ಗುಮ್ಮಟನಗರಿ ಜನತೆಗೆ ಈಗ ಚೆಡ್ಡಿ ಗ್ಯಾಂಗ್ ಆತಂಕ ಶುರುವಾಗಿದೆ. ತಡರಾತ್ರಿ ಮನೆಗಳಿಗೆ ಬರುವಂತಹ ಚಡ್ಡಿ ಗ್ಯಾಂಗ್ ಕಳ್ಳತನಕ್ಕೆ ಮುಂದಾಗುತ್ತಿದ್ದಾರೆ. ಮಂಕಿ ಕ್ಯಾಪ್, ಮಾಸ್ಕ್ ಹಾಗೂ ಚಡ್ಡಿ (ಬರ್ಮೋಡಾ)ಗಳನ್ನು ಹಾಕಿಕೊಂಡು ಬರುವ ಏಳೇಂಟು ಜನರ ತಂಡ ಕಳ್ಳತನಕ್ಕೆ ಮುಂದಾಗುತ್ತಾರೆ. ಇವರಿಗೆ ಒಂಟಿ ಮನೆಗಳೇ ಟಾರ್ಗೆಟ್. ಈಗಾಗಲೇ ಪೊಲೀಸ್ ಇಲಾಖೆಯವರು ಸಾಕಷ್ಟು ಈ ವಿಚಾರವಾಗಿ ಜನರಲ್ಲಿ ಜಾಗೃತಿಯನ್ನು ಕೂಡ ಮೂಡಿಸುತ್ತಿದ್ದಾರೆ ಆದಷ್ಟು ಬೇಗ ಕಳ್ಳರನ್ನು ಹಿಡಿಯಲು ಪೊಲೀಸರೊಂದಿಗೆ ಕೈಜೋಡಿಸುವಂತೆ ಪೊಲೀಸರು ಕೂಡ ಮನವಿ ಮಾಡುತ್ತಿದ್ದಾರೆ. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…
ಹೌದು ಗುಮ್ಮಟನಗರಿಗೆ ವಿಜಯಪುರದಲ್ಲಿ ಕಳೆದ ಕೆಲ ದಿನಗಳಿಂದ ಎಳೆಂಟು ಜನರ ಕಳ್ಳರ ತಂಡದಿಂದ ಗುಮ್ಮಟ ನಗರಿ ಜನತೆಗೆ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ರಾತ್ರಿ ಹೊತ್ತಿನಲ್ಲಿ ಇವರು ಮನೆಗಳಿಗೆ ಬರುವಂತಹ ಏಳೆಂಟು ಜನರ ತಂಡ ಕಳ್ಳತನ ಮಾಡಲು ಮುಂದಾಗುತ್ತಿದ್ದಾರೆ. ಮನೆಯಲ್ಲಿ ಯಾರು ಇರದೇ ಇರೋದನ್ನ ಗಮನಿಸಿರುವ ಇವರು ಅಂತಹ ಮನೆಗಳಿಗೆ ಆಗಮಿಸುವ ಮೂಲಕ ಕಳ್ಳತನವನ್ನು ಮಾಡುತ್ತಿದ್ದಾರೆ. ಕಳ್ಳರ ಕೈಚಳಕದ ವಿಡಿಯೋ ಸಹಿತ ಸಿ ಸಿ ಕ್ಯಾಮೆರಾದಲ್ಲಿ ಸರಿಯಾಗಿದೆ. ಕಳ್ಳರನ್ನು ಹಿಡಿಯಲು ಬೀಟ್ ಪೊಲೀಸರನ್ನು ಕೂಡ ಹೆಚ್ಚಳ ಮಾಡಿದ್ದಾರೆ. ಇಷ್ಟೆಲ್ಲಾ ಆದ್ರೂ ಸಹಿತ ಈ ಚಡ್ಡಿ ಗ್ಯಾಂಗ್ ಮಾತ್ರ ಯಾರ ಕೈಗೆ ಸಿಗುತ್ತಿಲ್ಲ. ಇದರಿಂದ ಗುಮ್ಮಟ ನಗರ ನಿವಾಸಿಗಳಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಚಡ್ಡಿ (ಬರ್ಮೋಡಾ), ಟೀ ಶರ್ಟ, ಬನಿಯನ್, ಹಾಗೂ ಮಂಕಿ ಕ್ಯಾಪ್ ಹಾಕಿಕೊಂಡು ಇವರು ಬರುತ್ತಿದ್ದಾರೆ. ರಾತ್ರಿ ಹೊತ್ತಿನಲ್ಲಿ ಯಾರ ಮನೆಗೆ ಬರುತ್ತಾರೆ ಎಂಬ ಆತಂಕ ಕೂಡ ಗುಮ್ಮಟ ನಗರಿ ಜನತೆಗೆ ಶುರುವಾಗಿದೆ…
ಈ ಕಳ್ಳರ ತಂಡವನ್ನು ಹಿಡಿಯಲು ಈಗಾಗಲೇ ಪೊಲೀಸ್ ಇಲಾಖೆಯವರು ತಂಡವನ್ನು ಕೂಡ ರಚನೆ ಮಾಡಿದ್ದಾರೆ. ತಡರಾತ್ರಿ ಈ ಕಳ್ಳರು ಬಂದು ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಕೂಡ ಪೊಲೀಸರೊಂದಿಗೆ ಸಹಕರಿಸುವಂತೆ ಈಗಾಗಲೇ ಪೊಲೀಸ್ ಇಲಾಖೆ ಅವರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಅನುಮಾನಾಸ್ಪದ ರೀತಿಯಲ್ಲಿ ಯಾರಾದರೂ ತಮ್ಮ ಏರಿಯಾದಲ್ಲಿ ಓಡಾಡುವಂತವರು ಕಂಡು ಬಂದರೆ ತಕ್ಷಣವೇ ಈ ಆರ್ ಎಸ್ ಎಸ್ 112. ನಂಬರ್ ಗೆ ಕರೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇನ್ನೂ ಈ ಚಡ್ಡಿ ಗ್ಯಾಂಗ್ ನ ಟಾರ್ಗೆಟ್ ಯಾರು ಇರದೆ ಇರುವಂತ ಮನೆಗಳೆ ಇವರ ಟಾರ್ಗೆಟ್ ಆಗಿರುತ್ತದೆ. ಹಗಲು ಹೊತ್ತಿನಲ್ಲಿ ಮನೆಗಳನ್ನು ನೋಡಿಕೊಂಡು ಹೋಗಿ ಅಬ್ಸರ್ವ್ ಮಾಡಿ ರಾತ್ರಿ ಹೊತ್ತಿನಲ್ಲಿ ಅಂತಹ ಮನೆಗಳಲ್ಲಿ ಕಳ್ಳತನಕ್ಕೆ ಮಾಡುತ್ತಾರೆ. ಈ ಗ್ಯಾಂಗ್ ಮನೆ ಕಂಪೌಂಡಿಗೆ ನುಗ್ಗುವ ದೃಶ್ಯ ಸಿಸಿಟಿವಿ’ಯಲ್ಲಿ ಸೆರೆಯಾಗಿದ್ದು, ಸಾರ್ವಜನಿಕರು ನಿರ್ಲಕ್ಯ ವಹಿಸದಂತೆ, ಎಚ್ಚರಿಕೆ ವಹಿಸುವಂತೆ ಸೂಚನೆ ಮತ್ತು ಜಾಗೃತಿ ಕಾರ್ಯಕ್ರಮ ಪೋಲಿಸರು ಹಮ್ಮಿಕೊಂಡಿದ್ದಾರೆ. ಇಂತಹ ತಂಡ ಕಂಡು ಬಂದಲ್ಲಿ ಪೊಲೀಸ್ ಇಲಾಖೆಯನ್ನ ಕೂಡಲೇ ಸಂಪರ್ಕಿಸುವಂತೆ ಸೂಚನೆಯನ್ನ ನೀಡಿದ್ದಾರೆ. ಮನೆಯಿಂದ ಬೇರೆ ಊರಿಗೆ ಅಥವಾ ಹೊರಗಿರುವವರು ಮನೆಯಲ್ಲಿ ನಗದು ಸೇರಿದಂತೆ ಆಭರಣ ಬೆಲೆಬಾಳುವ ವಸ್ತುಗಳನ್ನ ಇಡಬಾರದು. ಬ್ಯಾಂಕ್ ಲಾಕರಿನಲ್ಲಿಟ್ಟರೆ ಒಳ್ಳೆಯದು. ಮನೆ ಮುಂದೆ ಬೆಳಕು ಸಾಕಷ್ಟಿರುವಂತೆ ವಿದ್ಯುದ್ದೀಪವಿರಲಿ. ಪೊಲೀಸ್ ಇಲಾಖೆಯ ಬೀಟ್ ಸಹಕಾರದ ಜೊತೆಗೆ ಆಯಾ ಪ್ರದೇಶದಲ್ಲಿ ಜನತೆ ವ್ಹಾಟ್ಸಾಪ್ ಗ್ರೂಪ್ ರಚಿಸಿಕೊಂಡು ಇಂತಹ ಸನ್ನಿವೇಶಗಳೆದುರಾದಾಗ ಪರಸ್ಪರ ಸಂಪರ್ಕದಲ್ಲಿರಲು ಜಾಗ್ರತೆಯಿಂದ ಇರಲು ಅನುಕೂಲವಾಗುತ್ತದೆ ಎಂದಿರುವ ಪೊಲೀಸ್ ಇಲಾಖೆ. ಅನುಕೂಲವಿದ್ದವರೆಲ್ಲ ಸಿಸಿಟಿವಿ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ….
ಗುಮ್ಮಟ ನಗರಿ ವಿಜಯಪುರದ ಜನತೆಗೆ ಈಗ ಚಡ್ಡಿ ಗ್ಯಾಂಗ್ ಆತಂಕ ಶುರುವಾಗಿದ್ದು. ಇನ್ನೂ ಪೋಲಿಸ್ ಮೂಲಗಳ ಮಾಹಿತಿ ಪ್ರಕಾರ ಅನ್ಯರಾಜ್ಯದ ಕಳ್ಳರು ಇವರು ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಕಳ್ಳರನ್ನು ಹಿಡಿಯಲು ಪೋಲಿಸ್ ಇಲಾಖೆಯೊಂದಿಗೆ ಸ್ಥಳಿಯರು ಕೈ ಜೊಡಿಸಲು ಮನವಿ ಮಾಡಿದ್ದಾರೆ. ಆದಷ್ಟು ಬೇಗಾ ಕಳ್ಳರನ್ನು ಹಿಡಿಯುವ ಮೂಲಕ ಜನರಲ್ಲಿ ಇರುವ ಆತಂಕ ಪೋಲಿಸ್ ಇಲಾಖೆಯವರು ದೂರ ಮಾಡಬೇಕಿದೆ…
ವಿಜಯಕುಮಾರ ಸಾರವಾಡ,
ಇನ್ ನ್ಯೂಜ್
ವಿಜಯಪುರ..