Uncategorized

ಕೆರಗೋಡು ಬಳಿಕ ಈಗ ಬೆಳಗಾವಿಯಲ್ಲಿ ಧ್ವಜ ದಂಗಲ್ :ಭಗವಾ ಧ್ವಜ ಮರಳಿ ಅಳವಡಿಕೆಗೆ ಪಟ್ಟುಹಿಡಿದ ನಿವಾಸಿಗಳು

Share

ಕೆರಗೋಡು ಬಳಿಕ ಈಗ ಬೆಳಗಾವಿಯಲ್ಲಿ ಧ್ವಜ ದಂಗಲ್ ಸುದ್ದಿ ಎದ್ದಿದೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿಯಲ್ಲಿ ಪಟ್ಟಣ ಪಂಚಾಯಿತಿಯ ಸಿಬ್ಬಂದಿ ವಾರದ ಹಿಂದೆ ಖಾಕಿ ಸಮ್ಮುಖದಲ್ಲಿ ಹನುಮ ಧ್ವಜ ತೆರವು ಮಾಡಿದ್ದರು ಹನುಮ ಧ್ವಜ ತೆರವು ಮಾಡಿದ್ದನ್ನು ಗ್ರಾಮಸ್ಥರು ಖಂಡಿಸಿ ಇಂದು ಹನುಮ ಮಂದಿರ ಮುಂದೆ ಧ್ವಜ ಹಾರಿಸಲು ಕರೆ ನೀಡಲಾಗಿದೆ ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಎಸ ಪಿ ಭೀಮಾಶಂಕರ ಗುಳ್ಳೆದ ಭೇಟಿ ನೀಡಿ ಗ್ರಾಮಸ್ಥರಿಗೆ ಶಾಂತತೆ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ

ಧ್ವಜ ತೆರವು ಮಾಡಿದ ಜಾಗದಲ್ಲಿ ಧ್ವಜ ಕಟ್ಟೆ ನಿರ್ಮಾಣಮಾಡಲಾಗಿದೆ ತೆರವು ಮಾಡಲಾಗಿದ್ದ ಭಗವಾ ಧ್ವಜಾರೋಹಣಕ್ಕೆ ಮುಂದಾದ ಗ್ರಾಮಸ್ಥರು ಕಳೆದ ವಾರವಷ್ಟೇ ಏಕಾಏಕಿ ತೆರವಾಗಿದ್ದ ಮಸೀದಿ ಎದುರು ಅಳವಡಿಸಿದ್ದ ಇಸ್ಲಾಂ ಧ್ವಜವನ್ನ ಹಿಂದೂ ಯುವಕರೇ ಇಸ್ಲಾಂ ಧ್ವಜ ತೆರವು ಮಾಡಿದ್ದಾರೆಂದು ಶಂಕೆ ಪೊಲೀಸರು ವ್ಯಕ್ತಪಡಿಸಿದ್ದರು ಈ ಕಾರಣಕ್ಕೆ ಗ್ರಾಮದಲ್ಲಿನ ಎಲ್ಲ ಇಸ್ಲಾಂ ಹಾಗೂ ಭಗವಾ ಧ್ವಜ ತೆರವು ಪೊಲೀಸರು ಮಾಡಿದ್ದರು ಆದರೆ ಟಿಪ್ಪರ್ ತಾಗಿ ಇಸ್ಲಾಂ ಧ್ವಜ ತೆರವಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಹೀಗಾಗಿ ತೆರವು ಮಾಡಲಾಗಿರುವ ಭಗವಾ ಧ್ವಜ ಅಳವಡಿಕೆಗೆ ಇದೀಗ ಗ್ರಾಮಸ್ಥರ ಹೋರಾಟಮಾಡಲಾರಂಭಿಸಿದ್ದಾರೆ ಗ್ರಾಮಸ್ಥರು ಗ್ರಾಮದ ಬಸ್ ನಿಲ್ದಾಣ ಎದುರಿನಿಂದ ಹನುಮ ಮಂದಿರವರೆಗೆ ಪಾದಯಾತ್ರೆ ಮಾಡಿ ಬಳಿಕ ಭಗವಾ ಧ್ವಜಾರೋಹಣ ಗ್ರಾಮಸ್ಥರು ನೆರವೇರಿಸಲಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ ಭಗವಾ ಧ್ವಜ ಮರಳಿ ಅಳವಡಿಕೆಗೆ ಅವಕಾಶ ನೀಡುವಂತೆ ಸ್ಥಳೀಯ ‌ನಿವಾಸಿಗಳ ಮನವಿ ಮಾಡಿದ್ದಾರೆ .

ಧ್ವಜಸ್ತಂಭ ಇರುವ ಸಂಬಣ್ಣವರ ಓಣಿಗೆ ಬೆಳಗಾವಿ ಎಸ್‌ಪಿ ಡಾ. ಭೀಮಾಶಂಕರ ಗುಳೇದ್ ಭೇಟಿ ನೀಡಿ ಮಾಧ್ಯಮದ ಜೊತೆ ಮಾತನಾಡುತ್ತಾ ಸ್ಥಳೀಯರ ಜೊತೆಗೆ ಮಾತುಕತೆ ನಡೆಸಿದ್ದೇವೆ ಯಾರೂ ಉದ್ವೇಗಕ್ಕೆ ಒಳಗಾಗಬಾರದು, ಶಾಂತತೆ ಕಾಪಾಡುವಂತೆ ನಮ್ಮ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ ಭಗವಾ ಧ್ವಜ ಅಳವಡಿಸಬೇಕೆಂಬ ಗ್ರಾಮಸ್ಥರ ಭಾವನೆಗೆ‌ ನಾವು ಬೆಲೆ ಕೊಡ್ತಿವಿ ಆದರೆ ಸಾರ್ವಜನಿಕ ಪ್ರದೇಶದಲ್ಲಿ ಯಾವುದೇ ಕಮ್ಯೂನಿಟಿ ಧ್ವಜ ಇರಬಾರದೆಂಬ ನಿಮಯವಿದೆ ಸುಪ್ರೀಂ ಕೋರ್ಟ್ ಆದೇಶ ಇರುವ ಕಾರಣಕ್ಕೆ ನಾವು ಅದನ್ನು ಪಾಲಿಸುತ್ತೇವೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಧ್ವಜ ಅಳವಡಿಕೆಗೆ ಅವಕಾಶ ಕೊಡುವುದಿಲ್ಲ ಸರ್ಕಾರದ ತಿರ್ಮಾನದಂತೆ ನಾವು ನಡೆಯುತ್ತೇವೆಗ್ರಾಮದ ಯುವಕರು ಧ್ವಜ ಅಳವಡಿಕೆಗೆ ಅನುಮತಿ‌ ಕೇಳಿದ್ದಾರೆ ಇಷ್ಟೆಲ್ಲ ಸಮಸ್ಯೆಗೆ ಸಾಮಾಜಿಕ ಜಾಲತಾಣಗಳು ಕಾರಣ ಎಂಕೆ ಹುಬ್ಬಳ್ಳಿ ಪಟ್ಟಣದಲ್ಲಿ ಎಲ್ಲ ಧರ್ಮದ ಜನರು ನೆಲೆಸಿದ್ದಾರೆಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟ ಪೊಸ್ಟ್‌ನಿಂದ ಈ ಅವಾಂತರ ಸೃಷ್ಟಿ ಆಗಿದೆ ಯುವ ಸಮೂಹದಲ್ಲಿ ಜವಾಬ್ದಾರಿ ಇಲ್ಲದಿರುವುದೇ ಇಂಥ ಘಟನೆಗೆ ಕಾರಣವಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ .

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರವಿ ಬಾಗಲಕೋಟೆ ಮಾತನಾಡಿ ಧ್ವಜ ಅಳವಡಿಕೆಗೆ ಅವಕಾಶ ನೀಡಬೇಕೋ? ಬೇಡವೋ? ಮೇಲಾಧಿಕಾರಿಗಳ ಗಮನಕ್ಕೆ ತಂದು ಅರ್ಧಗಂಟೆಯಲ್ಲಿ ನಿಲುವು ಸ್ಪಷ್ಟಪಡಿಸುತ್ತೇವೆ ಯಾರೂ ಉದ್ವೇಗಕ್ಕೆ ಒಳಗಾಗಬಾರದು, ಶಾಂತತೆ ಕಾಪಾಡುವಂತೆ ಗ್ರಾಮಸ್ಥರಲ್ಲಿ ಕೇಳಿಕೊಳ್ಳುತ್ತೇವೆ ಧ್ವಜ ಅಳವಡಿಸಲು ಅನುಮತಿ ನೀಡುವಂತೆ ಸ್ಥಳೀಯ ‌ನಿವಾಸಿಗಳು ಮನವಿ‌ ಮಾಡಿದ್ದಾರೆ ಆದರೆ ಸಾರ್ವಜನಿಕ ಸ್ಥಳದಲ್ಲಿ ಈ ಧ್ವಜಸ್ತಂಭ ಇರೊದು‌‌ ಗೊತ್ತಾಗಿದೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು .

ಎಂಕೆ ಹುಬ್ಬಳ್ಳಿಯಲ್ಲಿ ಪೊಲೀಸರಿಂದಲೇ ಭಗವಾ ಧ್ವಜ ತೆರವು ಪ್ರಕರಣಕ್ಕೆಸಂಬಂಧಿಸಿದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನೂರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ

Tags: