Uncategorized

ಯಾವ ವ್ಯಕ್ತಿ ಪ್ರಾಮಾಣಿಕನಿರುತ್ತಾನೋ ಆ ವ್ಯಕ್ತಿ ನೇರ ನುಡಿ ಹೊಂದಿರುತ್ತಾನೆ -ಅಲ್ಲಮಪ್ರಭು ಸ್ವಾಮೀಜಿ

Share

“ಒಂದು ದೇಶದ ಜನರ ನಿತ್ಯದ ಬದುಕಿಗೆ ಮಿಡಿಯುತ್ತ ಸಾಮಾಜಿಕ ಸಾಮರಸ್ಯ ತರಬಲ್ಲ ಶಕ್ತಿ ಸಾಹಿತ್ಯಕ್ಕಿದೆ. ಹೀಗಾಗಿ ಮುಂದಿನ ಪೀಳಿಗೆಯನ್ನು ಸಾಹಿತ್ಯದತ್ತ ಸೆಳೆಯುವ ಕಾರ್ಯವನ್ನು ಸಾಂಸ್ಕೃತಿಕ ಸಂಘಗಳು ಮಾಡಬೇಕಿದೆ. ಆ ನಿಟ್ಟಿನಲ್ಲಿ ಬಿ. ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಬೆಳಗಾವಿ ಪರಿಸರದಲ್ಲಿ ಉತ್ತಮ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ” ಎಂದು ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು

ಬೆಳಗಾವಿ ಚೆನ್ನಮ್ಮ ವೃತ್ತ ಸಾಹಿತ್ಯ ಭವನದಲ್ಲಿ ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾಗನೂರ ರುದ್ರಾಕ್ಷಿಮಠದ ಪೂಜ್ಯ ಶ್ರೀ ಡಾಕ್ಟರ್ ಅಲ್ಲಮಪ್ರಭು ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು ಧಾರವಾಡದ ಶಿಕ್ಷಣ ತಜ್ಞರಾದ ಶಿವಶಂಕರ ಹಿರೇಮಠ ಪ್ರಶಸ್ತಿ ಪ್ರದಾನ ಮಾಡಿದರು, ಮುಖ್ಯ ಅತಿಥಿಗಳಾಗಿ ಚಿಕ್ಕೋಡಿ ವೈದ್ಯ ಸಾಹಿತಿಗಳು ದಯಾನಂದ ನೂಲಿ ಆಗಮಿಸಿದ್ದರು ಅಧ್ಯಕ್ಷತೆಯನ್ನ ರಾಮಕೃಷ್ಣ ಮರಾಠ ವಹಿಸಿದ್ದರು .

ಈ ಸಂದರ್ಭದಲ್ಲಿ ನಾಗನೂರ ರುದ್ರಾಕ್ಷಿಮಠದ ಪೂಜ್ಯ ಶ್ರೀ ಡಾಕ್ಟರ್ ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡುತ್ತಾ ಗಡಿಭಾಗದಲ್ಲಿ ಸೇವೆ ಮಾಡುತ್ತಿರುವ ಹಲವಾರು ಮಹನೀಯರಿಗೆ ಇಲ್ಲಿಯ ವರೆಗೆ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ ಇವತ್ತು ಅಶೋಕ ಚಂದರಗಿ ಅವರು ಕನ್ನಡ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಬೆಳಗಾವಿ ಅಂದತಕ್ಷಣ ಹೋರಾಟ ಗಡಿ ವಿಷಯ ನಮ್ಮ ಕಣ್ಣಮುಂದೆ ಬರುತ್ತವೆ ಅಶೋಕ ಚಂದರಗಿ ಅವರು ಬೆಳಗಾವಿ ವಿಷಯಗಳು ಬಂದಾಗ ಅನ್ಯಾಯ ಮತ್ತು ತಾರತಮ್ಯ ಇಂತಹ ಸಂದರ್ಭಗಳಲ್ಲಿ ಈ ನೆಲದ ಬಗ್ಗೆ ಅಪಾರ ಪ್ರೀತಿಯನ್ನ ಇಟ್ಟುಕೊಂಡು ಹಲವಾರು ವಿಷಯಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಸುಮಾರು ೪೦ ವರ್ಷಗಳಿಂದ ಬೆಳಗಾವಿ ಜೊತೆ ಅನ್ಯೋನ್ಯ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಅವರ ಕನ್ನಡ ಪ್ರೀತಿ ನೇರ ನುಡಿ ಹೊಂದಿದ್ದಾರೆ ಸಂದರ್ಭ ಬಂದಾಗ ಸರ್ಕಾರಕ್ಕೆ ಚಾಟಿಯನ್ನ ಬಿಸುತ್ತಾರೆ .
ಯಾವ ವ್ಯಕ್ತಿ ಪ್ರಾಮಾಣಿಕನಿರುತ್ತಾನೋ ಆ ವ್ಯಕ್ತಿ ನೇರ ನುಡಿ ಹೊಂದಿರುತ್ತಾನೆ ಮೊದಲಿನ ಹಿರಿಯರು ಅಧಿಕಾರವನ್ನ ಸೇವೆ ಎಂದು ತಿಳಿದು ಕೆಲಸ ಮಾಡುತ್ತಿದ್ದರು ೩೦ ವರ್ಷದ ಹಿಂದೆ ಇರುವ ರಾಜಕಾರಣಿಗಳು ಯಾವುದೇ ಸರ್ಕಾರದ ಅಧಿಕಾರವನ್ನ ಸೇವೆ ಎಂಬ ಭಾವದಿಂದ ಪ್ರಾಮಾಣಿಕತೆಯಿಂದ ಮಾಡುತ್ತಿದ್ದರು . ಇವತ್ತು ಇರುವ ರಾಜಕಾರಣಿಗಳು ಅಧಿಕಾರಕ್ಕಾಗಿ ಸೇವೆಯನ್ನ ಮಾಡುತ್ತಿರುವುದು ದುರ್ದೈವ ಸಂಗತಿ ಸರಕಾರದ ಜನಪ್ರತಿನಿದಿಗಳು ೫ ವರ್ಷಕ್ಕೆ ಬರುವ ಚುನಾವಣೆಯಲ್ಲಿ ಮಾತ್ರ ಎಲ್ಲರು ನಮ್ಮವರು ಎಂದು ಹೇಳುತ್ತಾರೆ ಚುನಾವಣೆ ಆದಮೇಲೆ ಅವರವರ ಮಂದಿ ಅಷ್ಟೇ ಅವರವರಾಗಿರುತ್ತಾರೆ ಇಂತಹ ಪರಿಸ್ಥಿತಿಯಲ್ಲಿ ಹಿರಿಯರನ್ನ ನಾವು ನೆನಸಿಕೊಳ್ಳಬೇಕು ಅಶೋಕ ಚಂದರಗಿ ಅವರ ಸಾಮಾಜಿಕ ಕಾರ್ಯ ಮೆಚ್ಚುವಂತಹದ್ದು ಎಂದರು .

2023 ನೇ ಸಾಲಿನ ‘ಕನ್ನಡ ಗಡಿತಿಲಕ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬೆಳಗಾವಿಯ ಹಿರಿಯ ಕನ್ನಡ ಹೋರಾಟಗಾರರಾದ ಅಶೋಕ ಚಂದರಾಗಿ ಅವರು, “ನಾಡು–ನುಡಿಯ ರಕ್ಷಣೆ ವಿಚಾರದಲ್ಲಿ ಸರ್ಕಾರವನ್ನು ಎಚ್ಚರಿಸುವ ಜವಾಬ್ದಾರಿ ಕೇವಲ ಕನ್ನಡ ಹೋರಾಟಗಾರರು ಮತ್ತು ಪತ್ರಕರ್ತರ ಕೆಲಸ ಮಾತ್ರವಲ್ಲ. ಸಾಹಿತಿಗಳ ಪಾತ್ರವೂ ಅಗತ್ಯವಾಗಿದೆ. ನಾಡು-ನುಡಿ-ನೆಲ-ಜಲಕ್ಕೆ ಧಕ್ಕೆ ಬಂದಾಗ ಬೆರಳೆಣಿಕೆಯ ಸಾಹಿತಿಗಳು ಮಾತ್ರ ಧ್ವನಿ ಎತ್ತುತ್ತಿರುವುದು ಖೇದಕರ ಸಂಗತಿಯಾಗಿದ್ದು, ತಮ್ಮ ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು’ ಎಂದರು ಬೆಳಗಾವಿಯಲ್ಲಿ 500 ಕೋಟಿ ವ್ಯಯಿಸಿ ಕಟ್ಟಿದ ಸುವರ್ಣ ವಿಧಾನಸೌಧಕ್ಕೆ ಗಡಿಗೆ ಸಂಬಂಧಿಸಿದ ಕಚೇರಿಗಳ ಸ್ಥಳಾಂತರಕ್ಕೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು. ‘ಪ್ರಶಸ್ತಿಗಳು ತಾವಾಗಿಯೇ ಸಾಧಕರನ್ನು ಹುಡುಕಿಕೊಂಡು ಬಂದಾಗ ಪ್ರಶಸ್ತಿಯ ಹಾಗೂ ಪಡೆದವರ ಮೌಲ್ಯ ಹೆಚ್ಚಾಗುತ್ತದೆ. ಆ ನಿಟ್ಟಿನಲ್ಲಿ ಪ್ರತಿಷ್ಟಾನ ನೀಡಿದ ಗೌರವಕ್ಕೆ ಅಭಿನಂದನೆಸಲ್ಲಿಸಿದರು”.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ದಯಾನಂದ ನೂಲಿ ಅವರು ಮಾತನಾಡಿ,” ‘ಬಿ.ಎ.ಸನದಿ ತಮ್ಮ ಕಾವ್ಯದುದ್ದಕ್ಕೂ ಮಾನವೀಯ ಪ್ರೀತಿ, ಜೀವನಮೌಲ್ಯ ಪ್ರತಿಷ್ಠಾಪಿಸಿದ್ದಾರೆ. ಗಡಿನಾಡಿನಲ್ಲಿ ಉತ್ಕೃಷ್ಟ ದರ್ಜೆಯ ಸಾಹಿತ್ಯ ರಚಿಸಿದ್ದಾರೆ. ಅವರ ಹೆಸರಿನಲ್ಲಿ ಪ್ರತಿಷ್ಠಾನ ಅರ್ಥಪೂರ್ಣವಾಗಿ ಕಾರ್ಯ ಮಾಡುತ್ತಿದೆ’ ಎಂದು ಶ್ಲಾಘಿಸಿದರು.

ಎ ಸನದಿ ಮಾತನಾಡುತ್ತಾ ಹಲವು ಸಾಹಿತಿಗಳು ನಡೆದ ಬಂದ ದಾರಿಯಲ್ಲಿ ಹೋರಾಟಗಾರ ಅಶೋಕ ಚಂದರಗಿ ಅವರು ನಡೆದುಬಂದು ಕನ್ನಡದ ಕಂಪನ್ನು ಸಾರಿದ್ದಾರೆ ಬಿ ಎ ಸನದಿ ಸಾಂಸ್ಕ್ರತಿಕ ಪ್ರತಿಸ್ಥಾನ ಅನೇಕ ವರ್ಷಗಳಿಂದ ಸಾಮಾಜಿಕ ಕಾರ್ಯ ಮಾಡುವವರಿಗೆ ಅಭಿನಂದಿಸುವ ಕೆಲಸ ಮಾಡುತ್ತಿದೆ ನಮ್ಮ ಹಿರಿಯರು ಕನ್ನಡ ನಾಡು ನುಡಿ ಭಾಷೆ ಸಂಸ್ಕೃತಿ ಸಲುವಾಗಿ ಸೇವೆ ಮಾಡಿದವರನ್ನ ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಅವರಿಗೆ ಹುರಿದುಂಬಿಸುವ ಕೆಲಸ ಹಮ್ಮಿಕೊಂಡಿದ್ದಾರೆ ಈ ವರ್ಷದಲ್ಲಿ ಅಶೋಕ ಚಂದರಗಿ ಅವರು ೪ ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಂಡಿದ್ದಾರೆ ಅದು ನಮಗೆಲ್ಲ ಹೆಮ್ಮೆ ಎಂದರು.

ಆಶಾ ಯಮಕನಮರಡಿ ಅವರು ಹಾಡಿದ ನಾಡಗಿತೆಯೊಂದಿಗೆ ಆರಂಭದಲ್ಲಿ ಇತ್ತೀಚಿಗೆ ನಿಧನರಾದ ಚಿಂಚಣಿ ಮಠದ ಅಲ್ಲಮಪ್ರಭು ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಪಿ.ಜಿ. ಕೆಂಪಣ್ಣವರ ಉಪಾಧ್ಯಕ್ಷರಾದ ಎ.ಎ. ಸನದಿ , ಕೋಶಾಧ್ಯಕ್ಷರಾದ ಬಸವರಾಜ ಗಾರ್ಗಿ , ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಬಾಗೇವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಉಪಾಧ್ಯಕ್ಷ ಎ.ಎ.ಸನದಿ ಸ್ವಾಗತಿಸಿದರು. ಸಿ. ಎಂ. ಬೂದಿಹಾಳ ನಿರೂಪಿಸಿದರು. ಅಕ್ಬರ ಸನದಿ ವಂದಿಸಿದರು.

 

 

Tags: