Uncategorized

ರಾಷ್ಟ್ರೀಯ ಖೋಖೋ ಪಂದ್ಯಾವಳಿಗೆ ಆದಿತ್ಯ ಪಾಟೀಲ್ ಆಯ್ಕೆ

Share

ಬೆಳಗಾವಿಯ ಸಾಧನಾ ಕ್ರೀಡಾ ತಂಡದ ಆಟಗಾರ ಆದಿತ್ಯ ನಾರಾಯಣ ಪಾಟೀಲ ಅವರು ರಾಷ್ಟ್ರೀಯ ಖೋಖೋ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.

ಬೆಳಗಾವಿಯ ಹಿಂಡಲಗಾದ ಸಾಧನಾ ಕ್ರೀಡಾ ತಂಡದ ಆಟಗಾರ ಆದಿತ್ಯ ನಾರಾಯಣ ಪಾಟೀಲ ಅವರು 42ನೇ ರಾಷ್ಟ್ರೀಯ ಖೋಖೋ ಪಂದ್ಯಾವಳಿಗೆ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ. ಛತ್ತೀಸ್‌ಗಢದ ರಾಯ್‌ಪುರದಲ್ಲಿ ಡಿಸೆಂಬರ್ 26ರಿಂದ 30ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಆದಿತ್ಯ ಕರ್ನಾಟಕ ತಂಡದ ಪರ ಆಡಲಿದ್ದಾರೆ.

Tags: