Uncategorized

ಬೆಳಗಾವಿ ಮಹಾನಗರ ಪಾಲಿಕೆಗೆ ನೀರಿನ ಟ್ಯಾಂಕರ ,ಕಸ ವಿಲೇವಾರಿ ವಾಹನ ಕೊಡುಗೆಯಾಗಿ ನೀಡಿದ ಸತೀಶ ಜಾರಕಿಹೊಳಿ ಪೌಂಡೇಶನ್

Share

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಪೌಂಡೇಶನ್ ವತಿಯಿಂದ ಮಹಾನಗರ ಪಾಲಿಕೆಗೆ ನೀರಿನ ಟ್ಯಾಂಕರ ,ಕಸ ವಿಲೇವಾರಿ ವಾಹನ ಕೊಡುಗೆಯಾಗಿ ನೀಡಲಾಗಿದೆ ಎಂದು ಕಾಂಗ್ರೆಸ ಯುವ ಮುಖಂಡ ರಾಹುಲ ಜಾರಕಿಹೊಳಿ ಹೇಳಿದರು.

ವೈಸ್ ಓವರ್
ಬೆಳಗಾವಿ ನಗರದಲ್ಲಿ ಸಭೆ ಸಮಾರಂಭ ,ಮದುವೆ ಕಾರ್ಯಕ್ರಮಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಗು ನಗರದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಸತೀಶ ಜಾರಕಿಹೊಳಿ ಪೌಂಡೇಶನ್ ವತಿಯಿಂದ ಬೆಳಗಾವಿ ಮಹಾನಗರ ಪಾಲಿಕೆಗೆ ೨ ಕಸ ವಿಲೇವಾರಿ ವಾಹನ ಹಾಗು ೧ ನೀರಿನ ಟ್ಯಾಂಕರ್ ಅನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಸುಪುತ್ರ ಕಾಂಗ್ರೆಸ ಯುವ ಮುಖಂಡ ರಾಹುಲ ಜಾರಕಿಹೊಳಿ ವಿತರಿಸಿದರು ಈ ಶುಭ ಸಂದರ್ಭದಲ್ಲಿ ಶಾಸಕ ರಾಜು ಶೇಠ್ ಹಾಗು ರಾಹುಲ ಜಾರಕಿಹೊಳಿ ಅವರು ನೀರನ ಟ್ಯಾಂಕ್ ,ಕಸ ವಿಲೇವಾರಿ ವಾಹನಕ್ಕೆ ಪೂಜೆ ಸಲ್ಲಿಸಿ ಕ್ಷೇತ್ರದ ಜನತೆಗೆ ವಾಹನಗಳು ಅನುಕೂಲವಾಗಲಿ ಎಂದು ಶುಭ ಹಾರೈಸಿದರು . ಪ್ಲೊ

ಈ ಸಂದರ್ಭದಲ್ಲಿ ಕಾಂಗ್ರೆಸ ಯುವ ಮುಖಂಡ ರಾಹುಲ ಜಾರಕಿಹೊಳಿ ಮಾತನಾಡಿ ಸಚಿವ ಸತೀಶ ಜಾರಕಿಹೊಳಿ ಅವರ ಪೌಂಡೇಶನ್ ವತಿಯಿಂದ ಗೋಕಾಕ ಹಾಗು ಯಮಕನಮರಡಿ ಮತಕ್ಷೇತ್ರದಲ್ಲಿ ಎಲ್ಲಾ ಜಿಲ್ಲಾ ಪಂಚಾಯಿತಿಗಳಿಗೆ ಕಸ ವಿಲೇವಾರಿ ವಾಹನ ಹಾಗು ನೀರಿನ ಟ್ಯಾಂಕರ ನೀಡಿದ್ದೇವೆ ಯಾವ ಭಾಗದಲ್ಲಿ ನೀರಿನ ಬೇಡಿಕೆ ಇದೆ ಅಲ್ಲಿ ಸತೀಶ ಜಾರಕಿಹೊಳಿ ಪೌಂಡೇಶನ್ ಸಹಾಯ ಹಸ್ತ ಚಾಚುತ್ತಿದೆ ಸಚಿವ ಸತೀಶ ಜಾರಕಿಹೊಳಿ ಅವರು ನಿರಂತರವಾಗಿ ಸಮಾಜಕ್ಕೆ ಕೊಡುಗೆ ನೀಡುತ್ತಾ ಜನಪರ ಕಾರ್ಯ ಮಾಡುತ್ತಿದ್ದಾರೆ ಇವತ್ತು ಬೆಳಗಾವಿ ಮಹಾನಗರ ಪಾಲಿಕೆಗೆ ೨ ಕಸ ವಿಲೇವಾರಿ ವಾಹನ ಹಾಗು ೧ ನೀರಿನ ಟ್ಯಾಂಕರ್ ಅನ್ನು ನೀಡಲಾಗಿದೆ ಬೆಳಗಾವಿ ನಗರದಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹಾಗು ಸಭೆ ಸಮಾರಂಭ ,ಮದುವೆ ಕಾರ್ಯಕ್ರಮಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕಾರ್ಯ ಮಾಡಲಾಗಿದೆ ಎಂದರು . ಬೈಟ್

ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ರಾಜು ಶೇಠ್ ಮಾತನಾಡಿ ನಮ್ಮ ಬೆಳಗಾವಿಯಲ್ಲಿ ನೀರಿನ ಸಮಸ್ಯೆ ಹಾಗು ಸ್ವಚ್ಛತೆ ಸಮಸ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜನಪ್ರಿಯ ಸಚಿವರಾದ ಸತೀಶ ಜಾರಕಿಹೊಳಿ ಅವರು ಕಸ ವಿಲೇವಾರಿ ವಾಹನ ಹಾಗು ೧ ನೀರಿನ ಟ್ಯಾಂಕರ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ ಇದರಿಂದ ನಮ್ಮ ಜನತೆಗೆ ತುಂಬಾ ಅನುಕೂಲ ವಾಗುತ್ತದೆ ನಮ್ಮ ಬೆಳಗಾವಿ ಜನತೆಯ ಪರವಾಗಿ ಸತೀಶ ಜಾರಕಿಹೊಳಿ ಹಾಗು ರಾಹುಲ ಜಾರಕಿಹೊಳಿ ಅವರಿಗೆ ಅಂಭಿನಂದನೆ ಸಲ್ಲಿಸುತ್ತೇವೆ ಎಂದರು . ಬೈಟ್

ಈ ಸಂದರ್ಭದಲ್ಲಿ ಪಾಲಿಕೆಯ ನೂತನ ಆಯುಕ್ತೆ ರಾಜಶ್ರೀ ಜೈನಾಪುರೆ ,ನಗರ ಸೇವಕ ಅಜಿಂ ಪಟವೇಗಾರ್ ,ರವಿ ಸಾಳುಂಕೆ ,ಇಮ್ರಾನ ಪತ್ತೆಕಾನ್ ,ರಿಯಾಜ್ ಕಿಲ್ಲೇದಾರ್ ,ಪ್ರದೀಪ ಎಂ ಜೆ ,ಆಯಿಶಾ ಸನದಿ ,ಪ್ರಭಾವತಿ ಮಾಸ್ತಮರಡಿ ,ಮಲಗೌಡಾ ಪಾಟೀಲ ಸೇರಿದಂತೆ ಕಾಂಗ್ರೆಸ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು

Tags: