Uncategorized

ಗೋಕಾಕ ನಗರದಲ್ಲಿ ಡ್ರಗ್ಸ್ ವಿರುದ್ದ ಜಾಗೃತಿ ಜಾಥಾ ಮತ್ತು ಹೆಲ್ಮೆಟ್ ಜಾಗೃತಿ ಜಾಥಾ

Share

ಗಡಿಯಲ್ಲಿ ದೇಶದ ಸೇವೆಗಾಗಿ,ಸರಕಾರಿ ಸೇವೆಗಾಗಿ ಮರಣ ತ್ಯಾಗ ಮಾಡಿದರೆ ನಮ್ಮಜೀವಕ್ಕೆ ಬೇಲೆ ಹೊರತು ವಿನಾಕಾರಣ ರಸ್ತೆ ಮೇಲೆ ಹೆಲ್ಮೇಟ್ ದರಿಸದೆ ಅಪಘಾತದಲ್ಲಿ ಸಾವನ್ನಪ್ಪಿದರೆ ಆ ಜೀವಕ್ಕೆ ಬೆಲೆ ಇಲ್ಲ ಎಂದು ಗೋಕಾಕ ನಗರದ ಕೋಳಿ ಕಾಟಾದಲ್ಲಿ ನಡೆದ ವ್ಯಸನ ಮುಕ್ತ ಸಮಾಜಕ್ಕಾಗಿ ಡ್ರಗ್ಸ್ ವಿರುದ್ದ ಜಾಗೃತಿ ಜಾಥಾ ಮತ್ತು ಹೆಲ್ಮೆಟ್ ಜಾಗೃತಿ ಜಾಥಾಗೆ ಬೆಳಗಾವಿ ಪೋಲೀಸ ವರಿಷ್ಟಾಧಿಕಾರಿ ಭೀಮಾಶಂಕರ ಗುಳೆದ ಇವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು

ಎರಡು ವರ್ಷ ಉಪಯೋಗಿಸುವ ಮೊಬೈಲಗೆ ಕವರ ಹಾಕುತ್ತಿರಿ,ನಿಮ್ಮ ಜೀವವಾಗಿರುವ ನಿಮ್ಮ ತಲೆಗೆ ಹೆಲ್ಮೇಟ್ ಹಾಕದೆ ಇರೊದು ವಿಪರ್ಯಾಸ ಮೊಬೈಲ ಕವರ ಹಳೆಯದಾದರೆ ಬದಲಾಯಿಸಬಹುದು ಆದರೆ ತಲೆಗೆ ಹಾನಿ ಉಂಟಾದಲ್ಲಿ ಬದಲಾಯಿಸಲಿಕ್ಕೆ ಸಾದ್ಯವಿಲ್ಲ, ನಮಗೆ ದಂಡ ವಿಧಿಸಲಿಕ್ಕೆ ಮನಸಿಲ್ಲ ಮತ್ತು ಆ ಹಣದಿಂದ ಹಾನಿಯಾದ ತಲೆಯನ್ನು ಬದಲಾಯಿಸಲಿಕ್ಕೆ ಆಗೊದಿಲ್ಲ ಆದರೆ ನಿಮ್ಮ ಜೀವ ರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ.ಅದಕ್ಕಾಗಿ ಎಲ್ಲರೂ ಐ,ಎಸ್,ಐ,ಮಾರ್ಕ್ ಹೊಂದಿದ ಹೆಲ್ಮೇಟ್ ಖರೀದಿ ದರೀಸಿ ಜೀವ ಉಳಿಸಿಕೊಳ್ಳಲು ಹೇಳಿದರು.

100 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಲ್ಮೆಟ್ ಧರಿಸಿ ಜಾಥಾ ರ್ಯಾಲಿಯಲ್ಲಿ ಪಾಲ್ಗೊಂಡು ನಗರದ ಕೊಳಿಕಾಟಾದಿಂದ ಸಂಗೋಳ್ಳಿ ವೃತ್ತದ ಮೂಲಕ ತೆರಳಿ ಬಸವೇಶ್ವರ ವೃತದಲ್ಲಿ ಸಂಪನ್ನ ಗೊಂಡಿತು.ಈ ಸಂದರ್ಭದಲ್ಲಿ ಡಿ,ವಾಯ್,ಎಸ್,ಪಿ, ದೂದಪೀರ್ ಮುಲ್ಲಾ ಸಿ,ಪಿ,ಆಯ್, ಗೋಪಾಲ ರಾಥೋಡ, ನಗರ ಪಿ,ಎಸ್,ಐ, ,ಕೆ.ವಾಲಿಕಾರ, ಗ್ರಾಮೀಣ ಪಿ,ಎಸ್,ಐ, ಕಿರಣ ಮೊಹಿತೆ ಸೇರಿದಂತೆ ನ್ಯಾಯವಾದಿಗಳು,ಶಾಲಾ ವಿದ್ಯಾರ್ಥಿಗಳು, ಪತ್ರಕರ್ತರು ಈ ಜಾಥಾದಲ್ಲಿ ಬಾಗಿಯಾಗಿದ್ದರು.

Tags: