ಚವಾಟ್ ಗಲ್ಲಿಯಲ್ಲಿ ಅಯೋಧ್ಯೆಯಿಂದ ಬಂದ ಮಂತಾಕ್ಷತಾ ಕಲಶವನ್ನು ತಾಳ ಮೃದಂಗ ನಾದದೊಂದಿಗೆ ಸ್ವಾಗತಿಸಲು ಪಲ್ಲಕ್ಕಿಯ ಮೆರವಣಿಗೆ ಮಾಡಲಾಯಿತು.
ಅಯೋಧ್ಯೆಯ ಪ್ರಭು ಶ್ರೀರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಆಗಮಿಸಿದ ಮಂತ್ರಾಕ್ಷತಾ ಕಲಶವನ್ನು ಚವಾಟ್ ಗಲ್ಲಿಯಲ್ಲಿ ಡೋಲು ನಾದ ಹಾಗೂ ಜೈ ಶ್ರೀರಾಮ್ ಘೋಷಣೆಗಳೊಂದಿಗೆ 14 ಮಂತ್ರಾಕ್ಷತಾ ಮೆರವಣಿಗೆ ನಡೆಸಲಾಯಿತು. ಅಯೋಧ್ಯೆಯ ಪ್ರಭು ಶ್ರೀರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಆಗಮಿಸಿದ ಮಂಗಲ ಅಕ್ಷತಾ ಕಲಶ ಸಂಭ್ರಮದಿಂದ ಚವಾಟ್ ಗಲ್ಲಿಗೆ ಆಗಮಿಸಿತು.ಈ ಕಲಶಕ್ಕೆ ಭಕ್ತರಿಂದ ಪೂಜೆ ಸಲ್ಲಿಸಲಾಯಿತು. ಚವಾಟ್ ಗಲ್ಲಿಯ ಶ್ರೀ ಮಾರುತಿ ಮಂದಿರ ದೇವಸ್ಥಾನದಿಂದ ಡೊಳ್ಳು ಬಾರಿಸುತ್ತಾ ಮೆರವಣಿಗೆ ನಡೆಸಲಾಯಿತು. ಮಹಿಳೆಯರು ಅಕ್ಷತಾ ಕಲಶವನ್ನು ತಲೆಯ ಮೇಲೆ ಹೊತ್ತು ಯಾತ್ರೆಯಲ್ಲಿ ಪಾಲ್ಗೊಂಡರು. ವಿವಿಧೆಡೆ ಯಾತ್ರೆಗೆ ಅದ್ಧೂರಿ ಸ್ವಾಗತ ನೀಡಲಾಯಿತು.ಹಾಗೆಯೇ ಈ ಮೆರವಣಿಗೆಯಲ್ಲಿ ಮಹಿಳೆಯರು, ಮಕ್ಕಳು, ಯುವಕರು, ಹಿರಿಯ ನಾಗರಿಕರು ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಜೈ ಶ್ರೀರಾಮ್ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಘೋಷಣೆಗಳನ್ನು ಕೂಗಲಾಯಿತು
ಶ್ರೀರಾಮ ಮಂತಾಕ್ಷತಾ ಕಲಶ ಪಲ್ಲಕ್ಕಿ ಹಾದು ಹೋಗುವ ಮಾರ್ಗಗಳಲ್ಲಿ ರಂಗೋಲಿ ಬಿಡಿಸಲಾಗಿತ್ತು. ಅಂಗಳದಲ್ಲಿ ದೀಪಗಳನ್ನು ಬೆಳಗಿಸಲಾಗಿತ್ತು . ಮನೆ ಮನೆಗೆ ತೆರಳಿ ಕಲಶಕ್ಕೆ ಪೂಜೆ ಸಲ್ಲಿಸಲಾಯಿತು. ಹೂವಿನ ರಂಗೋಲಿ, ಜತೆಗೆ ವಿವಿಧೆಡೆ ಪಟಾಕಿ ಸಿಡಿಸಲಾಯಿತು. ಹಲಗಿ, ವಾರಕರಿ ಸಂಪ್ರದಾಯದ ಸಕಲ ವಾದ್ಯಗಳೊಂದಿಗೆ ಡಂಗುರ ಡಣಗರಿ ಡೊಳ್ಳು ಬಾರಿಸುವ ಮೂಲಕ ಚವಟ್ ಗಲ್ಲಿ, ಶೆಟ್ಟಿ ಗಲ್ಲಿಯಲ್ಲಿ ಸಕಲ ವಾದ್ಯಗಳೊಂದಿಗೆ ಶ್ರೀರಾಮ ಅಕ್ಷತಾ ಕಲಶದ ಮೆರವಣಿಗೆ ಪುಷ್ಪವೃಷ್ಟಿಯಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಬಿಜೆಪಿ ಕರ್ನಾಟಕ ಉಪಾಧ್ಯಕ್ಷ ಅನಿಲ್ ಬೆನಕೆ ಈ ಮೆರವಣಿಗೆ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಆರತಿಯ ನಂತರ ಪ್ರಸಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .ಈ ಶ್ರೀರಾಮ ಮಂತಾಕ್ಷತಾ ಕಲಶ ಪಲ್ಲಕ್ಕಿ ಸ್ವಾಗತ ಕಾರ್ಯಕ್ರಮ ಶ್ರೀ ಮಾರುತಿ ಮಂದಿರದಲ್ಲಿ ಸಮಾರೋಪಗೊಂಡಿತು.
ಜರುಗಿದ ಮಂತಾಕ್ಷತಾ ಕಲಶ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅನಿಲ ಬೆನಕೆ ಅಯೋಧ್ಯೆ ಹೋರಾಟದ ಕುರಿತು ಮಾಹಿತಿ ನೀಡಿದರು. ಜ್ಯೇಷ್ಠ ವಾರಕರಿ ಸಂಪ್ರದಾಯದ ಅಧ್ಯಕ್ಷ ಶಂಕರ ಬಾಬಲಿ ಮಹಾರಾಜರು ಆಶೀರ್ವಚನ ನೀಡಿ ಶುಭ ಹಾರೈಸಿದರು.
ಈ ಅಭಿಯಾನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಸಂಜಯ್ ಗುಂಡ್ಕಲ್ ಮತ್ತು ಬೀದಿಗಳಲ್ಲಿ ರಾಮಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.