Uncategorized

ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ-ಕುಂದಾನಗರಿಯಲ್ಲಿ ಶ್ರೀರಾಮ ಭಕ್ತರಿಗೆ ಲಾಡು ನೀಡಲು ಸಿದ್ಧತೆ

Share

ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಇಂದಿನಿಂದಲೇ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗಾವಿ ನಗರದಲ್ಲಿ ಸುಮಾರು 80 ಸಾವಿರ ಮನೆಗಳಿಗೆ ಕೆಸರಿ ಬಣ್ಣದ ಧ್ವಜ ವಿತರಿಸಲಾಗುತ್ತಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ರಾಮ ಮಂದಿರದ ಉದ್ಘಾಟನೆಯನ್ನ ಇಡೀ ವಿಶ್ವವೇ ಎದುರು ನೋಡಿತ್ತಿದೆ ಇದೆ ತಿಂಗಳು 22 ರಂದು ನಡೀಯಲಿರುವ ಹಿಂದೂಗಳ ಕನಸಿನ ಮಂದಿರ ಪ್ರಭು ಶ್ರೀ ರಾಮ ಮಂದಿರದ ಉದ್ಘಾಟನೆ ಯಶಸ್ವಿಯಾಗಲಿ ಎಂದು ಇಡೀ ವಿಶ್ವದಲ್ಲಿ ರಾಮನ ಜಪ ತಪ ಹೋಮ ಹವನಗಳು ಜರುಗುತ್ತಿವೆ ರಾಮನ ಆಗಮನಕ್ಕೆ ಅದೆಷ್ಟೋ ವರ್ಷಗಳ ಕಾಲ ಲಕ್ಷಾಂತರ ಹಿಂದೂ ಕಾರ್ಯಕರ್ತರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ ಇಂತಹ ಪ್ರಭು ಶ್ರೀರಾಮನ ಆಗಮನ ದೇಶದಲ್ಲಿ ಅಷ್ಟೇ ಅಲ್ಲದೆ ಇಡೀ ವಿಶ್ವದಲ್ಲಿನ ಜನರಿಗೆ ಹಬ್ಬದ ವಾತಾವರಣ ಸೃಷ್ಠಿಸಿದೆ
ಬೆಳಗಾವಿಯಲ್ಲಿ ಸದ್ಯ ಶ್ರೀರಾಮನಜಪ ಜೋರಾಗಿದೆ. ಜನೆವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕುಂದಾನಗರಿಯಲ್ಲಿ ಶ್ರೀರಾಮನ ಭಕ್ತರು ಭಕ್ತಿ ಭಾವದಲ್ಲಿ ಮಿಂದೆದ್ದಿದ್ದಾರೆ. ರಾಮನ ಮೂರ್ತಿ ಪ್ರತಿಷ್ಟಾಪನೆ ದಿನವೇ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಶಾಸಕ ಅಭಯ ಪಾಟೀಲ ಅವರಿಂದ ಮನೆಗೆ ಲಾಡು ಮತ್ತು ರಾಮನ ಧ್ವಜ ನೀಡಲು ಭಕ್ತರು ಸಜ್ಜಾಗಿದ್ದಾರೆ.
ಈಗಾಗಲೇ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ 80 ಸಾವಿರ ಲಾಡು ತಯಾರಾಗುತ್ತಿದ್ದು ಕ್ಷೇತ್ರದ 80 ಸಾವಿರ ಕುಟುಂಬಗಳಿಗೆ ಲಾಡು ತಲುಪಲಿದೆ. ಈ ಲಾಡುವನ್ನ ಹೊರ ರಾಜ್ಯವಾದ ರಾಜಸ್ಥಾನ ಕಾರ್ಮಿಕರಿಂದ ಲಾಡುಗಳನ್ನ ತಯಾರಿಸಲಾಗುತ್ತಿದೆ. ಜನೆವರಿ 22 ರಂದು ಮನೆ ಮನೆಗೆ ಲಾಡು ನೀಡಲು ಭರ್ಜರಿ ತಯಾರಿ ನಡೆಸಿದ್ದು ಒಂದೊಂದು ಬಾಕ್ಸನಲ್ಲಿ ಐದು ಲಾಡುಗಳನ್ನ ಪ್ಯಾಕ ಮಾಡಲಾಗುತ್ತಿದೆ. ಅಯೋಧ್ಯೆಯ ಸಂಭ್ರಮ ಬೆಳಗಾವಿಯಲ್ಲಿ ಕಂಡು ಬರುತ್ತಿದ್ದು ಎಲ್ಲರ ಗಮನ ಸೆಳೆದಿದೆ ಶಾಸಕ ಅಭಯ ಪಾಟೀಲ ಅವರು ರಾಮನ ಲಾಡು ಪ್ರಸಾದಗಳನ್ನು ತಯಾರಿಸುವ ಕೇಂದ್ರಕ್ಕೆ ಭೇಟಿ ನೀಡಿ ಲಾಡು ಸಿದ್ಧತೆ ವೀಕ್ಷಿಸಿದರು .

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ವಿಶೇಷವಾಗಿ ಇವತ್ತು ಹೊಸೂರು ಬಸವಣ್ಣ ಗಲ್ಲಿಯಲ್ಲಿ ಆಕಾಶ ಬುಟ್ಟಿಯಲ್ಲಿ ರಾಮನ ಬಾಲ್ಯದಿಂದ ಪಟ್ಟಾಭಿಷೇಕದ ವರೆಗೆ ೧೦೦ ಚಿತ್ರಗಳ ಪ್ರದರ್ಶನವನ್ನು ಸಂಜೆ ೭ ರಿಂದ ರಾತ್ರಿ ೧೦ ವರೆಗೆ ಹಮ್ಮಿಕೊಂಡಿದ್ದೇವೆ ಸುಮಾರು ೧೦. ೦೦೦ ರಾಮನ ಭಕ್ತರ ಕೈಮೇಲೆ ರಾಮನ ರೇಖಾ ಚಿತ್ರವನ್ನ ಬಿಡಿಸುವಂತ ಕಾರ್ಯಕ್ರಮ ನಾಡಿದ್ದು ಪ್ರಾರಂಭವಾಗಲಿದೆ ಇವತ್ತಿನಿಂದ ಸುಮಾರು ೮೦. ೦೦೦ ಕುಟುಂಬಗಳಿಗೆ ಲಾಡು ಪ್ರಸಾದ ಹಂಚುವ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಕೆಲವೊಂದು ವಾರ್ಡಗಳಲ್ಲಿ ನಗರ ಸೇವಕರು ವಾರ್ಡಗಳ ಅಲಂಕಾರ ಮಾಡುವುದು ಮತ್ತು ಕೇಸರಿ ದ್ವಜಗಳ ವಿತರಣೆ ಮಾಡುತ್ತಿದ್ದಾರೆ ದಕ್ಷಿಣ ಮತ ಕ್ಷೇತ್ರದಲ್ಲಿ ದೀಪಾವಳಿವನ್ನು ಮತ್ತೊಮ್ಮೆ ಆಚರಣೆ ಮಾಡಲಾಗುತ್ತದೆ ಇಡೀ ದೇಶದಲ್ಲಿ ಇದು ವಿನೂತನ ಹೊಸ ಯೋಜನೆ ಭಾರತೀಯರು ಎಲ್ಲರು ಈ ರೀತಿ ಕಾರ್ಯಕ್ರಮ ಮಾಡಬೇಕು ಎಂದರು

Tags: