ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ರಾಜಕೀಯ ರಣತಂತ್ರವನ್ನು ಹೆಣೆಯಲೂ ಮೈತ್ರಿಯಾಗಿದೆ. ಶತಾಯಗತಾಯ ರಾಜ್ಯದಲ್ಲಿ ಈಗಿರುವ ಸ್ಥಾನಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ತಂತ್ರಗಾರಿಕೆಯನ್ನ ನಡೆಸಿದ್ದು, ಬಹುತೇಕ ಕ್ಷೇತ್ರ ಹಂಚಿಕೆ ಅಂತಿಮವಾಗಿದೆ.
ಹೌದು, ಕೇಂದ್ರ ಸಚಿವ ಅಮಿತ್ ಶಾ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮೈತ್ರಿ ಸೂತ್ರವನ್ನು ಹೆಣೆದಿದ್ದಾರೆ. ರಾಜ್ಯದಲ್ಲಿ ಒಟ್ಟು 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ನಾಲ್ಕು ಕ್ಷೇತ್ರಗಳು ಜೆಡಿಎಸ್ ಗೆ ಸಿಗಲಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಕ್ಷೇತ್ರ ಹಂಚಿಕೆ ಕುರಿತು ಎರಡು ಪಕ್ಷಗಳ ನಡುವೆ ನಡೆಯುತ್ತಿದ್ದ ಮಾತುಕತೆ ಬಹುತೇಕ ಅಂತಿಮಗೊಂಡಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಎಂದು ಹೇಳಲಾಗುತ್ತಿದೆ.
ಬಿಜೆಪಿ ಹೈಕಮಾಂಡ್ ಬಳಿ ಜೆಡಿಎಸ್ ನಾಯಕರು ಆರು ಲೋಕಸಭಾ ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿತ್ತು. ಮಂಡ್ಯ, ಹಾಸನ, ಚಿಕ್ಕಬಳ್ಲಾಪುರ, ಕೋಲಾರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜೆಡಿಎಸ್ ಪಟ್ಟು ಹಿಡಿದಿತ್ತು. ಆದರೆ, ಈ ಬಗ್ಗೆ ಬಿಜೆಪಿ ಹೈಕಮಾಂಡ್ ಆರು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳನ್ನ ಬಿಟ್ಟುಕೊಡಲು ನಿರ್ಧರಿಸಿದೆ ಎನ್ನಲಾಗಿದೆ. ಹಾಗಾದರೆ ಯಾವ ಕ್ಷೇತ್ರಗಳು ಬಿಜೆಪಿ, ಯಾವ ಕ್ಷೇತ್ರಗಳು ಜೆಡಿಎಸ್ ಗೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ
1. ಚಿಕ್ಕಬಳ್ಳಾಪುರ: ಡಾ ಸುಧಾಕರ್
2. ಬೆಳಗಾವಿ: ಶ್ರದ್ಧಾ ಶೆಟ್ಟರ್
3. ಕಲಬುರ್ಗಿ: ಉಮೇಶ ಜಾಧವ್
4. ಬೀದರ್: ಸಲಗರ ಶರಣು
5. ರಾಯಚೂರು: ಕೆ.ಎಸ್.ಎನ್.ಶಿವನಗೌಡ ನಾಯಕ್
6. ಬಳ್ಳಾರಿ: ಶ್ರೀರಾಮಲು
7. ಹಾವೇರಿ: ಬಿ ಸಿ ಪಾಟೀಲ್ ಕೌರವ
8. ಉತ್ತರ ಕನ್ನಡ: ವಿಶ್ವೇಶ್ವರ ಹೆಗಡೆ ಕಾಗೇರಿ
9. ಮೈಸೂರು-ಕೊಡಗು : ಪ್ರತಾಪ್ ಸಿಂಹ
10. ಮಂಡ್ಯ : ನಿಖಿಲ್ ಕುಮಾರಸ್ವಾಮಿ
11. ಹಾಸನ : ಪ್ರಜ್ವಲ್ ರೇವಣ್ಣ
12. ಬೆಂಗಳೂರು ಗ್ರಾಮಾಂತರ: ಹೆಚ್ ಡಿ ಕುಮಾರಸ್ವಾಮಿ
13. ಬೆಂಗಳೂರು ಉತ್ತರ: ಸಿ.ಟಿ.ರವಿ
14. ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ
15. ಬೆಂಗಳೂರು ಸೆಂಟ್ರಲ್ : ಪಿಸಿ ಮೋಹನ್
16. ತುಮಕೂರು: ವಿ ಸೋಮಣ್ಣ
17. ಕೋಲಾರ: ಮುನಿಸ್ವಾಮಿ
18. ಕೊಪ್ಪಳ : ಕರಡಿ ಸಂಗಣ್ಣ
19. ಬಾಗಲಕೋಟ: ಪಿ.ಸಿ.ಗದ್ದಿಗೌಡರ್
20. ಚಿಕ್ಕೋಡಿ: ರಮೇಶ ಕತ್ತಿ
21. ಉಡುಪಿ-ಚಿಕ್ಕಮಗಳೂರು : ಶೋಭಾ ಕರಂದ್ಲಾಜೆ
22. ದಕ್ಷಿಣ ಕನ್ನಡ: ಕ್ಯಾಪ್ಟನ್ ಬ್ರಿಜೇಶ್
23. ಶಿವಮೊಗ್ಗ: ರಾಘವೇಂದ್ರ ಯಡಿಯೂರಪ್ಪ
24. ಚಿತ್ರದುರ್ಗ: ಮಾದಾರ ಚೆನ್ನಯ್ಯ ಸ್ವಾಮಿ
25. ದಾವಣಗೆರೆ: ಎಂ.ಪಿ.ರೇಣುಕಾಚಾರ್ಯ
26. ಹುಬ್ಬಳ್ಳಿ ಧಾರವಾಡ: ಜೋಶಿ ಪ್ರಹ್ಲಾದ್
27. ಚಾಮರಾಜನಗರ: ಡಾ. ಮೋಹನ್ (ಶ್ರೀನಿವಾಸ್ ಪ್ರಸಾದ್ ಅವರ ಅಳಿಯ)
28. ವಿಜಯಪುರ : ಗೋವಿಂದ ಕಾರಜೋಳ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಟಿಕೆಟ್ ಫೈಟ್ ತೀವ್ರಗೊಂಡಿದೆ. ಹಲವು ಆಕಾಂಕ್ಷಿಗಳು ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ವರ್ಸಸ್ ಬಿಜೆಪಿ ಎಂಬಂತಾಗಿದೆ ಪರಿಸ್ಥಿತಿ. ಟಿಕೆಟ್ ಪಡೆದುಕೊಳ್ಳಲು ಕೆಲವು ಆಕಾಂಕ್ಷಿಗಳು ಹೈಕಮಾಂಡ್ ಮೊರೆ ಹೋಗಿದ್ದಾರೆ.