ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮೀಣ ಮಂಡಲ ಕಾರ್ಯಲಯದಲ್ಲಿ ಗ್ರಾಮ ಚಲೋ ಅಭಿಯಾನದ ಮಹತ್ವದ ಸಭೆ ಆಯೋಜಿಸಲಾಗಿತ್ತು
ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾದವ್ ಮಾತನಾಡುತ್ತಾ ಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಸಂಪೂರ್ಣ ದೇಶದಲ್ಲಿ ಗ್ರಾಮ ಚಲೋ ಅಭಿಯಾನವನ್ನು ಪ್ರಾರಂಭಿಸಿದ್ದು ಹಾಗೆಯೇ ಬೆಳಗಾವಿ ಗ್ರಾಮೀಣವನ್ನು ಈ ಅಭಿಯಾನದ ಮುಖಾಂತರ ನಮ್ಮ ಸಂಘಟನೆ ಬಲಿಷ್ಠವಾಗಿದೆ ಎಂದು ವಿಸ್ತಾರಕರು ಹಾಗೂ ಸಂಯೋಜಕರು ನಿಯೋಜಿಸಲಾಗಿದ್ದು.ಅವರು ತಮ್ಮ 24 ತಾಸನ್ನು ನಿಯೋಜಿಸಿದ ಗ್ರಾಮಗಳಿಗೆ ಹೋಗಿ ಬೂತ್ ಕಮಿಟಿ, ಲಾಭಾರ್ಥಿಗಳನ್ನು ಸಂಪರ್ಕ ಹಾಗೂ ಸಮಾಜ ಪ್ರಮುಖರು ಸಂಪರ್ಕ ಮಾಡಿ ಗ್ರಾಮ ವಾತ್ಸವವನ್ನು ಮಾಡಿ ಬರುವ ಲೋಕಸಭಾ ಚುನಾವಣೆಗೆ 400 ಕ್ಕಿಂತ ಹೆಚ್ಚು ಬಿಜೆಪಿಯ ಅಭ್ಯರ್ಥಿಗಳು ಗೆದ್ದು ಬರಬೇಕೆಂದು ಅದಕ್ಕಾಗಿ ನಾವುಗಳೆಲ್ಲ ಪಣತೊಟ್ಟು ರಾಷ್ಟ್ರ ಕಟ್ಟುವ ಕಾರ್ಯ ಮಾಡಬೇಕೆಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಸಂಸದರಾದ ಮಂಗಲಾ ಅಂಗಡಿ ಮಾತನಾಡುತ್ತಾ ಪ್ರತಿಗಾಮಕ್ಕೆ ವಿಸ್ತಾರಕರಾಗಿ ಹೋಗಿ ಪಕ್ಷಕ್ಕಾಗಿ ಬಹಳ ಮಹತ್ವದ ಜವಾಬ್ದಾರಿ ಮಾಡುತ್ತಿದ್ದು ಮತ್ತೊಮ್ಮೆ ಬೆಳಗಾವಿಯಲ್ಲಿ ಬರುವ ಲೋಕಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್ಚು ಮತಗಳಿಂದ ಗೆಲಿಸಬೇಕು ಎಂದು ಹೇಳಿದರು.
ನೂತನ ಬಿಜೆಪಿ ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಈ ಸಮಯದಲ್ಲಿ ಬೆಳಗಾವಿ ಗ್ರಾಮೀಣ ಮಂಡಲದಿಂದ ಕೇಂದ್ರ ಸರ್ಕಾರ ಕಡೆಯಿಂದ ನೂತನವಾಗಿ ರೈಲ್ವೇ ಖಾತೆಯ ಸಲಹಾಗಾರರಾಗಿ ನೇಮಕವಾದ ಪ್ರದೀಪ್ ಪಾಟೀಲ್, ಮಲ್ಲಪ್ಪ ಕಾಂಬಳೆ, ತಿಪ್ಪಾಜಿ ಮೋರೆ ರಾಮಪ್ಪ ಕಲಬಾವಿ,ಅರ್ಜುನ್ ಡೊಂಬ್ಳೆ ಇವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಯುವರಾಜ್ ಜಾದವ್, ಮಲ್ಲಿಕಾರ್ಜುನ್ ಮಾದಣ್ಣವರ್, ಮಹಾನಗರ ಪಾಲಿಕೆ ಸದಸ್ಯ ವಿನಾ ವಿಜಾಪುರೆ, ಅಭಿಯಾನದ ಜಿಲ್ಲಾ ಸಂಚಾಲಕ ಗುರು ಮೆಟಗುಡು, ಗ್ರಾಮೀಣ ಮಾಜಿ ಶಾಸಕ ಮನೋಹರ್ ಕಾಡೋಲ್ಕರ್ ಗ್ರಾಮೀಣ ಮಂಡಳದ ವಿಸ್ತಾರಕರು ಹಾಗೂ ಸಂಯೋಜಕರು ವೇದಿಕೆಯ ಮೇಲೆ ಇದ್ದರು
ಕಾರ್ಯಕ್ರಮದ ಸ್ವಾಗತವನ್ನು ಪಂಕಜ್ ಘಾಡಿ ಮಾಡಿದರು ಸೂತ್ರ ಸಂಚಲನೆಯನ್ನು ಸಿದ್ದಪ್ಪ ಹುಕ್ಕೇರಿ ನೆರವೇರಿಸಿದರು ಈ ಕಾರ್ಯಕ್ರಮದಲ್ಲಿ ಬಹು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.