ಸಮಾಜದಲ್ಲಿ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ , ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಅಶೋಕ್ ತೀರ್ಥ ಎಂಬ ರೈತ ಸಾವಯವ ಕೃಷಿ ಪದ್ಧತಿಯಲ್ಲಿ ಹನಿ ನೀರಾವರಿ ಯೋಜನೆ ಮುಖಾಂತರ 86032 ತಳಿಯ ಕಬ್ಬು ಬೆಳೆಸಿ ಒಂದು ಏಕ ಕ್ಷೇತ್ರದಲ್ಲಿ 125 ಟನ್ ಕಬ್ಬು ಬೆಳೆದು ಎಲ್ಲ ರೈತರಿಗೆ ಮಾದರಿಯಾಗಿದ್ದಾರೆ.
ರೈತ ಅಶೋಕ್ ತೀರ್ಥ ಇವರು ಶೇಡಬಾಳ ಪಟ್ಟಣ ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರೆಂದು ಕೆಲಸ ನಿರ್ವಹಿಸುತ್ತಿದ್ದಾರೆ, ಆ ಕೆಲಸದ ಜೊತೆ ತಮ್ಮ ಪಿತ್ರಾರ್ಜಿತ ಜಮೀನದಲ್ಲಿ ಕೃಷಿ ಮಾಡುತ್ತಿದ್ದಾರೆ. ತಮ್ಮ ಕೃಷಿಭೂಮಿಯಲ್ಲಿ 86032 ತಳಿಯ ಕಬ್ಬು ನಾಟಿ ಮಾಡಿ ಕಬ್ಬಿಗೆ ಹನಿ ನೀರಾವರಿ ಮುಖಾಂತರ ನೀರು ಪೂರೈಸಿದರು. ಕೃಷಿ ಕೆಲಸಕ್ಕೆ ನೆರೆಯ ಸಾಂಗ್ಲಿ ಜಿಲ್ಲೆಯ ಸಾವಯವ ಕೃಷಿ ಮಾರ್ಗದರ್ಶಕ ಅಜಿತ್ ಕಬಾಡೆ ಮಾರ್ಗದರ್ಶನ ಮಾಡಿದ್ದಾರೆ ಕಬ್ಬು ಬೆಳೆ ನಾಟಿಯಿಂದ ಕಟಾವಣೆ ವರೆಗೆ ಕೇವಲ 18 ಸಾವಿರ ರೂಪಾಯಿ ಮಾತ್ರ ವೆಚ್ಚ ಮಾಡಿದ್ದು ವಿಶೇಷವಾಗಿದೆ ಅಶೋಕ್ ತೀರ್ಥ ಇವರು ಬೆಳೆದ ಕಬ್ಬನ್ನು ವೀಕ್ಷಿಸಲು ಅನೇಕ ರೈತರು ತೋಟಕ್ಕೆ ಭೇಟಿ ನೀಡಿ ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದಾರೆ.
ಕಬ್ಬಿನಲ್ಲಿ 50 ಗಣಿಕಿಗಳು ಇರುವ ಬಗ್ಗೆ ಮಾರ್ಗದರ್ಶಕ ಅಜಿತ್ ಕಬಾಡೆ ರೈತರಿಗೆ ತಿಳಿಸಿದರು ರೈತರು ಕಬ್ಬು ಮತ್ತಿತರ ಬೆಳೆಗಳು ಕೇವಲ ಅಧಿಕ ನೀರು ರಾಸಾಯನಿಕ ಗೊಬ್ಬರು ಬಳಸಿ ಬೇಸಾಯ ಮಾಡದೆ ಕಡಿಮೆ ವೆಚ್ಚದಲ್ಲಿ ಕಡಿಮೆ ನೀರು ಬಳಸಿ ಸಾವಯವ ಕೃಷಿ ಪದ್ಧತಿಯಿಂದ ಬೇಸಾಯ ಮಾಡಿದರೆ ಲಾಭದಾಯಕ ಕೃಷಿಯ ಆಗಲು ಸಾಧ್ಯವಿದೆ, ಇದನ್ನು ಅಶೋಕ್ ತೀರ್ಥ ಎಂಬ ರೈತರು ಸಮಾಜಕ್ಕೆ ಮಾಡಿ ತೋರಿಸಿದ್ದಾರೆ ಎಂದರು .
ಆದುನಿಕ ರೈತ ಅಶೋಕ್ ತೀರ್ಥ ಅನುಕರಣೆ ಇನ್ನುಳಿದ ರೈತರು ಮಾಡಬೇಕೆಂದು ಹಿರಿಯ ರೈತರು ಮಾತನಾಡಿಕೊಳ್ಳುತ್ತಿದ್ದಾರೆ ಈ ವೇಳೆ ಪ್ರಗತಿಪರ ರೈತರ ರಾಜು ಗೇನಾಪಗೋಳ, ಬಾಳು ಸಮಾಜ್, ಜಬ್ಬಾರ್ ಕಿಚಡೇ ಮುಂತಾದ ರೈತರು ಇದ್ದರು.
ಸುಕುಮಾರ್ ಬನ್ನೂರೆ
ಇನ್ ನ್ಯೂಸ್ ಕಾಗವಾಡ