ಏಂಜೆಲ್ ಫೌಂಡೇಶನ್ ವತಿಯಿಂದ ಬೆಳಗಾವಿಯಲ್ಲಿ ಮಹಿಳೆಯರಿಗಾಗಿ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಆಕರ್ಷಕ ವೇಷಭೂಷಣ ತೊಟ್ಟ ಮಹಿಳೆಯರು ಕೇಸರಿ ಪೇಟಾ ದರಿಸುವ ಮೂಲಕ ಎಲ್ಲರನ್ನೂ ಆಕರ್ಷಿಸಿದರು.
ಬೆಳಗಾವಿಯ ಮಹಿಳಾ ಸಹೋದರಿಯರು ಆಕರ್ಷಕ ಪೇಟಾ, ಮೂಗುಬೊಟ್ಟು ,ನೌವಾರಿ ಸೀರೆಯನ್ನುಟ್ಟು , ಕೇಸರಿ ಬಾವುಟ ಅಬ್ಬರದ ಸ್ಟೈಲಿಶ್ ಬೈಕ್ ಗಳಲ್ಲಿ ರ್ಯಾಲಿ ನಡೆಸಿ ಎಲ್ಲರನ್ನೂ ಆಕರ್ಷಿಸಿದರು.
ಕ್ಯಾಂಪ್ ಪೊಲೀಸ್ ಠಾಣೆಯ ಪಿಎಸ್ ಐ ರುಕ್ಮಿಣಿ ಅವರು ಬೈಕ್ ರ್ಯಾಲಿಯನ್ನು ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿದರು.
ಈ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಶ್ರದ್ಧಾ ಚೌಗುಲೆ ಮಾತನಾಡಿ, ಕಳೆದ ಐದಾರು ವರ್ಷಗಳಿಂದ ಬುಲೆಟ್ ಓಡಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ಮಹಿಳೆಯರು ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಗೋವಾ ಮತ್ತು ದಾಂಡೇಲಿಗೆ ಬೈಕ್ ನಲ್ಲಿ ಹೋಗಿದ್ದೇವೆ ಇವತ್ತು ರ್ಯಾಲಿಯಲ್ಲಿ ಭಾಗಿಯಾಗಿದ್ದು ಖುಷಿಯ ವಿಚಾರ ಎಂದರು .
ರಾಮತೀರ್ಥನಗರದ ಕವಿತಾ ಅವರು ಮಾತನಾಡಿ ಕಳೆದ ಏಳು ವರ್ಷಗಳಿಂದ ಬೈಕ್ ಓಡಿಸುತ್ತಿದ್ದೇನೆ. ಇವತ್ತು ಏಂಜೆಲ್ ಫೌಂಡೇಶನ್ ದವರು ರ್ಯಾಲಿ ಹಮ್ಮಿಕೊಂಡಿದ್ದು ಎಲ್ಲಾ ಮಹಿಳೆಯರಿಗೆ ಅತೀವ ಖುಷಿಯಾಗಿದೆ ಈ ರ್ಯಾಲಿ ನೋಡಿದರೆ ಎಲ್ಲರಿಗೂ ಸ್ಪೂರ್ತಿಯಾಗುತ್ತದೆ ಎಂದರು .
ಬೈಕ್ ರ್ಯಾಲಿ ಆಯೋಜಕಿ ಹಾಗೂ ಏಂಜೆಲ್ ಫೌಂಡೇಶನ್ ನ ಸಂಚಾಲಕಿ ಮೀನಾತಾಯಿ ಬೆನಕೆ ಮಾತನಾಡಿ, ಇದು ಎರಡನೇ ವರ್ಷದ ಬೈಕ್ ರ್ಯಾಲಿ. ದೀಪಾವಳಿ ಸಂದರ್ಭದಲ್ಲಿ ಬೈಕ್ ರ್ಯಾಲಿ ಆಯೋಜಿಸುತ್ತೇವೆ. ಮಹಿಳೆಯರು ಮನೆಯಿಂದ ಹೊರಗೆ ಬಂದು ಸ್ವಾವಲಂಬಿಗಳಾಗಬೇಕು ಎಂಬುದು ಇದರ ಉದ್ದೇಶ. ಕಳೆದ ವರ್ಷಕ್ಕಿಂತ ಈ ವರ್ಷ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏಂಜೆಲ್ ಫೌಂಡೇಶನ್ ಮೂಲಕ ಇಂತಹ ಒಳ್ಳೆಯ ಕೆಲಸ ಮಾಡುತ್ತೇನೆ. ಈ ರ್ಯಾಲಿಯಲ್ಲಿ 80 ರಿಂದ 90 ಮಹಿಳೆಯರು ಭಾಗವಹಿಸಿದ್ದಾರೆ. ಎಂದರು .
ಮಹಿಳಾ ವಿದ್ಯಾಲಯದಿಂದ ಆರಂಭವಾದ ಬೈಕ್ ರ್ಯಾಲಿ ಚನ್ನಮ ವೃತ್ತ, ನಂತರ ಧರ್ಮವೀರ ಸಂಭಾಜಿ ವೃತ್ತ ಮೂಲಕ ಮಹಿಳಾ ವಿದ್ಯಾಲಯದವರೆಗೆ ಸಾಗಿತು.ಈ ರ್ಯಾಲಿಯಲ್ಲಿ ಅನೇಕ ಮಹಿಳೆಯರು ಸಂತಸದಿಂದ ಭಾಗಿಯಾಗಿದ್ದರು