಟ್ ರನ್ನರ್ ಅಪ್ ಆದ ಶಿಲ್ಪಾ ಕುಲಕರ್ಣಿ ಮಾತನಾಡುತ್ತಾ ನನಗೆ ತುಂಬಾ ಖುಷಿಯಾಗಿದೆ, ಏನೇ ಮಾಡಿದರೂ ಕಷ್ಟಪಟ್ಟು ಮಾಡಬೇಕು . ಕೆಲಸಗಳನ್ನು ಉತ್ತಮವಾಗಿ ಮಾಡಿದರೆ ಖಂಡಿತವಾಗಿಯೂ ಯಶಸ್ಸು ಸಾದಿಸಬಹುದು ಎಂದರು .
ಬೆಳಗಾವಿಯ ಮಹಿಳೆಯರಿಗಾಗಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಸೆಕೆಂಡ್ ರನ್ನರ್ ಅಪ್ ತೃಪ್ತಿ ಮಾಂಗಲೆ ರೋಟರಿ ಕ್ಲಬ್ ಆಫ್ ಬೆಳಗಾವಿಗೆ ಧನ್ಯವಾದ ಅರ್ಪಿಸಿದರು. ಅವರ ಯಶಸ್ಸಿನ ಬಗ್ಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.
ರೋಟರಿ ಅನ್ನೋತ್ಸವಕ್ಕೆ ಬೆಳಗಾವಿಯ ಜನತೆಗೆ ಅಪಾರ ಪ್ರತಿಕ್ರಿಯೆ ವ್ಯಕ್ತವಾಗಿದ್ದಕ್ಕೆ ಅಧ್ಯಕ್ಷ ಡಾ. ಸಂತೋಷ ಪಾಟೀಲ ಕೃತಜ್ಞತೆ ಸಲ್ಲಿಸಿ ಮಾತನಾಡುತ್ತಾ . ಬೆಳಗಾವಿ ಸೂಪರ್ ವುಮನ್ ಕಾರ್ಯಕ್ರಮ ಇಂದು ನಡೆಯಿತು. ಎರಡು ವರ್ಷಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಈ ಸ್ಪರ್ಧೆಯ ಮೊದಲ ಎರಡು ಸುತ್ತುಗಳಿಂದ 24 ಮಹಿಳೆಯರು ಅಂತಿಮ ಸುತ್ತಿಗೆ ಆಯ್ಕೆಯಾದರು. ಇದರಿಂದ ಅಂತಿಮವಾಗಿ ಮೂವರನ್ನು ಆಯ್ಕೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಭಾಗ್ಯಶ್ರೀ ಕಾಮತ್, ಮುಖ್ಯ ಅತಿಥಿಗಳಾಗಿ ಕೇತಕಿ ಪಾಟೀಲ್, ಮಿಸ್ ಕರ್ನಾಟಕ ರತಿ ಹುಲಜಿ ಉಪಸ್ಥಿತರಿದ್ದರು ಎಂದರು
ರೋಟರಿ ಕ್ಲಬ್ ಆಫ್ ಬೆಳಗಾವಿ ಅಧ್ಯಕ್ಷ ಜೈದೀಪ್ ಸಿದ್ದಣ್ಣನವರ್ ಅವರು ರೋಟರಿ ಅನ್ನೋತ್ಸವಕ್ಕೆ ಸ್ವಯಂಪ್ರೇರಿತ ಬೆಂಬಲ ನೀಡಿದ್ದಕ್ಕಾಗಿ ಎಲ್ಲಾ ಜನತೆಗೂ ಕೃತಜ್ಞತೆ ಸಲ್ಲಿಸಿದರು. ಅನ್ನೋತ್ಸವದ ಎಲ್ಲ ಮಳಿಗೆಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇನ್ನು ಮುಂದೆಯೂ ಅದೇ ಬೆಂಬಲ ನೀಡುವಂತೆ ಮನವಿ ಮಾಡಿದರು. ಅನ್ನೋತ್ಸವದಲ್ಲಿ ಮನರಂಜನಾ ಕಾರ್ಯಕ್ರಮಗಳೂ ಚೆನ್ನಾಗಿ ನಡೆದವು. ಅನ್ನೋತ್ಸವದಿಂದ ಬರುವ ಲಾಭವನ್ನು ಬೆಳಗಾವಿ ಜನತೆಯ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಲಿದ್ದೇವೆ. ಬೆಳಗಾವಿ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.
ಈ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಸುನೀಶ ಮಿತ್ರಾಣೆ, ಮನೋಜ್ ಮೈಕಲ್, ಅವಿನಾಶ ಪೋತದಾರ ಸೇರಿದಂತೆ ರೋಟರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.