Uncategorized

ಉಪ ಮುಖ್ಯಮಂತ್ರಿ ಆಗಮನಕ್ಕೆ ಸಕಲ ಸಿದ್ದತೆ – ಮಾಜಿ ಸಚಿವ ಎ ಬಿ ಪಾಟೀಲ

Share

ರಾಜ್ಯದ ಉಪ ಮುಖ್ಯಮಂತ್ರಿ ಹುದ್ದೆಗೆ ಏರಿದ ಬಳಿಕ ಇದೇ ಮೊಟ್ಟ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ ಅವರು ಅ. 18 ರಂದು ಹುಕ್ಕೇರಿ ಪಟ್ಟಣಕ್ಕೆ ಆಗಮಿಸಲಿದ್ದು ಅವರಿಗೆ ಭವ್ಯ ಸನ್ಮಾನ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಏರ್ಪಡಿಸಲಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರೂ ಆದ ಮಾಜಿ ಸಚಿವ ಎ.ಬಿ.ಪಾಟೀಲ ಹೇಳಿದರು.
ಹುಕ್ಕೇರಿ ನಗರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ ಅವರ ಭವ್ಯ ಸನ್ಮಾನ ಸಮಾರಂಭಕ್ಕೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಡಿಸಿಎಂ ಆದ ನಂತರ ಇದೇ ಪ್ರಪ್ರಥಮ ಬಾರಿಗೆ ಹುಕ್ಕೇರಿಗೆ ಅ.18 ರಂದು ಆಗಮಿಸುತ್ತಿದ್ದು ಅಂದು ಮಧ್ಯಾಹ್ನ 3 ಕ್ಕೆ ರವದಿ ಫಾರ್ಮಹೌಸ್‌ನಲ್ಲಿ ಸನ್ಮಾನ, ಕಾರ್ಯಕರ್ತರ ಸಭೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮತ್ತಿತರರು ಉಪಸ್ಥಿತರಿರುವರು. ಸಮಾವೇಶದಲ್ಲಿ ಸಹಸ್ರಾರು ಜನ ಸೇರುವ ನಿರೀಕ್ಷೆ ಇದೆ ಎಂದು ಅವರು ಮಾಹಿತಿ ನೀಡಿದರು.
ಡಿಸಿಎಂ ಡಿ.ಕೆ.ಶಿವಕುಮಾರ ಹುಕ್ಕೇರಿ ಭೇಟಿ ವೇಳೆ ತಾಲೂಕಿನ ಮಹತ್ತರ ಯೋಜನೆಗಳ ಕುರಿತು ವಿವರಿಸಲಾಗುವುದು. ನೀರಾವರಿ ವಲಯ, ಕೈಗಾರಿಕೆ ಪ್ರದೇಶ, ಔದ್ಯೋಗಿಕ ಕ್ಷೇತ್ರ, ಪ್ರವಾಸೋದ್ಯಮ ಸೇರಿದಂತೆ ತಾಲೂಕಿನ ಮಹತ್ವದ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು. ನಿರುದ್ಯೋಗ ನಿವಾರಣೆ, ಸೌರಶಕ್ತಿ ಅಳವಡಿಕೆ ಬಗ್ಗೆಯೂ ಡಿಸಿಎಂಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಅವರು ಹೇಳಿದರು.
ಮಾಜಿ ಸಚಿವ ಶಶಿಕಾಂತ ನಾಯಿಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ ರವದಿ, ಸಂತೋಷ ಮುಡಸಿ, ಮಲ್ಲಿಕಾರ್ಜುನ ರಾಶಿಂಗೆ, ಮುಖಂಡರಾದ ಕರುಣಾಕರ ಶೆಟ್ಟಿ, ಮೌನೇಶ ಪೋತದಾರ, ರೇಖಾ ಚಿಕ್ಕೋಡಿ, ದಿಲೀಪ ಹೊಸಮನಿ, ಶಾನೂರ್ ತಹಶೀಲ್ದಾರ, ಭೀಮಗೌಡ ಅಮ್ಮಣಗಿ, ಮಹಾಂತೇಶ ಗುಮಚಿ, ಶೀತಲ್ ಹಿರೇಮಠ, ಕೆ.ವೆಂಕಟೇಶ, ಕೆಂಪಣ್ಣಾ ಶಿರಹಟ್ಟಿ, ಲಕ್ಷ್ಮಣ ಹೂಲಿ, ಕಬೀರ ಮಲ್ಲಿಕ, ಸಲಿಂ ಕಳಾವಂತ ಮತ್ತಿತರರು ಉಪಸ್ಥಿತರಿದ್ದರು.

Tags: