Uncategorized

ಪ್ರವಾಹದಲ್ಲಿ ಮನೆ ಬಿದ್ದು ವರ್ಷ ಗತಿಸಿದರೂ ಸಿಗದ ಮನೆಯ ಭಾಗ್ಯ ಆತ್ಮಹತ್ಯೆ ಎಚ್ಚರಿಕೆ ನೀಡಿದ ಮಹಿಳೆ

Share

ನಿಪ್ಪಾಣಿ ತಾಲೂಕಿನ ಕಸನಾಳ ಗ್ರಾಮದ ಕಮಲ ಭಗತ ಎಂಬುವರ ಮನೆ ಕಳೆದ ವರ್ಷ ಅತಿವೃಷ್ಟಿಯಿಂದ ಕುಸಿದು ಬಿದ್ದು, ಮನೆಯಲ್ಲಿನ ಎಮ್ಮೆ ಸಾವನಪ್ಪಿ ಒಂದು ವರ್ಷ ಗತಿಸಿದರೂ ಮನೆ ಭಾಗ್ಯಕ್ಕಾಗಿ ಕಾದು ಸುಸ್ತಾಗಿ ಇಂದು ಬಾಡಿಗೆ ಮನೆಯಲ್ಲಿ ವಾಸಿಸುವ ಬಂದೊದಗಿದೆ. ಇದು ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಒಂದು ವರ್ಷದಿಂದ ಸರಕಾರದ ಮನೆ ಮಂಜೂರಾಗಬಹುದು ಎಂಬ ಆಸೆಯಿಂದ ಕಮಲ ಅವರು ದಿನಗಳನ್ನು ದೂಡುತ್ತಿದ್ದಾರೆ, ಮನೆಯ ಮಂಜೂರಾತಿ ಏಳಂಬವಾಗುತ್ತಿರುವುದರಿಂದ ಬಾಡಿಗೆ ಮನೆ ಅನಿವಾರ್ಯವಾಗಿದೆ.
ಸರಕಾರದ ವತಿಯಿಂದ ಅತಿವೃಷ್ಟಿಯಿಂದ ಮನೆಯ ಕುಸಿದು ಬಿದ್ದವರಿಗೆ 50 ಸಾವಿರದಿಂದ 5 ಲಕ್ಷದ ವರಗೆ ಪರಿಹಾರ ಘೋಷಿಸಿತ್ತು. ಆದರೆ ಕಮಲ ಅವರಗೆ ಯಾವುದೇ ಪ್ರಯೋಜನವಾಗಿಲ್ಲ. ಮನೆಯ ಕುರಿತು ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಪಂಚಾಯತಿ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ನೊಂದ ಮಹಿಳೆ ಅಳಲು ತೋಡಿಕೊಂಡಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಬಂದೊದಗಿದೆ ಎಂದು ತಮ್ಮ ದುಃಖ ತೋಡಿಕೊಂಡಿದ್ದಾರೆ.

ಕಮಲ ವಾಸಿಸಲು ಸ್ವಂತ ಮನೆಯಿಲ್ಲದೆ ಕಂಗಾಲಾಗಿದ್ದಾರೆ. ಈ ಭಾಗದ ಜನಪ್ರತಿನಿಧಿಗಳು ಸಮಸ್ಯೆಯನ್ನು ಗಂಭಿರವಾಗಿ ಪರಿಗಣಿಸಿ ಆಶ್ರಯ ಮನೆ ಮಂಜೂರು ಮಾಡುವಂತೆ ಸಮಾಜಸೇವಕ ಚಂದ್ರಕಾಂತ ಹುಕ್ಕೇರಿ ಒತ್ತಾಯಿಸಿದ್ದಾರೆ.

ಸರಕಾರ ವಿವಿಧ ಭಾಗ್ಯಗಳನ್ನು ಜಾರಿಗೊಳಿಸಿ ಸಾರ್ವಜನಿಕರ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಿದೆ. ಕಸನಾಳ ಗ್ರಾಮದ ಬಡ ವಿಧವೆ ಮಹಿಳೆಗೆ ಜನಪ್ರತಿನಿಧಿಗಳು ಮನೆ ಭಾಗ್ಯ ಕಲ್ಪಿಸಿ ಕೊಡುವರೆ ಎಂಬುದನ್ನು ಕಾದು ನೋಡಬೇಕು.

ಡಿ.ಕೆ‌.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ

Tags:

A woman warned of suicide after her house fell in the flood but she could not find it after a year