Uncategorized

ಸುಫಾರಿ ನೀಡಿ ಹೆತ್ತ ಮಗನನ್ನ ಕೊಲೆ ಮಾಡಿಸಿದ್ದ ತಾಯಿ ಅಂದರ್

Share

ಹೆತ್ತ ಮಗನಿಗೆ ಸುಪಾರಿ ನೀಡಿ ಮಗನನ್ನೆ ಕೊಲೆ ಮಾಡಿಸಿರುವ ತಾಯಿ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ತಾಯಿ ಶ್ರೀದೇವಿ ಯಕ್ಕುಂಡಿ, ಪ್ರಕಾಶ ಗೊಲ್ಲರ್, ರಾಹುಲ್ ಗೊಲ್ಲರ್, ರಾಘವೇಂದ್ರ ಸಾಠೆ, ಸಂತೋಷ ಬಿದರಿ ಬಂಧಿತ ಆರೋಪಿಗಳು. ಇನ್ನು ಮಲ್ಲಿಕಾರ್ಜುನ ಯಕ್ಕುಂಡಿ ಮೃತಪಟ್ಟಿರುವ ದುರ್ದೈವಿ. ಇನ್ನು ದಿನನಿತ್ಯ ಕುಡಿದ ನಶೆಯಲ್ಲಿ ತಾಯಿ ಶ್ರೀದೇವಿಗೆ ಮಗ ಮಲ್ಲಿಕಾರ್ಜುನ ಕಿರುಕುಳ ನೀಡುತ್ತಿದ್ದನು. ಅದಕ್ಕಾಗಿ ಈ ವಿಷಯಕ್ಕೆ ಶ್ರೀದೇವಿ ಬೇಸತ್ತು ಮಗನ ಹತ್ಯೆಗೆ ಸುಪಾರಿ ನೀಡಿದ್ದಳು. ಇನ್ನು ಆರೋಪಿಗಳು ಮಲ್ಲಿಕಾರ್ಜುನನ್ನು ಹತ್ಯೆಗೈದು ವಿಜಯಪುರದ ಗಾಂಧಿನಗರ ಬಳಿಯ ಖಣಿಯಲ್ಲಿ ಎಸೆದು ಪರಾರಿಯಾಗಿದ್ದರು. ಈ ಕುರಿತು ವಿಜಯಪುರ ಎಪಿಎಂಸಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೆತ್ತ ಮಗನಿಗೆ ಸುಫಾರಿ ನೀಡಿ ಕೊಲೆ ಮಾಡಿಸಿದ್ದ ತಾಯಿ ಅಂದರ್

Tags:

Andar was the mother who had killed her son after offering Sufari