Uncategorized

ದ್ವೀತಿಯ ಪಿ ಯು ಸಿ ವಿದ್ಯಾರ್ಥಿಗಳ ಗಮನ ಅಭ್ಯಾಸದ ಮೇಲೆ ಇರಲಿ – ಡಿ ಡಿ ಪಿ ಆಯ್ ಭಂಡಾರಿ

Share

ಪಿ ಯು ಸಿ ದ್ವೀತಿಯ ವರ್ಷದ ವಿದ್ಯಾರ್ಥಿಗಳ ಗಮನ ಅಭ್ಯಾಸದ ಮೇಲೆ ಇರಲಿ ಎಂದು ಚಿಕ್ಕೋಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೆಶಕ ಪಿ ಆಯ್ ಭಂಡಾರಿ ಹೇಳಿದರು.

ಹುಕ್ಕೇರಿ ನಗರದ ಟೀಪ್ಪು ಸುಲ್ತಾನ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಪಿ ಯು ಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಕಾರ್ಯಾಗಾರ ವನ್ನು ಜಿಲ್ಲಾ ಮುಸ್ಲಿಂ ಕಲ್ಯಾಣ ಹಾಗೂ ಶಿಕ್ಷಣ ಸಂಸ್ಥೆ ಅದ್ಯಕ್ಷ ಇಕ್ಬಾಲ್ ಪೀರಜಾದೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡುದರು.
ಮಹಾವಿದ್ಯಾಲಯ ಪ್ರಾಚಾರ್ಯ ರಾಜು ಇಂಗೋಲಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಚಿಕ್ಕೋಡಿ ಶಿಕ್ಷಣ ಇಲಾಖೆ ಉಪ ನಿರ್ದೆಶಕ ಪಿ ಆಯ್ ಭಂಡಾರಿ ಪಿ ಯು ಸಿ ವಿದ್ಯಾರ್ಥಿಗಳು ತಮ್ಮ ಗಮನವನ್ನು ಅಭ್ಯಾಸದ ಮೇಲೆ ಇಟ್ಟು ಗುರಿಯನ್ನು ಸಾಧಿಸಿ ಅರಿವಿನ ಮೂಲಕ ಜ್ಜಾನ ಸಂಪಾದಿಸಿ ಸಮಾಜದ ಏಳಿಗೆಗಾಗಿ ನಿಮ್ಮ ಪಾತ್ರ ಬಹು ಮುಖ್ಯವಾಗಿದೆ ಎಂದರು .

ನಂತರ ಸಂಸ್ಥೆ ವತಿಯಿಂದ ಗಣ್ಯರನ್ನು ಸತ್ಕರಿಸಿ ಅಭಿನಂದಿಸಲಾಯಿತು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಮುಸ್ಲಿಂ ಕಲ್ಯಾಣ ಮತ್ತು ಶಿಕ್ಷಣ ಸಂಸ್ಥೆ ಅದ್ಯಕ್ಷ ಇಕ್ಬಾಲ್ ಪೀರಜಾದೆ ಪದವಿ ಪೂರ್ವ ವಿದ್ಯಾರ್ಥಿಗಳು ಕಳೆದ 10 ತಿಂಗಳಿನಿಂದ ವಿದ್ಯಾಭಾಸ ಮಾಡಿದ ಫಲ ಪಡೆಯಲು ಇನ್ನೂ ಒಂದು ತಿಂಗಳು ಬಾಕಿ ಇದೆ ಕಾರಣ ವಿದ್ಯಾರ್ಥಿಗಳು ಮೋಬೈಲ ಬೀಟ್ಟು ಅಭ್ಯಾಸದ ಕಡೆ ಗಮನ ಹರಿಸಿ ತಮ್ಮ ಮುಂದಿನ ಉಜ್ವಲ ಭವಿಷ್ಯ ರೂಪಿಸಿಕೊಂಡು ಉನ್ನತ ಮಟ್ಟದ ಅಧಿಕಾರ ಪಡೆದು ಕಲಿತ ಶಾಲೆಗೆ ಮತ್ತು ಪಾಲಕರಿಗೆ ಕಿರ್ತಿ ತರುವಂತಾಗಬೇಕು ಎಂದರು.

ಗಣ್ಯರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಪಾರಿತೋಷಕ ನೀಡಿ ಗೌರವಿಸಿದರು.

ವೇದಿಕೆ ಮೇಲೆ ಸಂಸ್ಥೆಯ ಕಾರ್ಯದರ್ಶಿ ನ್ಯಾಯವಾದಿ ಶಾಹಿದರಜಾ ಪೀರಜಾದೆ, ಪ್ರಾಚಾರ್ಯರಾದ ರಾಜು ಇಂಗೋಳಿ, ಎಮ್ ಕೆ ಮೌಲ್ವಿ ಮತ್ತು ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಾಜು ಬಾಗಲಕೋಟಿ
ಇನ್ ನ್ಯೂಸ್ ಹುಕ್ಕೇರಿ.

Tags: